ಮಾಸ್ತಿ ಕನ್ನಡ ಸಾಹಿತ್ಯದ ದಂತಕಥೆ : ಟಿ.ಎಲ್. ದತ್ತಾತ್ರೇಯ

KannadaprabhaNewsNetwork | Published : Aug 23, 2024 1:01 AM

ಸಾರಾಂಶ

ತರೀಕೆರೆ, ಮಾಸ್ತಿ ಅವರು ಕನ್ನಡದ ಆಸ್ತಿ, ಅವರು ತಮ್ಮ ಸಾಹಿತ್ಯದ ಮೂಲಕ ವಾಸ್ತವ ಬದುಕಿನ ದಂತಕಥೆಯಾಗಿದ್ದಾರೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಟಿ.ಎಲ್.ದತ್ತಾತ್ರೇಯ ಅಭಿಪ್ರಾಯಪಟ್ಟರು.

ತಾಲೂಕು ಕಸಾಪದಿಂದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಾಸ್ತಿ ಅವರು ಕನ್ನಡದ ಆಸ್ತಿ, ಅವರು ತಮ್ಮ ಸಾಹಿತ್ಯದ ಮೂಲಕ ವಾಸ್ತವ ಬದುಕಿನ ದಂತಕಥೆಯಾಗಿದ್ದಾರೆ ಎಂದು ಪಟ್ಟಣದ ಸರ್ಕಾರಿ

ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಟಿ.ಎಲ್.ದತ್ತಾತ್ರೇಯ ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನಡೆದ ಶ್ರಾವಣ ಸಾಹಿತ್ಚ ಸಂಭ್ರಮದಲ್ಲಿ ಮಾಸ್ತಿ ರವರ ಬದುಕು ಬರಹ ವಿಷಯ ಕುರಿತು ಉಪನ್ಯಾಸ ನೀಡಿದರು. ಮಾಸ್ತಿ ಅವರ ಚಿಕ್ಕವೀರರಾಜೇಂದ್ರ ಎಂಬ ಸಮಗ್ರ ಕೃತಿಗೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಮಾಸ್ತಿ ಅವರು 1913ರಲ್ಲಿ ಉಪ ವಿಭಾಗಾಧಿಕಾರಿಯಾಗಿ, ನಂತರ ಜಿಲ್ಲಾಧಿಕಾರಿಯಾಗಿನಮ್ಮ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಮಹಾನ್ ಚೇತನ. ಅಡಳಿತದಲ್ಲಿ ಕನ್ನಡ ಭಾಷೆಯನ್ನು ಜಾರಿಗೆ ತಂದರು, ಮೂಲತಃ ತಮಿಳಿನವರಾದರೂ ಕನ್ನಡದಲ್ಲಿ 88 ಕಥೆಗಳನ್ನು ರಚಿಸಿದ್ದಾರೆ. ನಮ್ಮಮೇಷ್ಟ್ರು, ರಂಗನ ಮದುವೆ, ಉಗ್ರಪ್ಪನ ಉಗಾದಿ, ಮೊಸರಿನ ಮಂಗಮ್ಮ, ಗೌತಮ ಹೇಳಿದ ಕತೆ, ಹೀಗೆ ಸಾಮಾನ್ಯ ವಸ್ತು ವ್ಯಕ್ತಿಗಳ ಮೇಲೆ ಕಥೆ ರಚಿಸಿ ಜನರ ನೆಚ್ಚಿನ ಕವಿ ಯಾಗಿದ್ದಾರೆ. ಮಾಸ್ತಿ ಅವರು ರಾಜಸೇವಾಸಕ್ತ ಎಂಬ ಬಿರುದು ಪಡೆದಿದ್ದರು ಎಂದು ಹೇಳಿದರು.

ಭಾವ ಸಂಕಲನ ಮೂಲಕ 3 ಸಂಪುಟಗಳಲ್ಲಿ ಆತ್ಮ ಚರಿತ್ರೆ ರಚಿಸಿದ್ದಾರೆ. ಕಾಕನಕೋಟೆ ಕಾಡಿನ ಸಂರಕ್ಷಣೆ ಬಗ್ಗೆ ಕವನ ಸಂಕಲನ ಬರೆದು ಅನುಭವ ಜೀವಂತ ಸಾಹಿತ್ಯದ ಕಥೆಗಳ ಮೂಲಕ ವಾಸ್ತವ ಬದುಕಿನ ದಂತ ಕಥೆಯಾಗಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ಮಾತನಾಡಿ ಕನ್ನಡಿಗರು ಸಂವೇದನಾಶೀಲ ವ್ಯಕ್ತಿತ್ವದವರು, ನಾಡಿನ ನೆಲ ಜಲ ಜೀವನದ ಮೌಲ್ಯವನ್ನು ಕನ್ನಡ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ನಿಲಯದ ಮೇಲ್ವಿಚಾರಕ ರಾಜೇಂದ್ರ ಹಾಲಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಹಿತ್ಯವನ್ನು ಅಭ್ಯಾಸ ಮಾಡಿದರೆ ಯಶಸ್ಸು ಕೀರ್ತಿ, ಜ್ಞಾನ, ಸಂಪತ್ತು ದೊರೆಯುತ್ತದೆ. ಸಮಾಜದಲ್ಲಿ ಸದೃಢ ವ್ಯಕ್ತಿತ್ವ ನಿರ್ಮಾಣ ಸಾಹಿತ್ಯದಿಂದ ಮಾತ್ರ ಸಾಧ್ಯ, ಕ್ರಿಯಾಶೀಲತೆ ನಮ್ಮ ಜೀವನದಲ್ಲಿ ಶ್ರಮದಿಂದ ಸಾಧ್ಯ ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ ತಲೆ ತಗ್ಗಿಸಿ ಅಧ್ಯಯನ ಮಾಡಿದರೆ, ತಲೆ ಎತ್ತುವಂತೆ ಮಾಡುವುದೇ ಸಾಹಿತ್ಯ. ಡಾ.ಬಿ.ಆರ್.ಅಂಬೇಡ್ಕರ್ ರವರು ವಿಶ್ವದ ಜ್ಞಾನಕೋಶ. ನಮ್ಮೂರಿನ ಪ್ರತಿಭೆ ದೇಶ ವಿದೇಶಗಳಲ್ಲಿ ಪಸರಿಸಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.

ಪ್ರಶಿಕ್ಷಣಾರ್ಥಿ ಹೊನ್ನಪ್ಪ, ಲೇಖಕ ತ.ಮ.ದೇವಾನಂದ, ಶ್ರೀನಿವಾಸ್, ಕಂಪರಂಗಯ್ಯ, ಶಂಕರಪ್ಪ, ಚಂದ್ರಶೇಖರ್ ಮತ್ತಿತರರು ಇದ್ದರು.

22ಕೆಟಿಅರ್.ಕೆ.1ಃ

ತರೀಕೆರೆಯಲ್ಲಿ ತಾಲೂಕು ಕಸಾಪದಿಂದ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ನಿಲಯ ಮೇಲ್ವಿಚಾರಕ ರಾಜೇಂದ್ರ ಹಾಲಟ್ಟಿ ಉದ್ಘಾಟಿಸಿದರು. ತಾ. ಕಸಾಪ ಅಧ್ಯಕ್ಷ ರವಿದಳವಾಯಿ, ಸ.ಪ್ರ.ಕಾಲೇಜು ಉಪನ್ಯಾಸಕ ಟಿ.ಎಲ್. ದತ್ತಾತ್ರೇಯ, ಲೇಖಕ ತ.ಮ.ದೇವಾನಂದ ಮತ್ತಿತರರು ಇದ್ದರು.

Share this article