ಬೇತಮಂಗಲದಲ್ಲಿ ಅದ್ಧೂರಿ ಕರಗ

KannadaprabhaNewsNetwork |  
Published : Apr 09, 2025, 12:33 AM IST
೮ಕೆಎಲ್‌ಆರ್-೪ಬೇತಮಂಗಲ ದ್ರೌಪತಾಂಭ ಧರ್ಮರಾಯಸ್ವಾಮಿ ಹೂವಿನ ಕರಗದ ಪೂಜಾರಿ ಬಸ್‌ನಿಲ್ದಾಣದ ಮುಂಭಾಗ ನಿರ್ಮಿಸಿದ್ದ ವೇದಿಕೆಯಲ್ಲಿ ವಿವಿಧ ಭಂಗಿಗಳಲ್ಲಿ ನರ್ತಿಸುತ್ತಿರುವ ಕರಗದ ಪೂಜಾರಿ ಬೇತಮಂಗಲ ಕೃಷ್ಣಮೂರ್ತಿ. | Kannada Prabha

ಸಾರಾಂಶ

ಸೋಮವಾರ ರಾತ್ರಿ ಕರಗದ ಪೂಜಾರಿ ಕೃಷ್ಣಮೂರ್ತಿ ಕರಗದಮನನ್ನು ತಲೆಮೇಲೆ ಹೊತ್ತು ದೇವಾಲಯದಿಂದ ಹೊರಗೆ ಬರುತ್ತಿದ್ದಂತೆ ಭಕ್ತರು ಮಲ್ಲಿಗೆ ಹೂಗಳನ್ನು ಚೆಲ್ಲುವ ಮೂಲಕ ಗೋವಿಂದ ನಾಮ ಸ್ಮರಣೆ ಮಾಡುತ್ತಾ ಭಾವಪರಶರಾದರು. ಬಸ್ ನಿಲ್ದಾಣದ ಬಳಿಯ ವೇದಿಕೆಯಲ್ಲಿ ವಿವಿದ ಭಂಗಿಗಳಲ್ಲಿ ನೃತ್ಯ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರನ್ನು ರಂಜಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಕರಗದ ತವರೂರು ಎಂದೇ ಪ್ರಸಿದ್ಧಿಯಾಗಿರುವ ಬೇತಮಂಗಲ ದ್ರೌಪತಾಂಬ ಧರ್ಮರಾಯಸ್ವಾಮಿ ಹೂವಿನ ಕರಗ, ವಿಜಯೇಂದ್ರ ಸ್ವಾಮಿ ಪುಷ್ಪ ಪಲ್ಲಕ್ಕಿ ಹಾಗೂ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ಮತ್ತು ಜನ ಜಾತ್ರೆಯು ಸಂಭ್ರಮ, ಸಡಗರದಿಂದ ನಡೆಯಿತು.ಶ್ರೀ ರಾಮನವಮಿ ದಿನದಂದು ನಡೆಯುವ ಈ ಎಲ್ಲ ದೈವೀ ಕಾರ್ಯಗಳು ಭಕ್ತರ ಪಾಲಿಗೆ ಬಹು ದೊಡ್ಡ ಹಬ್ಬವಾಗಿದೆ. ಬೇತಮಂಗಲದಲ್ಲಿ ಸುಮಾರು ೨೨ ವರ್ಷದಿಂದ ನಿರಂತರವಾಗಿ ಕರಗವನ್ನು ಹೊರುತ್ತಿದ್ದ ರಾಮಚಂದ್ರ(ಚಂದ್ರಿ) ಅವರು ಅನಾರೋಗ್ಯದ ಕಾರಣ ಈ ಭಾರಿಯ ಕರಗವನ್ನು ಹೊರಲಿಲ್ಲ.

ಕರಗ ಹೊತ್ತ ಪೂಜಾರಿ ಕೃಷ್ಣಮೂರ್ತಿ

ಈ ಹಿನ್ನೆಲೆಯಲ್ಲಿ ಪೂಜಾರಿ ಕೃಷ್ಣಮೂರ್ತಿ ಮತ್ತೆ ತಾಯಿ ದ್ರೌಪತಂಬ ದೇವಿಯ ಕರಗವನ್ನು ಹೊತ್ತು ನಗರದ ಮನೆಮನೆಗೆ ತೆರಳಿ ಪೂಜೆ ಸ್ವೀಕರಿಸಿ ಪ್ರಮುಖ ವೇದಿಕೆಗಳಲ್ಲಿ ತಮಟೆ ಮತ್ತು ನಾದಸ್ವರಕ್ಕೆ ತಕ್ಕಂತೆ ನೃತ್ಯ ಮಾಡಿದರು.

ಸೋಮವಾರ ರಾತ್ರಿ ಕರಗದ ಪೂಜಾರಿ ಕೃಷ್ಣಮೂರ್ತಿ ಕರಗದಮನನ್ನು ತಲೆಮೇಲೆ ಹೊತ್ತು ದೇವಾಲಯದಿಂದ ಹೊರಗೆ ಬರುತ್ತಿದ್ದಂತೆ ಭಕ್ತರು ಮಲ್ಲಿಗೆ ಹೂಗಳನ್ನು ಚೆಲ್ಲುವ ಮೂಲಕ ಗೋವಿಂದ ನಾಮ ಸ್ಮರಣೆ ಮಾಡುತ್ತಾ ಭಾವಪರಶರಾದರು. ಬಸ್ ನಿಲ್ದಾಣದ ಬಳಿಯ ವೇದಿಕೆಯಲ್ಲಿ ವಿವಿದ ಭಂಗಿಗಳಲ್ಲಿ ನೃತ್ಯ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರನ್ನು ರಂಜಿಸಿದರು. ಆರ್ಕೆಸ್ಟ್ರಾ ಇಲ್ಲದೆ ಜನರಿಗೆ ನಿರಾಸೆ

ಪ್ರತಿವರ್ಷದಂತೆ ಈ ವರ್ಷವೂ ಸಹ ಗ್ರಾಮದಲ್ಲಿ ಶ್ರೀರಾಮನವಮಿ ದಿನದಂದು ಕರಗ ಮಹೋತ್ಸವ ಮತ್ತು ಪುಷ್ಪಪಲ್ಲಕಿ ಅಂಗವಾಗಿ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸುತ್ತಿದ್ದರು, ಅದರಂತೆ ಈ ವರ್ಷವೂ ಪೊಲೀಸ್ ಠಾಣೆಯ ಪಕ್ಕದಲ್ಲಿ ವೈ.ಸಂಪಂಗಿ ಅಭಿಮಾನಿಗಳ ಬಳಗ, ಶಾಸಕಿ ರೂಪಕಲಾ ಶಶಿಧರ್ ಅಭಿಮಾನಿ ಬಳಗ, ಸಮಾಜ ಸೇವಕ ಮೋಹನ್ ಕೃಷ್ಣ ಅಭಿಮಾನಿ ಬಳಗ ಮತ್ತು ಕೆಇಬಿ ವೃತ್ತದಲ್ಲಿ ಸಮಾಜ ಸೇವಕ ರಾಜಪ್ಪ ಆರ್ಕೇಸ್ಟ್ರಾ ಕಾರ್ಯಕ್ರಮ ಆಯೋಜಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...