ನವಲಗುಂದ:
ಪಂಚಗ್ರಹ ಹಿರೇಮಠವು ಕಳೆದ ಹಲವಾರು ವರ್ಷಗಳಿಂದ ಅನ್ನ ಹಾಗೂ ಅಕ್ಷರ ದಾಸೋಹ ನಡೆಸುತ್ತಾ ಬಂದಿದ್ದು, ಭವ್ಯ ಪರಂಪರೆ ಹೊಂದಿದೆ. ಪ್ರಸ್ತುತ ಇರುವ ಪೀಠಾಧ್ಯಕ್ಷ ಸಿದ್ದೇಶ್ವರ ಶ್ರೀಗಳು ಕಳೆದ 34 ವರ್ಷಗಳಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಲ್ಲದೇ 6 ಶಾಖಾ ಮಠಗಳನ್ನು ನಿರ್ಮಿಸಿ ತಾಲೂಕಿನಾದ್ಯಂತ ಅಧ್ಯಾತ್ಮ, ಪ್ರವಚನ ನೀಡುವ ಮೂಲಕ ಮನುಕುಲವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ತಮ್ಮ ಅನಾರೋಗ್ಯದ ದೃಷ್ಟಿಯಿಂದ ನೂತನ ಉತ್ತರಾಧಿಕಾರಿ ನೇಮಕ ಮಾಡಲು ಬಯಸಿದಂತೆ ಜ. ಪಂಚ ಪೀಠಾಧೀಶರ ಸೂಚನೆ ಹಾಗೂ ಮಠದ ಭಕ್ತರ ಆಶಯವಂತೆ ಉತ್ತರಾಧಿಕಾರಿಗಳನ್ನು ನೇಮಕ ಮಾಡಲು ತೀರ್ಮಾನಿಸಿದ್ದು, ತಾಲೂಕಿನ ಎಲ್ಲ ಭಕ್ತರ ಬೆಂಬಲ ವ್ಯಕ್ತವಾಗಿದೆ. ಹೀಗಿದ್ದಾಗ್ಯೂ ಮಠದ ಏಳ್ಗೆ ಸಹಿಸದ ಕೆಲ ಹಿತಾಸಕ್ತಿಗಳು ಮಠದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಂಥ ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿ ಗಡೀಪಾರು ಮಾಡಬೇಕೆಂದು ಹಿರಿಯರಾದ ಅಂದಾನಯ್ಯ ಹಿರೇಮಠ, ಅಣ್ಣಪ್ಪ ಬಾಗಿ, ವೀರೇಶ ಸೊಬರದಮಠ, ಶ್ರೀಶೈಲ ಮೂಲಿಮನಿ, ಉಸ್ಮಾನ ಬಬರ್ಚಿ, ಲೋಕನಾಥ ಹೆಬಸೂರ, ವಿ.ಟಿ. ಕರಿಸಕ್ರಣ್ಣವರ ಸೇರಿದಂತೆ ಹಲವರು ಆಗ್ರಹಿಸಿದರು.ಇದೇ ವೇಳೆ ಈ ಹಿಂದೆ ಪಂಚಪೀಠದ ಜಗದ್ಗುರು ಸೂಚಿಸಿದ ದಿನಾಂಕದಂದು ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿಗಳನ್ನು ನೇಮಕ ಮಾಡಲು ಸೇರಿದ ಜನರೆಲ್ಲ ಸರ್ವಾನುಮತದಿಂದ ಕೈ ಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಪಾಂಡಪ್ಪ ಕೋನರಡ್ಡಿ, ಎಂ.ಡಿ. ಕುಲಕರ್ಣಿ, ಸಿದ್ದಲಿಂಗಯ್ಯ ಹಿರೇಮಠ, ಶರ್ಮಾ ಹಿರೇಮಠ, ಶಿವಪ್ಪ ದುತಾರಿ, ಮರಿತಮ್ಮಪ್ಪ ಹಳ್ಳದ, ದೇವೇಂದ್ರಪ್ಪ ಹಳ್ಳದ, ಕೊಟ್ರೇಶ್ ಹಿರೇಮಠ, ಅಪ್ಪಣ್ಣ ಹಿರಗಣ್ಣವರ, ಯಲ್ಲಪ್ಪ ಭೋವಿ, ಮಲ್ಲಿಕಾರ್ಜುನ ಜಲಾದಿ, ಅಂದಾನಯ್ಯ ಕುಲಕರ್ಣಿ, ಬಾಬಾಜಾನ ಮುಲ್ಲಾ, ಸೈಪುದ್ಧೀನ ಅವರಾದಿ ಸೇರಿದಂತೆ ಹಲವರಿದ್ದರು.