ಕನ್ನಡಪ್ರಭ ವಾರ್ತೆ ರಾಮದುರ್ಗ
ಬುಧವಾರ ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಬಡ ಮಹಿಳೆಯರ ಜೀವನೋಪಾಯಕ್ಕೆ ಪೆಟ್ಟು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸುಮಾರು 1.30 ಲಕ್ಷ ಬಿಸಿಯೂಟ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದು, ಕ್ಲಸ್ಟರ್ ಮಟ್ಟದಲ್ಲಿ ಅಡುಗೆ ತಯಾರಿಸಿ ಶಾಲೆಗಳಿಗೆ ವಿತರಿಸುವ ಯೋಜನೆ ಜಾರಿಯಾದರೆ ಸಾವಿರಾರು ಮಹಿಳೆಯರ ಬದುಕು ಬೀದಿಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಹಲವು ವರ್ಷಗಳಿಂದ ಕೇವಲ ₹300 ಗೌರವಧನದಲ್ಲಿ ಬಡ ಮಕ್ಕಳಿಗೆ ಅಡುಗೆ ಮಾಡಿ ಊಟ ನೀಡಿದ ಕಾರ್ಯಕರ್ತೆಯರಿಗೆ ನಿರಂತರ ಹೋರಾಟದ ಫಲವಾಗಿ ಈಗ ₹4,600 ಗೌರವಧನ ದೊರೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ಲಸ್ಟರ್ ಕಿಚನ್ ಯೋಜನೆ ಜಾರಿಗೊಳಿಸಿದರೆ ಅನೇಕ ಕುಟುಂಬಗಳು ಜೀವನೋಪಾಯ ಕಳೆದುಕೊಳ್ಳಲಿವೆ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯನ್ನು ಪರಿಗಣಿಸಿ ಬಡ ಮಹಿಳೆಯರ ಬದುಕಿಗೆ ತೊಂದರೆಯಾಗುವ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.ಅಕ್ಷರ ದಾಸೋಹ ಯೋಜನೆಯಿಂದ ಶಾಲೆಗಳಲ್ಲಿ ಮಕ್ಕಳು ಜಾತಿ, ಧರ್ಮದ ಭೇದವಿಲ್ಲದೆ ಒಂದೇ ಸೂರಿನಡಿ ಕುಳಿತು ಊಟ ಮಾಡುವ ಮೂಲಕ ಸಾಮಾಜಿಕ ಸಮಾನತೆಯ ಪಾಠ ಕಲಿಯುತ್ತಿದ್ದಾರೆ. ಶಾಲೆ ಮುಖ್ಯಶಿಕ್ಷಕರಿಗೆ ಅಕ್ಷರ ದಾಸೋಹದ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಯೋಜನೆಯ ಸ್ವರೂಪ ಬದಲಿಸುವುದು ಸರಿಯಲ್ಲ. ಇದರಿಂದ ಬಡ ಮಹಿಳೆಯರ ಕುಟುಂಬ ನಿರ್ವಹಣೆ ಕಷ್ಟಕರವಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತುಳಸಮ್ಮ ಮಾಳದಕರ, ರಾಚವ್ವ ರಾಮದುರ್ಗ, ಪಾರ್ವತಿ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು.