14ರಂದು ಹುತಾತ್ಮ ಪೊಲೀಸ್‌ ಅಧಿಕಾರಿಗಳ ಸ್ಮರಣೆ

KannadaprabhaNewsNetwork |  
Published : Aug 12, 2025, 12:30 AM IST
ಸಿಬ್ಬಂದಿಗಳ ಸ್ಮರಣ | Kannada Prabha

ಸಾರಾಂಶ

1992 ರಲ್ಲಿ ಕಾಡುಗಳ ನರಹಂತಕ ವೀರಪ್ಪನಿಂದ ಕಾರ್ಯಾಚರಣೆಯಲ್ಲಿ ಹೋರಾಡಿ ವೀರ ಮರಣವನ್ನು ಹೊಂದಿದ ಹುತಾತ್ಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಮರಣಾರ್ಥ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮಿಣ್ಯಂ ಗ್ರಾಮದ ಬಳಿ ಪೊಲೀಸ್ ಅಧಿಕಾರಿ ಸಿಬ್ಬಂದಿ ಸ್ಮಾರಕ ಬಳಿ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ.

ಹನೂರು ತಾಲೂಕಿನ ಮಿಣ್ಯಂ ಗ್ರಾಮದ ಬಳಿ ಪ್ರದೇಶದ ರಸ್ತೆಯಲ್ಲಿ ಕಾಡುಗಳ ನರಹಂತಕ ವೀರಪ್ಪನ್‌ನಿಂದ ಹುತಾತ್ಮರಾದ ದಿವಂಗತ ಎಸ್ಪಿ ಹರಿಕೃಷ್ಣ, ಪಿಎಸ್ಐ ಶಕೀಲ್ ಅಹ್ಮದ್, ಎಎಸ್ಐ ಎಸ್. ಬೆನಗೊಂಡ, ಪೇದೆಗಳಾದ ಅಪ್ಪಚ್ಚು, ಬಿ.ಎಸ್. ಸುಂದರ್, ಸಿ.ಎಂ. ಕಾಳಪ್ಪ 1992 ರಲ್ಲಿ ಕಾಡುಗಳ ನರಹಂತಕ ವೀರಪ್ಪನಿಂದ ಕಾರ್ಯಾಚರಣೆಯಲ್ಲಿ ಹೋರಾಡಿ ವೀರ ಮರಣವನ್ನು ಹೊಂದಿದ ಹುತಾತ್ಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಮರಣಾರ್ಥದ ಸ್ಮಾರಕದ ಬಳಿ 33 ವರ್ಷಗಳಿಂದ ಹುತಾತ್ಮ ದಿನಾಚರಣೆಯನ್ನು ಪೊಲೀಸ್ ಇಲಾಖೆ ಹಾಗೂ ಸರ್ಕಾರ ಆಚರಿಸುತ್ತಿದೆ.

ಕಾರ್ಯಚರಣೆ ವೇಳೆ ಮರಣವನ್ನು ಹೊಂದಿದ್ದ ಸೇನಾನಿಗಳ ಸೇವೆ ಅಮರರಾದರು ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿತ್ತು .. ಈ ಘಟನೆಯಾದ, ನಂತರ ಮಲೆ ಮಾದೇಶ್ವರ ಬೆಟ್ಟ ಸತ್ಯಮಂಗಲ ವಿವಿಧ ವೀರಪ್ಪನ್ ನೆಚ್ಚಿನ ತಾಣಗಳು ಆಗಿದ್ದವು ಈ ಭಾಗಕ್ಕೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೆಲಸ ಮಾಡಲು ಸಹ ಭಯಪಡುವುದು, ಭಯಪಟ್ಟು ತಮ್ಮ ಕೆಲಸವನ್ನು ಬಿಟ್ಟರು ಅಂತಹ ದಿನಗಳಲ್ಲಿ ವೀರ ಮರಣವನ್ನು ಹೊಂದಿದ ನಮ್ಮ ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಹುತಾತ್ಮರಾದ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರ ಸೇವೆ ಪೊಲೀಸ್ ಇಲಾಖೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ..ಅಧಿಕಾರಿಗಳ ಸ್ಮರಣೆ : ಪೊಲೀಸ್ ಇಲಾಖೆಯಲ್ಲಿ ವೀರಪ್ಪನ್ ಕಾರ್ಯಚರಣೆ ವೇಳೆಯಲ್ಲಿ ಮುಂಚೂಣಿಯಲ್ಲಿದ್ದ ಎಸ್ ಪಿ ಹರಿಕೃಷ್ಣ, ಶಕೀಲ್ ಅಹಮದ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಉತ್ತಮ ಕೆಲಸ ಮಾಡುವ ಮೂಲಕ ಈ ಭಾಗದಲ್ಲಿ ಜನಸಾಮಾನ್ಯರ ಜೊತೆ ಉತ್ತಮ ಬಾಂಧವ್ಯದೊಂದಿಗೆ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ 33 ವರ್ಷಗಳ ಹಿಂದೆ ನರಹಂತಕ ಕಾಡುಗಳ ದಂತಚೋರ, ವೀರಪ್ಪನ್ ಮೋಸದಿಂದ ಅಧಿಕಾರಿ ಸಿಬ್ಬಂದಿ ವರ್ಗದವರನ್ನು ಕಾರ್ಯಾಚರಣೆ ವೇಳೆ ಮರಣವನ್ನು ಹೊಂದಿರುವ ಬಗ್ಗೆ ಸ್ಮಾರಕದ ಬಳಿ ಕಾರ್ಯಕ್ರಮ ನಡೆಯಲಿದೆ.

ಕುಟುಂಬದವರು ಸಹ ಭಾಗಿ:

ಮಿಣ್ಯಂ ಗ್ರಾಮದ ಬಳಿ ಬರುವ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ ಹುತಾತ್ಮರಾದ ಸ್ಥಳದಲ್ಲಿ ನಿರ್ಮಾಣ ಮಾಡಿರುವ ಸ್ಮಾರಕದ ಬಳಿ ಕುಟುಂಬದವರು ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ದಿನಾಚರಣೆಯನ್ನು ಆಚರಿಸುವ ಮೂಲಕ ದಂತ ಚೋರ ಕುಖ್ಯಾತ ನರಹಂತಕ ವೀರಪ್ಪನಿಂದ ಹುತಾತ್ಮರಾದ ಕುಟುಂಬದವರನ್ನು ನೆನೆಯುವ ದಿನ ಹುತಾತ್ಮ ದಿನಾಚರಣೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಕಲ ಸಿದ್ಧತೆಯು ಪೊಲೀಸ್ ಇಲಾಖೆ ಮಾಡಿಕೊಂಡಿದೆ.

ಹುತಾತ್ಮ ದಿನಾಚರಣೆಗೆ ಗ್ರಾಮಸ್ಥರ ಭಾಗಿ : 14.08.2025 ರ ಗುರುವಾರ ನಡೆಯುವ ಪೊಲೀಸರ ಹುತಾತ್ಮ ದಿನಾಚರಣೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಹಿರಿಯ ನಾಗರಿಕರು ಸಹ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಹುತಾತ್ಮ ಸ್ಮಾರಕದ ಬಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮನ ಸಲ್ಲಿಸುವರು.11ಸಿಎಚ್‌ಎನ್‌11

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ