ಹತ್ತು ಮಂಟಪಗಳು ಒಂದೇ ದಿನ ಸಾಮೂಹಿಕ ವಿಸರ್ಜನೆ

KannadaprabhaNewsNetwork |  
Published : Sep 21, 2026, 02:30 AM IST
ಚಿತ್ರ :  20ಎಂಡಿಕೆ3 :  ಗೋಣಿಕೊಪ್ಪಲುವಿನಲ್ಲಿ ನಡೆದಅದ್ಧೂರಿಗಣೇಶೋತ್ಸವ | Kannada Prabha

ಸಾರಾಂಶ

ಗೋಣಿಕೊಪ್ಪ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಶನಿವಾರ ನಡೆಯಿತು. ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಗೋಣಿಕೊಪ್ಪ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಶನಿವಾರ ನಡೆಯಿತು. ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗೋಣಿಕೊಪ್ಪದಗಣೇಶೋತ್ಸವದ ಇತಿಹಾಸದಲ್ಲಿಇದೇ ಮೊದಲ ಬಾರಿಗೆ ಹತ್ತು ಮಂಟಪಗಳು ಒಂದೇ ದಿನ ಸಾಮೂಹಿಕ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಹೊಸ ದಾಖಲೆ ನಿರ್ಮಿಸಿತು.ಈ ಹಿಂದೆ ಬಡಾವಣೆವಾರು ಪ್ರತ್ಯೇಕವಾಗಿ ನಡೆಯುತ್ತಿದ್ದ ವಿಸರ್ಜನಾಕಾರ್ಯಕ್ರಮಕ್ಕೆ ಸಾಮೂಹಿಕ ಸ್ವರೂಪ ನೀಡುವ ಪ್ರಯತ್ನ ಇದೀಗ ಫಲ ನೀಡಿದೆ. ಕಳೆದ ವರ್ಷ ನಾಲ್ಕು ಮಂಟಪಗಳು ಪಾಲ್ಗೊಂಡಿದ್ದರೆ, ಈ ಬಾರಿ ಆ ಸಂಖ್ಯೆ ಹತ್ತಕ್ಕೆಏರಿರುವುದು ಸಾಮೂಹಿಕ ಆಚರಣೆಯತ್ತ ಒಲವನ್ನು ತೋರಿಸಿದೆ.ಗಣೇಶ ವಿಸರ್ಜನೆಗೆ ಹೊಸ ಮಾದರಿ ಕಲ್ಪಿಸುವ ಉದ್ದೇಶದಿಂದ ಪತ್ರಕರ್ತ ಜಗದೀಶ್‌ ಜೋಡುಬೀಟಿ, ಸತೀಶ್ ಸಿಂಗಿ ಹಾಗೂ ಗ್ರಾಪಂ ಮಾಜಿ ಸದಸ್ಯರಾದ ರಾಜೇಶ್ ಮತ್ತು ಸುರೇಶ್‌ ರೈ ನಡೆಸಿದ ಪ್ರಯತ್ನ ಕಳೆದ ವರ್ಷದಿಂದಲೇ ಹೊಸ ರೂಪ ಪಡೆಯತೊಡಗಿತ್ತು. ವಿವಿಧ ಬಡಾವಣೆಗಳ ಗಣೇಶೋತ್ಸವ ಸಮಿತಿಗಳನ್ನು ಒಂದೇ ವೇದಿಕೆಗೆ ತಂದು, ಒಗ್ಗಟ್ಟಿನಿಂದ ವಿಸರ್ಜನೆ ನಡೆಸುವ ಚಿಂತನೆಗೆ ಈ ಬಾರಿ ಮತ್ತಷ್ಟು ಬಲ ದೊರೆತಿದೆ.

ಜಗದೀಶ್‌ ಜೋಡುಬೀಟಿ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ನಗರಗಣೇಶೋತ್ಸವ ಸಮಿತಿ ನಡೆಸಿದ ಸಭೆಗಳು, ಸಮಿತಿಗಳೊಂದಿಗೆ ನಡೆದ ಚರ್ಚೆಗಳು ಹಾಗೂ ಕೈಗೊಂಡ ಒಮ್ಮತದ ನಿರ್ಧಾರಗಳು ಸಾಮೂಹಿಕ ವಿಸರ್ಜನೆ ಯಶಸ್ವಿಯಾಗಲು ಪ್ರಮುಖಕಾರಣವಾದವು.ಪ್ರಸನ್ನಗಣಪತಿ ಸೇವಾ ಸಂಘ, ಭಗತ್‌ಸಿಂಗ್ ಯುವಕ ಸಂಘ, ಉಮಾಮಹೇಶ್ವರಿ ದೇವಸ್ದಾನ, ವಿನಾಯಕ ಭಕ್ತ ಮಂಡಳಿ, ನೇತಾಜಿ ಭಕ್ತ ಮಂಡಳಿ, ವಿವೇಕಾನಂದ ಬಡಾವಣೆ ನಾಗರಿಕ ವೇದಿಕೆ, ಹರಿಶ್ಚಂದ್ರಪುರ, ಇಂಡಿಯನ್‌ಯುವಕ ಸಂಘ ಸೀಗೆತೋಡು, ಸಿದ್ದಿ ವಿನಾಯಕಯುವಸೇನೆ ಹರಿಚಂದ್ರಪುರ ವಿನಾಯಕಯುವಕ ಸಂಘ ಮೂರನೇ ವಿಭಾಗ, ಸೇರಿದಂತೆ ಹತ್ತು ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಫ್ ಕಲಾ ಒಕ್ಕೂಟ ಕೊಡಗಿನಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ
ವಿದ್ಯಾರ್ಥಿಗಳಿಗೆ ಗಾಡ್ರೆಜ್, ಟ್ರ್ಯಾಕ್ ಶೂಟ್ ವಿತರಣೆ