ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಸಂದರ್ಭದಲ್ಲಿ ಎಲ್ಲರೂ ಸೇರಿ ಸಮರಂಭ ನಡೆಸುವ ಮೂಲಕ ಮಕ್ಕಳಲ್ಲಿ ಸನಾತನ ಹಿಂದು ಸಂಸ್ಕೃತಿ ಹಾಗೂ ಪರಂಪರೆಯ ವಿಷಯಗಳನ್ನು ಬಿತ್ತುವದಕ್ಕೋಸ್ಕರ ಸಮಾರಂಭ ನಡೆಸಿ ಗಮನ ಸೆಳೆದರು.
16 ವರ್ಷದೊಳಗಿನ ಮಕ್ಕಳಿಗಾಗಿ ನಡೆದ ಹನುಮಾನ್ ಚಾಲೀಸಾ ಪಠಣ ಸ್ಪರ್ಧೆಯಲ್ಲಿ ಶ್ರೀಗೌರಿ, ಅಂಜಲಿ ರೆಡ್ಡಿ ಹಾಗೂ ಶ್ರದ್ಧಾ ಬಹುಮಾನ ಪಡೆದರು. ಮಕ್ಕಳಿಗಾಗಿ ನಡೆದ ಹನುಮಂತ ದೇವರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಚೈತ್ರಾ, ಸುಮೇಧ ಹಾಗೂ ಇಶಿಕಾ ಬಹುಮಾನ ಪಡೆದರು.ರಮೇಶ ಕುಲಕರ್ಣಿ ಮಾತನಾಡಿ, ಇಂತಹ ಸಮಾರಂಭಗಳಿಂದ. ಹನುಮಾನ್ ಚಾಲೀಸಾ ಪಠಣದಿಂದ ಮಕ್ಕಳಲ್ಲಿ ಸನಾತನ ಧರ್ಮ ಜಾಗೃತಿ ಮೂಡುತ್ತದೆ ಎಂದರಲ್ಲದೆ ಕಲಬುರಗಿ ಸಮಾರಂಭದ ಯಶಸ್ಸಿಗೆ ಕಾರಣರಾದವರಿಗೆ ಅಭಿನಂದಿಸಿದರು.
ಇಸ್ಕಾನ್‌ನ ಬಸಮ್ಮ, ಬಡಾವಣೆಯ ಹಿರಿಯರಾದ ಚೌಡೇಕರ್ ಪಾಲ್ಗೊಂಡು ಮಕ್ಕಳಿಗೆ ಶುಭ ಕೋರಿದರು. ಪಾಲಿಕೆ ಮಾಜಿ ಸದಸ್ಯ ಹುಲಿಗೆಪ್ಪ ಕನಕಗಿರಿ ಮಾತನಾಡುತ್ತ ಹನಮಾನ್ ಚಾಲೀಸ್ ಹಾಗೂ ತುಲಸಿದಾಸರ ಕುರಿತಾದ ಅನೇಕ ಸಂಗತಿಗಳನ್ನು ವಿವರಿಸುತ್ತ ತುಂಬ ಪ್ರಭಾವವಿರುವ ಹನುಮಾನ್ ಚಾಲೀಸಾ ಬದುಕಿನ ಸಕಲ ಸಂಕಷ್ಟಗಳ ನಿವಾರಕ ಮಂತ್ರ ಎಂದರಲ್ಲದೆ ಮಕ್ಕಳು ನಿತ್ಯ ಪಠಣ ಮಾಡೋದರಿಂದ ಸರಿ ದಾರಿಯಲ್ಲಿ ಸಾಗುತ್ತಾರೆಂದರು.
ಸಮಾರಂಭದಲ್ಲಿ ಯುವತಿಯರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಲಕ್ಷ್ಮೀ ಲೋಖಂಡೆ, ಸುಜಾತಾ, ಬಸಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.