ಜನಿವಾರ ತೆಗೆಸಿದ ಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Apr 22, 2025, 01:52 AM IST
ವಿಜಯಪುರದಲ್ಲಿ ಬ್ರಾಹ್ಮಣ ಸಮಾಜ ಹಾಗೂ ವಿವಿಧ ಸಮಾಜದ ಮುಖಂಡರು ಧರಣಿ ನಡೆಸಿದರು. | Kannada Prabha

ಸಾರಾಂಶ

ಪರೀಕ್ಷೆ ಸಮಯದಲ್ಲಿ ಪವಿತ್ರ ಯಜ್ಞೋಪವಿತ (ಜನಿವಾರ) ತೆಗೆಸಿದ ಕ್ರಮವನ್ನು ಖಂಡಿಸಿ ವಿವಿಧ ಬ್ರಾಹ್ಮಣ ಸಂಘಟನೆ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪರೀಕ್ಷೆ ಸಮಯದಲ್ಲಿ ಪವಿತ್ರ ಯಜ್ಞೋಪವಿತ (ಜನಿವಾರ) ತೆಗೆಸಿದ ಕ್ರಮವನ್ನು ಖಂಡಿಸಿ ವಿವಿಧ ಬ್ರಾಹ್ಮಣ ಸಂಘಟನೆ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಗೆ ದಲಿತ ಬಾಂಧವರು, ಹಾಲುಮತ, ಕ್ಷತ್ರೀಯ, ವಿಶ್ವಕರ್ಮ, ರಜಪೂತ, ಮರಾಠ ಸಮಾಜ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಹೋರಾಟ ಬೆಂಬಲಿಸಿದರು. ನಂತರ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಭಾವಸಾರ ಕ್ಷೇತ್ರಿಯ ಸಮಾಜದ ಅಧ್ಯಕ್ಷ ರಾಜೇಶ ದೇವಗಿರಿ ಮಾತನಾಡಿ, ನಮ್ಮ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತ ಕೆಲಸವನ್ನು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಡಿದ್ದು, ಈ ಹೇಯಕೃತ್ಯ ಎಂದು ಆರೋಪಿಸಿ ತಪ್ಪಿತಸ್ಥತ್ತರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸರ್ಕಾರವು ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂವರೆಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಏನೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ನೋಡಿದರೆ ಅವರ ಬೆಂಬಲ ಈ ರೀತಿ ವರ್ತಿಸಿದ ತಪ್ಪಿತಸ್ಥರನ್ನು ಬಚಾವೂ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಸರ್ಕಾರವು ಈ ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ದಲಿತ ಸಮಾಜದ ಯುವಮುಖಂಡ ಪುನೀತ ಕಾಂಬಳೆ ಮಾತನಾಡಿ, ನಾವು ದಲಿತ ಸಮಾಜದವರು ಸನಾತನಿಗಳಿಗೆ ಎಲ್ಲಿಯೂ ಅನ್ಯಾಯವಾದರು ನಾವು ಅವರ ಬೆಂಬಲಕ್ಕೆ ನಿಲ್ಲುತ್ತವೆ ಎಂದರು.ಶ್ರೀ ರಾಮನವಮಿ ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ ವಂದಾಲ ಅವರು ಮಾತನಾಡಿ, ಬ್ರಾಹ್ಮಣ ಸಮಾಜ ಯಾವತ್ತೂ ಸಹಿಷ್ಣರು ಶಿವಮೊಗ್ಗ ಹಾಗೂ ಬೀದರದಲ್ಲಿ ನಡೆದ ಜನಿವಾರ ತೆಗೆಸುವಂತಹ ಕೆಲಸ ನಾನು ಖಂಡಿಸುತ್ತೇನೆ. ಮುಂದೆಂದು ಇಂತಹ ಅಪರಾಧಗಳು ನಡೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನೀಲಕಂಠ ಕಂದಗಲ, ವಿಜಯ ಚವ್ಹಾಣ, ರಾಹುಲ ಜಾಧವ, ಶ್ರೀಕಾಂತ ಕುಂದನಗಾರ, ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್ಲ, ಕೃಷ್ಣಭಟ ಗಲಗಲಿ, ಶ್ರೀಹರಿ ಗೊಳಸಂಗಿ, ನಾಗರಾಜ ಲಂಬು, ಲಕ್ಷ್ಮಿಕಾಂತ ಕುಲಕರ್ಣಿ, ವೆಂಕಟೇಶ ಜೊಶಿ, ದತ್ತಾ ಕುಲಕರ್ಣಿ, ಗಿರಿಶ ಕುಲಕರ್ಣಿ, ವಕೀಲರಾದ ಎಸ್.ಎಂ. ಸೋಲ್ಲಾಪಟ್ಟಿ, ಸಂಜೀವ ಜಹಾಗೀರದಾರ, ಎಸ್.ವಿ. ಜಹಾಗೀರದಾರ, ಆರ್.ಎಂ. ಕುಲಕರ್ಣಿ, ಬಿಂದುಮಾಧವ ಕಾಸನೀಸ, ವಿದ್ಯಾಧರ ಜೋಶಿ, ಪಾಪುಸಿಂಗ ರಜಪೂತ, ಉಮೇಶ ವಂದಾಲ, ಮುಕುಂದ ಕುಲಕರ್ಣಿ, ಸುನೀಲ ಬೈರೋಡಗಿ, ಭೀಮರಾಯ ಜಿಗಜಿಣಗಿ, ರೂಪಸಿಂಗ ಓಲೇಕಾರ, ಪ್ರದೀಪ ಸೋನಾರ, ಪ್ರಭಾಕರ ಭೋಸಲೆ, ಎನ್.ವಿ. ಕುಲಕರ್ಣಿ, ಗೋವಿಂದ ಜೋಶಿ, ವಿಜಯ ಜೋಶಿ, ದತ್ತಾತ್ರೇಯ ಜೋಶಿ, ರಮೇಶ ಕುಲಕರ್ಣಿ, ಸುದೀರ ಕುಲಕರ್ಣಿ, ಮಹೇಶ ದೇಶಪಾಂಡೆ, ಶ್ರೀನಿವಾಸ ಬೆಟಗೇರಿ ಕೃಷ್ಣಾ ಗುನ್ನಾಳಕರ, ಭಾಗ್ಯಶ್ರೀ ಕಟ್ಟಿ, ಕೃಷ್ಣಾಜಿ ಕುಲಕರ್ಣಿ, ಗೋವಿಂದ ಜೋಶಿ, ಅರವಿಂದ ಜೋಶಿ ಜ್ಞಾನೇಶ್ವರ ಕುಲಕರ್ಣಿ, ಮದನ ಭಾಗವತ, ಮನೋಜ ಶಹಾಪೂರ, ಶಿವಾನಂದ ಭುಯ್ಯಾರ, ಮೋಹನ ಕುಲಕರ್ಣಿ, ನಂದಕಿಶೋರ ಕುಲಕರ್ಣಿ, ಶರಣು ಸಬರದ, ವಿಕಾಸ ಪದಕಿ, ಆನಂದ ಕುಲಕರ್ಣಿ, ಪ್ರಸನ್ನಾಚಾರ ಕಟ್ಟಿ, ಕಶಪ ಆಚಾರ ಗೋರನಾಳ, ಉಪೇಂದ್ರ ದೇಸಾಯಿ, ಚಿದಂಬರ ಪಾಟೀಲ, ಪವಮಾನ ಆಚಾರ ಪುರೋಹಿತ, ನರಹರಿ ಆಚಾರ ಮುತ್ತಗಿ, ಶ್ರೀಶಾಚಾರ್ಯ ಸುಳಿಭಾವಿ, ಭರತ ಕುಲಕರ್ಣಿ, ಚೈತ್ರಾ ಗೋಠೆಕರ, ಕೀರ್ತಿ ಕುಲಕರ್ಣಿ, ಸುಜಾತ ಕುಲಕರ್ಣಿ, ರಾಧ ಕುಲಕರ್ಣಿ, ರಾಜು ಹಜೇರಿ, ಪ್ರಭಾಕರ ಭೋಸಲೆ, ಸಂದೀಪ ಅರ್ಜುಣಗಿ, ಪವನ ಕುಲಕರ್ಣಿ, ಅಜೀತ ಕುಲಕರ್ಣಿ, ಭಾಗ್ಯಶ್ರೀ ಕಟ್ಟಿ, ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ