ಮಾಸ್ತಿಯ ಸಾಹಿತ್ಯ ಯುವ ಸಾಹಿತಿಗಳಿಗೆ ಸ್ಪೂರ್ತಿ: ತಹಸೀಲ್ದಾರ್ ಕೆ.ರಮೇಶ್

KannadaprabhaNewsNetwork |  
Published : Jun 07, 2024, 12:33 AM IST
ಶಿರ್ಷಿಕೆ-೬ಕೆ.ಎಂ.ಎಲ್.ಅರ್.೪- ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ, ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯಿತಿ ಮಾಲೂರು  ಸಹಯೋಗದೊಂದಿಗೆ ಮಾಸ್ತಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ ಮಾಸ್ತಿ ಅಯ್ಯಂಗಾರ್ ರವರ ೧೩೩ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಾಸ್ತಿ ಸ್ಮಾರಕ ಗ್ರಂಥಾಲಯದಲ್ಲಿ ಮಾಸ್ತಿ ಅವರ ಭಾವಚಿತ್ರಕ್ಕೆ ತಹಶಿಲ್ದಾರ್ ಕೆ.ರಮೇರ್ಶ ಪುಷ್ಪನಮನ ಅರ್ಪಿಸಿದರು. | Kannada Prabha

ಸಾರಾಂಶ

ಮಾಸ್ತಿಯವರು ರಚಿಸಿದ ಚಿಕ್ಕವೀರರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು. ಕನ್ನಡ ಭಾಷೆಗೆ ೪ನೇ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.ಅವರು ಹಲವರಿಗೆ ಸ್ಪೂರ್ತಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು

ಈ ನಾಡು ಕಂಡ ಅಪ್ರತಿಮ ಸಾಹಿತಿ, ಕನ್ನಡದ ಆಸ್ತಿಯಂದೇ ಹೆಸರು ವಾಸಿಯಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಹುಟ್ಟಿ ಇತಿಹಾಸ ಪ್ರಸಿದ್ಧರಾಗಿದ್ದಾರೆ ಎಂದು ತಹಸೀಲ್ದಾರ್ ಕೆ.ರಮೇಶ್ ತಿಳಿಸಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ, ತಾಲೂಕು ಆಡಳಿತ, ತಾಪಂ ಮಾಲೂರು ಸಹಯೋಗದೊಂದಿಗೆ ಮಾಸ್ತಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ ಮಾಸ್ತಿ ಅಯ್ಯಂಗಾರ್ ರವರ ೧೩೩ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಾಸ್ತಿ ಸ್ಮಾರಕ ಗ್ರಂಥಾಲಯದಲ್ಲಿ ಮಾಸ್ತಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿದ ಅವರು, ಕನ್ನಡದ ಮೇರು ಸಾಹಿತಿ ಮಾಸ್ತಿಯವರ ಹೆಸರಿನಲ್ಲಿ ತಾಲೂಕಿನ ಕೆಸರಗೆರೆ ಗ್ರಾಮದ ಬಳಿ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದ್ದು, ವೃತ್ತಿ ಜೀವನದ ನಡುವೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಅವರು ಸಣ್ಣ ಕಥೆ, ಕಾದಂಬರಿ,ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ ಸಂಪಾದನೆ ಅನುವಾದ, ಹೀಗೆ ಕನ್ನಡಕ್ಕೆ ನೂರಾರು ಸಾಹಿತ್ಯ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಮಾಸ್ತಿಯವರು ರಚಿಸಿದ ಚಿಕ್ಕವೀರರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು. ಕನ್ನಡ ಭಾಷೆಗೆ ೪ನೇ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.ಅವರು ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಪ್ರತಿವರ್ಷ ಜೂ. ೬ರಂದು ಮಾಸ್ತಿಯವರ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ತಾಲೂಕು ಆಡಳಿತವು ಅದ್ಧೂರಿಯಾಗಿ ಆಚರಿಸುತ್ತಿತ್ತು. ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸರಳವಾಗಿ ಮಾಸ್ತಿಯವರ ಜಯಂತಿಯನ್ನು ಆಚರಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರ ನೇತೃತ್ವದಲ್ಲಿ ಮಾಸ್ತಿಯವರ ಜನ್ಮದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ತಾಪಂ ಇಒ ವೀಣಾ, ಬಿಇಒ ಚಂದ್ರಕಲಾ, ಮಾಸ್ತಿ ಕಾಲೇಜಿನ ಪ್ರಾಂಶುಪಾಲರು ನಾರಾಯಣ, ಉಪಪ್ರಾಂಶುಪಾಲರು ವೆಂಕಟಪ್ಪ, ಪಿಡಿಒ ನವೀನ್, ಕಾರ್ಯದರ್ಶಿ ರಮೇಶ್, ಗ್ರಂಥಪಾಲಕ ಶ್ರೀನಾಥ್ ಇನ್ನಿತರರು ಭಾಗವಹಿಸಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ