ಮಂಗಳೂರಿನ ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದ ಸಿಎಸ್‌ಟಿ ಮೂರನೇ ಪ್ಲಾಂಟ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಇದರಿಂದ ಎಂಆರ್‌ಪಿಎಲ್ ಸುತ್ತಮುತ್ತ ವಾಸಿಸುತ್ತಿರುವ ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಎಂಆರ್‌ಪಿಎಲ್ ಆಸುಪಾಸಿನ ಸುಮಾರು 3 ಕಿಲೋಮೀಟರ್ ವಿಸ್ತೀರ್ಣದಲ್ಲಿ ಇರುವ ಕಟ್ಟಡ ಮನೆಗಳಿಗೆ ಹಾನಿಯಾಗಿದ್ದು ಈ ಹಾನಿಯು ಈ ಸ್ಪೋಟದ ಅಗಾಧತೆಯನ್ನು ತಿಳಿಸುತ್ತದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್‌ಐ ಮತ್ತು ಸಿಪಿಎಂ ಒತ್ತಾಯಿಸಿದೆ.
ಮಂಗಳೂರು : ಮಂಗಳೂರಿನ ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದ ಸಿಎಸ್‌ಟಿ ಮೂರನೇ ಪ್ಲಾಂಟ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಇದರಿಂದ ಎಂಆರ್‌ಪಿಎಲ್ ಸುತ್ತಮುತ್ತ ವಾಸಿಸುತ್ತಿರುವ ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಎಂಆರ್‌ಪಿಎಲ್ ಆಸುಪಾಸಿನ ಸುಮಾರು 3 ಕಿಲೋಮೀಟರ್ ವಿಸ್ತೀರ್ಣದಲ್ಲಿ ಇರುವ ಕಟ್ಟಡ ಮನೆಗಳಿಗೆ ಹಾನಿಯಾಗಿದ್ದು ಈ ಹಾನಿಯು ಈ ಸ್ಪೋಟದ ಅಗಾಧತೆಯನ್ನು ತಿಳಿಸುತ್ತದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್‌ಐ ಮತ್ತು ಸಿಪಿಎಂ ಒತ್ತಾಯಿಸಿದೆ.
ಎಂಆರ್‌ಪಿಎಲ್ ವಿಸ್ತರಿತ ಯೋಜನೆಯದ ಕೋಕ್ ಸಲ್ಫರ್ ಘಟಕ ಆರಂಭಗೊಂಡ ಸಂದರ್ಭದಲ್ಲಿಯೇ ಡಿವೈಎಫ್‌ಐ ಇದನ್ನು ವಿರೋಧಿಸಿದ್ದು ಮತ್ತು ಇದರ ಅಪಾಯದ ಮುನ್ಸೂಚನೆಯನ್ನು ಕೂಡ ನೀಡಿತ್ತು. ಆದರೆ ಸರ್ಕಾರ ಈವರೆಗೂ ಈ ಕುರಿತು ವಹಿಸಿರುವ ಮೌನ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಡಿವೖಎಫ್ಐ ಆರೋಪಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.