ಸರ್ಕಾರಿ ಶಾಲೆ ಸಮುದಾಯದ ಶಾಲೆ: ಸುಚರಿತ ಶೆಟ್ಟಿ

KannadaprabhaNewsNetwork |  
Published : Dec 28, 2025, 04:15 AM IST
ಸರಕಾರಿ ಶಾಲೆ ಸಮುದಾಯದ ಶಾಲೆ : ಕೆ. ಪಿ. ಸುಚರಿತ ಶೆಟ್ಟಿ  | Kannada Prabha

ಸಾರಾಂಶ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆ ಇದರ ವಾಷಿ೯ಕೋತ್ಸವ ಸಮಾರಂಭ

ಮೂಡುಬಿದಿರೆ: ಸರ್ಕಾರಿ ಶಾಲೆ ಸಮುದಾಯದ ಶಾಲೆ. ಇಲ್ಲಿ ಶಿಕ್ಷಣ ನೀಡುವ ಶಿಕ್ಷಕರು ಉತ್ತಮ ಶಿಕ್ಷಕರಾಗಿದ್ದು, ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳನ್ನು ಸೃಜನಶೀಲವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಕೆಎಂಎಫ್ ನಿದೇ೯ಶಕ ಕೆ.ಪಿ. ಸುಚರಿತ ಶೆಟ್ಟಿ ಹೇಳಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆ ಇದರ ವಾಷಿ೯ಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಊರವರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಸಹಕಾರ ನೀಡಬೇಕು. ಮಕ್ಕಳ ಸಂಖ್ಯೆ ಹೆಚ್ಚಾದರೆ ನಮಗೆ ಸರಕಾರದಿಂದ ಅನುದಾನವನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ ಎಂದ ಅವರು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ಸಲಹೆ ನೀಡಿದರು.

ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ:

ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾಯ೯ಕ್ರಮಗಳನ್ನು ಆಯೋಜಿಸಿದ ಹಳೆ ವಿದ್ಯಾರ್ಥಿಗಳಾದ ರಚನಾ, ಶರಣ್, ಮಧು, ಕ್ಷೀರಾಜ್ ಅವರನ್ನು ಸನ್ಮಾನಿಸಲಾಯಿತು.

ಕಲಿಯುವಿಕೆಯಲ್ಲಿ ಅಧಿಕ ಅಂಕಗಳನ್ನು ಪಡೆದಿರುವ ರಿತಿಕಾ, ಸಾನ್ವಿ ಹಾಗೂ ರುತ್ವಿ ಅವರನ್ನು ಗೌರವಿಸಲಾಯಿತು. ಆಳ್ವಾಸ್ ನ ವೃತ್ತಿ ತರಬೇತಿ ವಿದ್ಯಾಥಿ೯ ಈರಣ್ಣ ಅವರನ್ನು ಸನ್ಮಾನಿಸಲಾಯಿತು.

ಪುರೋಹಿತರಾದ ಆನಂತ ಪದ್ಮನಾಭ ಪೆಜತ್ತಾಯ, ಉದ್ಯಮಿಗಳಾದ ಅಶೋಕ ಶೆಟ್ಟಿ, ಪೃಥ್ವಿ ರಾಜ್ ಜೈನ್, ಸೆಲ್ವ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ, ಗ್ಯಾರೇಜ್ ಮಾಲೀಕರ ಸಂಘದ ಅಧ್ಯಕ್ಷ ಗುರುಪ್ರಸಾದ್, ಕಾಕ೯ಳ ಎಲ್ ಐಸಿ ಆಡಳಿತಾಧಿಕಾರಿ ರಾಮ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು, ಮೂಡುಬಿದಿರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸುಧಾಕರ ಸಾಲ್ಯಾನ್, ಐಎಫ್ ಸಿ ಸಂಯೋಜಕಿ ಶಾಲಾ ಹಳೆ ವಿದ್ಯಾಥಿ೯ ಅನ್ವಯ, ಹೋಲಿ ರೋಸರಿ ಕಾಲೇಜಿನ ಉಪನ್ಯಾಸಕಿ ಸಮ್ಯತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಆಚಾಯ೯, ಐ. ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಸೇಸಮ್ಮ ಸ್ವಾಗತಿಸಿದರು. ಶಿಕ್ಷಕಿಯರಾದ ಹಷಿ೯ತಾ ಮತ್ತು ನಾಗರತ್ನ ಬಹುಮಾನಿತರ ಪಟ್ಟಿ ವಾಚಿಸಿದರು. ಶ್ರೀನಿವಾಸ ಕಾಯ೯ಕ್ರಮ ನಿರೂಪಿಸಿದರು. ಪೋಷಕರಾದ ಮಹೇಶ್ ಕಕೇ೯ರಾ ವಂದಿಸಿದರು. ನಂತರ ವಿದ್ಯಾಥಿ೯ಗಳು ಮತ್ತು ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾಯ೯ಕ್ರಮ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯ ಪರಂಪರೆಯ ಶಿಕ್ಷಣ ಪದ್ಧತಿ ಅತ್ಯವಶ್ಯಕ
29, 30ರಂದು ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ