ಜಿಲ್ಲಾಧಿಕಾರಿಗೆ ಮನವಿ ಕೊಟ್ರೆ ಒಂದು ದಿನ ಧರಣಿ ಕೂತ್ರೆ ಮುಗಿಯಲ್ಲ. ಬಾದಿತ ಜನರಿಗೆ ಜಾಗೃತಿ ಮಾಡಬೇಕಿದೆ. ಪ್ರತೀ ಹಳ್ಳಿಗೆ ಹೋಗಬೇಕು ಅಂತ. ನಾವೆಲ್ಲ ನಿರ್ಣಯಿಸಿದ್ದೇವೆ. ಡಿಸೆಂಬರ್ 24ರ ಒಳಗೆ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ. ಮುಂದೆ ದೆಹಲಿಗೆ ತೆರಳಿ ಜಂಟಿ ಸಂಸದೀಯ ಸಮಿತಿಗೆ ವರದಿ ನೀಡಲಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. ಅವರು ಗಣೇಶ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ವಕ್ಪ್ ಬಾಧಿತರಿಗೆ ಕಾನೂನು ಸಲಹೆ ನೀಡಲು ನಮ್ಮ ಕಾನೂನು ತಂಡವಿದೆ, ನಮ್ಮ ತಂಡ ಕಲಬುರಗಿ, ಬಾಗಲಕೋಟೆ, ರಾಯಚೂರು, ಬೆಳಗಾವಿಗೆ ಹೋಗಲಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ಆಗಮಿಸಿದ ಬಿಜೆಪಿ ತಂಡದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಸ್ವೀಕರಿಸಿದರು.
-----ಫೈಲ್ 25ಬಿಡಿ7