ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಬಳಿಕ ಹೆಸ್ಕಾಂ ಎ.ಇ.ಇ ವ್ಹಿ,ಎನ್ ಮರಿಕಟ್ಟಿ ಮತ್ತು ತೇರದಾಳ ತಹಸೀಲ್ದಾರ್ ವಿಜಯಕುಮಾರ ಕಡಕೋಳ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು.
ರೈತರಿಗೆ, ನೇಕಾರರಿಗೆ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳನ್ನು ಸರ್ಕಾರ ನಿರ್ವಹಿಸದಂತೆ ಖಾಸಗಿಯವರು ನಡೆಸಲು ಸಾಧ್ಯವಿಲ್ಲ. ಸರ್ಕಾರಿ ಸಂಸ್ಥೆಯನ್ನು ಖಾಸಗಿ ಕಂಪನಿಗೆ ವಹಿಸುವುದರಿಂದ ರೈತರ ಬದುಕಿಗೆ ಬೆಂಕಿ ಇಟ್ಚಂತಾಗುತ್ತದೆ. ಈಗಾಗಲೇ ಸಾಲದಲ್ಲಿ ಹುಟ್ಟಿ ಸಾಲದಲ್ಲಿಯೇ ಸಾಯುತ್ತಿರುವ ರೈತರಿಗೆ ಇದು ತುಂಬಾ ಹೊರೆಯಾಗಲಿದೆ. ಎಲ್ಲರಿಗೂ ಅವಶ್ಯವಿರುವ ವಿದ್ಯುತ್ ಅನ್ನು ಸರ್ಕಾರವೇ ನಿರ್ವಹಿಸಿದರೆ ಎಲ್ಲರ ಬದುಕಿಗೂ ಅನುಕೂಲವಾಗುತ್ತದೆ. ಒಂದು ವೇಳೆ ಸರ್ಕಾರ ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಮುಖಂಡ ಧರೇಪ್ಪ ಸಾಂಗ್ಲಿಕರ ಮಾತನಾಡಿ, ಲಕ್ಷಾಂತರ ಕೋಟಿ ಆಸ್ತಿ ಹೊಂದಿರುವ ಸರ್ಕಾರಿ ಇಲಾಖೆಗಳು, ನೌಕರಸ್ಥರು, ಎಲ್ಲವು ಸಾರ್ವಜನಿಕ ಹಿತಕ್ಕೆ ಅನುಕೂಲವಾಗದೆ ಕಾರ್ಪೋರೇಟ್ ಕಂಪನಿ ಹಿತಕ್ಕೆ ಕೊಟ್ಟರೆ ನಮ್ಮೇಲ್ಲರ ಬದುಕಿಗೆ ತೊಂದರೆಯಾಗುತ್ತದೆ. ಅಲ್ಲದೇ ಹೆಸ್ಕಾಂ ನಲ್ಲಿ ಸಾಕಷ್ಟು ಜನ ಸೇವೆ ಸಲ್ಲಿಸುವತ್ತಿದ್ದು, ಅವರ ಬದುಕಿಗೆ ಆದಾರವಿಲ್ಲದಂತಾಗುತ್ತದೆ ಎಂದರು.ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಮುಖಂಡ ಅರ್ಜುನ ಹಲಗಿಗೌಡರ, ಶಿವಲಿಂಗ ಟಿರ್ಕಿ, ಬಂದು ಪಕಾಲಿ ಮಾತನಾಡಿ, 2025-26 ರಲ್ಲಿ ವಿದ್ಯುತ್ ವಲಯ ದೇಶದಲ್ಲಿ ₹ 2,701 ಕೋಟಿ ಆದಾಯ ಮಾಡಿದೆ. ದೇಶ ಮತ್ತು ರಾಜ್ಯಕ್ಕೆ ವಿದ್ಯುತ್ ವಲಯ ಪ್ರಾಥಮಿಕ ಆದ್ಯತೆಯಲ್ಲಿದ್ದು, ವಿದ್ಯುತ್ ಇರಲಾರದೆ ಯಾರು ಸಹ ಬದುಕಲಾಗದ ಸ್ಥಿತಿ ಇದೆ. ಹೀಗಿರುವಾಗ ಜನರ, ರೈತರ, ನೇಕಾರರ, ದುಡಿಯುವ ವರ್ಗದವರ ಜೀವನಾಡಿಯಾಗಿ ಈ ವಿದ್ಯುತ್ ಕೆಲಸ ಮಾಡುತ್ತಿದೆ. ಕಾರಣ ಸಾರ್ವಜನಿಕರ ನೆಮ್ಮದಿಗೆ ಸ್ಪಂದಿಸಿ ಸರ್ಕಾರ ಈ ವಿಚಾರದಿಂದ ಕೂಡಲೇ ಹೊರಗೆ ಬರದಿದ್ದರೆ ಉಗ್ರ ಚಳುವಳಿ ನಡೆಸಬೇಕಾಗುವುದು ಎಂದರು.ಈ ವೇಳೆ ಮುಖಂಡರಾದ ಮಹಾಂತೇಶ ಹಿಟ್ಟಿನಮಠ, ನಿಂಗಪ್ಪ ಬಾಳಿಕಾಯಿ, ಮಹಾದೇವ ಮಾರಾಪೂರ, ಸಿದ್ದು ಶಿರೊಳ, ಹನಮಂತ ಜಮಾದಾರ, ಶ್ರೀಕಾಂತ ಗುಳನ್ನವರ, ವಿರೇಶ ಆಸಂಗಿ, ಕರೇಪ್ಪ ಮೇಟಿ, ಈರಪ್ಪ ಹಂಚಿನಾಳ, ರಫೀಕ ಮಾಲದಾರ, ದುಂಡಪ್ಪ ಜಾಧವ, ಮಾರುತಿ ಕರೋಶಿ, ನಾಗೇಶ ಡುಮ್ಮಣ್ಣವರ, ವಿನೋದಗೌಡ ಪಾಟೀಲ, ಬಸವರಾಜ ನಾಗರಾಳ, ಚನ್ನಪ್ಪ ಹುಣಸ್ಯಾಳ, ಮಹಾಲಿಂಗ ಅಮ್ಮಣ್ಣಗಿ, ಭೀಮಪ್ಪ ಸಸಾಲಟ್ಟಿ, ರೈತರು, ಎಲ್ಲ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅರ್ಜುನ ಹಲಗಿಗೌಡರ ಹೆಸ್ಕಾಂ ಖಾಸಗಿಕರಣದ ವಿಷಯ ಮಾತನಾಡುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದ ವಿಷಯ ಪ್ರಸ್ತಾಪಿಸಿದಾಗ ಶಾಸಕ ಸಿದ್ದು ಸವದಿ ತರಾಟೆಗೆ ತೆಗೆದುಕೊಂಡು ಪ್ರತಿಭಟನೆಯಿಂದ ಹೊರ ನಡೆದರು. ನಂತರ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಹೋರಾಟಗಾರರ ಮಧ್ಯ ಮಾತಿನ ಚಕಮಕಿ, ಘರ್ಷಣೆ ನಡೆಯಿತು. ಬಳಿಕ ಮುಖಂಡರ ಮಧ್ಯ ಪ್ರವೇಶದಿಂದ ವಾತಾವರಣ ತಿಳಿಯಾಯಿತು. ಪ್ರತಿಭಟನೆ ಮುಂದೆವರೆಯಿತು.