ಬೃಹತ್ ಲಾರ್ವಾ ಸಮೀಕ್ಷಾ ಅಭಿಯಾನ-2024

KannadaprabhaNewsNetwork |  
Published : Aug 07, 2024, 01:04 AM IST
ಬೃಹತ್ ಲಾರ್ವಾ ಸಮೀಕ್ಷಾ ಅಭಿಯಾನ-2024 | Kannada Prabha

ಸಾರಾಂಶ

ತರೀಕೆರೆ ಸಮೀಪದ ಬಾವಿಕೆರೆ ಗ್ರಾಮದಲ್ಲಿ ನಡೆದ ಬೃಹತ್ ಲಾರ್ವಾ ಸಮೀಕ್ಷಾ ಅಭಿಯಾನ-2024 ಕಾರ್ಯಕ್ರಮಕ್ಕೆ ಬಾವಿಕೆರೆ ಗ್ರಾ ಪಂ ಅಧ್ಯಕ್ಷೆ ರೂಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ಶಾಸಕ ಜಿ.ಎಚ್. ಶ್ರೀನಿವಾಸ ನಿರ್ದೇಶನ ಹಾಗೂ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್ ಆದೇಶದಂತೆ ಭಾನುವಾರ ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡೆಂಘೀ ನಿಯಂತ್ರಿಸಲು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕಂದಾಯ, ಆರೋಗ್ಯ ಇಲಾಖೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಲಾರ್ವಾ ಸಮೀಕ್ಷಾ ಅಭಿಯಾನವನ್ನು ಭಾವಿಕೆರೆ ಗ್ರಾಪಂ ಯಲ್ಲಿ ಹಮ್ಮಿಕೊಳ್ಳಲಾಯಿತು.

ಗ್ರಾಪಂ ಅಧ್ಯಕ್ಷೆ ರೂಪ ಅವರು, ಬೃಹತ್ ಲಾರ್ವಾ ಸಮೀಕ್ಷಾ ಅಭಿಯಾನ-2024ತ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಶಾಲಾ ಮಕ್ಕಳು ತಂಡಗಳನ್ನು ರಚಿಸಿಕೊಂಡು ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಎಲ್ಲಾ ಗ್ರಾಮಗಳ ಮನೆ-ಮನೆ ಭೇಟಿ ಮಾಡಿ ಡೆಂಗೀ ಜ್ವರ ಹರಡುವ ಈಡೀಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ಗುರುತಿಸಿ, ಅವುಗಳನ್ನು ನಾಶಪಡಿಸಿ ಸಾರ್ವಜನಿಕರಿಗೆ ಡೆಂಘೀ ಜ್ವರದ ಕುರಿತು ಆರೋಗ್ಯ ಶಿಕ್ಷಣ ನೀಡಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ, ಮಂಗಳವಾರ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಸುಮಾರು 42,311 ಮನೆಗಳನ್ನು ಭೇಟಿ ಮಾಡಲಾಯಿತು, ಇವುಗಳಲ್ಲಿ 1164 ಮನೆಗಳಲ್ಲಿ ಈಡಿಸ್ ಲಾರ್ವಾ ಕಂಡುಬಂದಿದ್ದು ಎಲ್ಲಾ ಈಡಿಸ್ ಲಾರ್ವ ತಾಣಗಳನ್ನು ನಾಶ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಪಂ ಸದಸ್ಯರು ವೆಂಕಟೇಶ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್, ಚರಣ್ ರಾಜ್, ಸಿಡಿಪಿಒ, ಯತೀರಾಜ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರು, ಡಾ.ಪ್ರಸನ್ನ ಕೆ.ಆರ್, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮುಡುಗೋಡು, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಾಲಾ ಮಕ್ಕಳು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ