ಹತ್ಯೆಗೆಯಾದ ಪೊಲೀಸರ ಸ್ಮರಣಾರ್ಥ ಹುತಾತ್ಮ ದಿನಾಚರಣೆ: ಸಾಯಿಕುಮಾರ್

KannadaprabhaNewsNetwork | Published : Oct 25, 2024 12:57 AM

ಸಾರಾಂಶ

ತರೀಕೆರೆ, 21 ಅಕ್ಟೊಬರ್1959 ರಲ್ಲಿ ಲಡಾಕ್ ಪೋಲೀಸರ ಮೇಲೆ ಚೈನಾದವರು ನಡೆಸಿದ ದುಷ್ಕೃತ್ಯದಲ್ಲಿ ಸುಮಾರು 10 ಪೊಲೀಸರು ಹತ್ಯೆಯಾದರು. ಈ ದಿನವನ್ನು ಪ್ರತಿ ವರ್ಷ ಪೊಲೀಸ್ ಹುತಾತ್ಮರ ದಿನಾಚರಣೆ ಗೌರವಾರ್ಥ ಆಚರಿಸಲು 1962 ರಲ್ಲಿ ನಡೆದ ಪೊಲೀಸ್ ಆಫೀಸರ್ಸ್ ಕಾನ್ಫರೆನ್ಸ್ ನಲ್ಲಿ ನಿರ್ಧರಿಸಲಾಯಿತು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸಾಯಿಕುಮಾರ್ ಎ.ಎಸ್. ಹೇಳಿದರು.

ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ವತಿಯಿಂದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

21 ಅಕ್ಟೊಬರ್1959 ರಲ್ಲಿ ಲಡಾಕ್ ಪೋಲೀಸರ ಮೇಲೆ ಚೈನಾದವರು ನಡೆಸಿದ ದುಷ್ಕೃತ್ಯದಲ್ಲಿ ಸುಮಾರು 10 ಪೊಲೀಸರು ಹತ್ಯೆಯಾದರು. ಈ ದಿನವನ್ನು ಪ್ರತಿ ವರ್ಷ ಪೊಲೀಸ್ ಹುತಾತ್ಮರ ದಿನಾಚರಣೆ ಗೌರವಾರ್ಥ ಆಚರಿಸಲು 1962 ರಲ್ಲಿ ನಡೆದ ಪೊಲೀಸ್ ಆಫೀಸರ್ಸ್ ಕಾನ್ಫರೆನ್ಸ್ ನಲ್ಲಿ ನಿರ್ಧರಿಸಲಾಯಿತು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸಾಯಿಕುಮಾರ್ ಎ.ಎಸ್. ಹೇಳಿದರು.

ಇಂಟರ್‌ ನ್ಯಾಷನಲ್ ಲಯನ್ಸ್ ಕ್ಲಬ್ ತರೀಕೆರೆಯಿಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಯಲ್ಲಿ ಮಾತನಾಡಿದ ಅವರು, ಪೊಲೀಸ್ ಎಂದರೇನು ಪಿ ಅದು ಪಬ್ಲಿಕ್. ಓ ಅಂದರೆ ಆಫೀಸರ್ಸ್, ಎಲ್ ಅಂದರೆ ಲೀಗಲ್ ಐ ಅಂದರೆ ಇನ್ವೆಸ್ಟಿಗೇಷನ್, ಸಿ ಅಂದರೆ ಕ್ರಿಮಿನಲ್, ಇ ಅಂದರೆ ಎಮರ್ಜೆನ್ಸಿಸ್ ಅಂತ ವಿವರಿಸಿದರು. ನಾವೆಲ್ಲ ಸುಖವಾಗಿ ನಿದ್ರೆ ಮಾಡುವಾಗ ನಮ್ಮನ್ನು ಕಾಯುತ್ತಾರೆ. ಅವರ ಸುಖ ದುಃಖಗಳನ್ನು ಬದಿಗೊತ್ತಿ ಸಮಾಜದ ರಕ್ಷಣೆ ಮಾಡುತ್ತಾರೆ ಇಂತಹವರನ್ನು ನಾವು ದೇವರ ರೀತಿ ನೋಡಬೇಕು ಎಂದು ಹೇಳಿದರು.ಠಾಣೆಯ ಪೊಲೀಸ್ ಅಧಿಕಾರಿ ನಾಗೇಂದ್ರ ನಾಯಕ್ ಮಾತನಾಡಿ ತರೀಕೆರೆ ಸಂಘ ಸಂಸ್ಥೆಗಳು ಅದರಲ್ಲಿಯೂ ಇತ್ತೀಚಿಗೆ ಪ್ರಾರಂಭವಾದ ಲಯನ್ಸ್ ಸಂಸ್ಥೆ ಅನೇಕ ಜನಸೇವೆ ಮಾಡಿ ಎಲ್ಲರ ಮನೆಮಾತಾಗಿದೆ. ಈ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಲಯನ್ಸ್ ಸಂಸ್ಥೆಯವರು ಇದೆ ಮೊದಲ ಬಾರಿಗೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ನಾವು 24/7 ಕೆಲಸ ಮಾಡುತ್ತೇವೆ ನಮ್ಮನ್ನು ಇಷ್ಟೊಂದು ಪ್ರೀತಿಯಿಂದ, ವಿಶ್ವಾಸ ದಿಂದ ನೋಡಿದ್ದು ನಮಗೆ ಇನ್ನೂ ಹೆಚ್ಚು ಕೆಲಸ ಮಾಡಲು ಆಸಕ್ತಿ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎರಡು ನಿಮಿಷ ಮೌನ ಆಚರಣೆಯನ್ನು ಮಾಡಿ ಹುತಾತ್ಮರಾದ ಪೊಲೀಸ್ ರವರಿಗೆ ಗೌರವ ಸಲ್ಲಿಸಲಾಯಿತು. ಲಯನ್ ಸಂಸ್ಥೆ ರವಿಕುಮಾರ್, ಯೂಸುಫ್, ಟಿ.ಎನ್. ಮಂಜುನಾಥ್, ಪ್ರದೀಪ್, ಟಿ.ಎಂ. ಹರೀಶ್, ನಾಗಪ್ಪ ಲಮಾಣಿ, ತೈರಾಜ್, ಲಿಂಗಮೂರ್ತಿ, ನವೀನ್ ಹಾಗು ಠಾಣೆ ಇತರ ಅಧಿಕಾರಿಗಳು, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

24ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ವತಿಯಿಂದ ಏರ್ಪಾಡಾಗಿದ್ದ ಪೊಲೀಸ್ ಹುತಾತ್ಮ ರ ದಿನಾಚರಣೆ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರು ಸಾಯಿಕುಮಾರ್ ಎ.ಎಸ್.ಅವರು ಮಾತನಾಡಿದರು.ಠಾಣೆಯ ಪೊಲೀಸ್ ಅಧಿಕಾರಿ ನಾಗೇಂದ್ರ ನಾಯಕ್ ಮತ್ತಿತರರು ಇದ್ದರು.

Share this article