ಯುಗಾದಿಯಿಂದ ಪ್ರಾರಂಭವಾಗುವ ವಿಶ್ವಾವಸು ನಾಮ ಸಂವತ್ಸರದಲ್ಲಿ ಅನೇಕ ರಾಜಕೀಯ ಗೊಂದಲ ಕಾಣಬಹುದು, 2025ನೇ ಸಾಲಿನಲ್ಲಿ ರಾಜಕಾರಣದಲ್ಲಿ ಭಾರೀ ಗೊಂದಲಗಳು ಉಂಟಾಗಲಿವೆ. ರಾಜ್ಯ ಮಾತ್ರವಲ್ಲದೇ ರಾಷ್ಟ್ರದ ರಾಜಕಾರಣದಲ್ಲೂ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ ಎಂದು ಹೊಸ ಬಬಲಾದಿ ಮಠದ ಸದಾಶಿವ ಮುತ್ಯಾ, ಶಿವರುದ್ರಯ್ಯ ಮುತ್ಯಾ ಶನಿವಾರ ಕಾಲಜ್ಞಾನ ನುಡಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಯುಗಾದಿಯಿಂದ ಪ್ರಾರಂಭವಾಗುವ ವಿಶ್ವಾವಸು ನಾಮ ಸಂವತ್ಸರದಲ್ಲಿ ಅನೇಕ ರಾಜಕೀಯ ಗೊಂದಲ ಕಾಣಬಹುದು, 2025ನೇ ಸಾಲಿನಲ್ಲಿ ರಾಜಕಾರಣದಲ್ಲಿ ಭಾರೀ ಗೊಂದಲಗಳು ಉಂಟಾಗಲಿವೆ. ರಾಜ್ಯ ಮಾತ್ರವಲ್ಲದೇ ರಾಷ್ಟ್ರದ ರಾಜಕಾರಣದಲ್ಲೂ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ ಎಂದು ಹೊಸ ಬಬಲಾದಿ ಮಠದ ಸದಾಶಿವ ಮುತ್ಯಾ, ಶಿವರುದ್ರಯ್ಯ ಮುತ್ಯಾ ಶನಿವಾರ ಕಾಲಜ್ಞಾನ ನುಡಿದರು.ಜಾತ್ರೆಯ ಪ್ರಯುಕ್ತ ಕಾಲಜ್ಞಾನ ಸಾರುವ ಪದ್ಧತಿ ಇದ್ದು, ಮುಂಬರುವ ಯುಗಾದಿಯಿಂದ ಮುಂದಿನ ಯುಗಾದಿವರೆಗಿನ ಜನಜೀವನ ಹಾಗೂ ಮಳೆ-ಬೆಳೆ, ಪ್ರಕೃತಿ ವಿಕೋಪಗಳ ಬಗ್ಗೆ ಕಾಲಜ್ಞಾನದ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಶ್ರೀಗಳು ಭಕ್ತರಿಗೆ ತಿಳಿಸುತ್ತಾರೆ.
ಕಾಲಜ್ಞಾನ ಸಾರಿದ ಶ್ರೀಗಳು ಅನೇಕ ವರ್ಷಗಳ ಹಿಂದೆ ಬರೆದಿಟ್ಟಿರುವ ಕಾಲಜ್ಞಾನ ಇಂದಿಗೂ ಸುಳ್ಳಾಗಿಲ್ಲ. ಕಾಲಜ್ಞಾನದಲ್ಲಿ ಬರೆದಂತೆ ನಡೆಯುತ್ತಿದೆ. ಈ ಬಾರಿ ಸಾಧಾರಣ, ಉತ್ತಮ, ಭಾರೀ ಪ್ರಮಾಣದಲ್ಲಿ ಮಳೆ ಆಗಲಿದೆ. 10 ಆಣೆ ಮಳೆ, 7 ಆಣೆ ಬೆಳೆ ಇರಲಿದೆ. ಮಂಜು ಕವಿದ ವಾತಾವರಣ ಇರಲಿದ್ದು, ಜನ-ಜಾನುವಾರುಗಳಿಗೆ ತೊಂದರೆಯಾಗಲಿದೆ. ಧಾನ್ಯಗಳ ಬೆಲೆ ಹೆಚ್ಚಾಗಲಿದೆ. ಜಾತಿಗಳ ಕಲಹ ಹೆಚ್ಚಲಿದೆ. ಪ್ರವಾಹ ಆತಂಕ ಎದುರಾಗಲಿದೆ. ವಾಹನಗಳ ಅಪಘಾತಗಳ ಸಂಖ್ಯೆ ಹೆಚ್ಚಲಿದೆ. ಬುದ್ದಿವಂತರಿಗೆ ಬೆಲೆ ಹೆಚ್ಚುವುದು, ಸಮುದ್ರದಲ್ಲಿ ವಿಕೋಪ ಉಂಟಾಗಲಿದೆ. ಗಟ್ಟಿ ಬೀಜ ಉಳಿದು, ಪೊಳ್ಳು ಬೀಜ ಹಾರಿಹೋಗಲಿದೆ ಎಂದರು. ನೂರಾರು ಮಠದ ಭಕ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.