ವಿದ್ಯಾರ್ಥಿ ಹಿತಕ್ಕೆ ಆದ್ಯತೆ ನೀಡಿದ ಮೇಟಿ: ಕೆ.ವಿ. ಪ್ರಸಾದ

KannadaprabhaNewsNetwork |  
Published : Aug 01, 2024, 12:18 AM IST
31ಕೆಪಿಎಲ್24 ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನಿವೃತ್ತರಾದ ಪ್ರೋ. ತಿಮ್ಮಾರಡ್ಡಿ ಅವರ ಅಭಿನಂದನಾ ಗ್ರಂಥದ ಬಿಡುಗಡೆ ಕಾರ್ಯಕ್ರಮ.  | Kannada Prabha

ಸಾರಾಂಶ

ಕಾಲೇಜಿನ ಬೋಧಕರ, ಬೋಧಕೇತರರ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾಗಿ ಉತ್ತಮ ಆಡಳಿತ ನಿರ್ವಹಿಸಿದ್ದು ಪ್ರೊ. ತಿಮ್ಮಾರಡ್ಡಿ ಮೇಟಿಯವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ.

ಅಪ್ಪಟ ಅಪರಂಜಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಕೊಪ್ಪಳ ವಿವಿ ಕುಲಸಚಿವ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾಲೇಜಿನ ಬೋಧಕರ, ಬೋಧಕೇತರರ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾಗಿ ಉತ್ತಮ ಆಡಳಿತ ನಿರ್ವಹಿಸಿದ್ದು ಪ್ರೊ. ತಿಮ್ಮಾರಡ್ಡಿ ಮೇಟಿಯವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಕೆ.ವಿ. ಪ್ರಸಾದ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಒಳ ಆವರಣದಲ್ಲಿ ಬುಧವಾರ ಪ್ರೊ. ತಿಮ್ಮಾರಡ್ಡಿ ಮೇಟಿಯವರ ಸೇವಾ‌ ನಿವೃತ್ತಿ ಪ್ರಯುಕ್ತ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ಮೇಟಿಯವರ ಕುರಿತ ಅಪ್ಪಟ ಅಪರಂಜಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಪ್ಪಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಮಹಾವಿದ್ಯಾಲಯಗಳಲ್ಲೇ ಅತ್ಯಧಿಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿದ ಕಾಲೇಜೆಂದರೆ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಆಡಳಿತದಲ್ಲಿ ಅತ್ಯಂತ ನಿಪುಣತೆ ಮತ್ತು ಚಾಣಾಕ್ಷತೆಯನ್ನು ಪಡೆದಿದ್ದರು. ಕೊಪ್ಪಳ ವಿಶ್ವವಿದ್ಯಾಲಯದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದರು.

ಅಪ್ಪಟ ಅಪರಂಜಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಹಗರಿಬೊಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ. ವೆಂಕಟೇಶ, ದೇಶಿಯ ಸೊಗಡಿನಿಂದ ಬಂದ ಪ್ರತಿಭೆ ತಿಮ್ಮಾರಡ್ಡಿ ಮೇಟಿ. ಅಪ್ಪಟ ಗ್ರಾಮೀಣ ಕುಟುಂಬದಲ್ಲಿ ಬೆಳೆದು ಬಂದ ಇವರು ಬದುಕಿನಲ್ಲಿ ಬಡತನ, ಅನೇಕ ಕಷ್ಟಕಾರ್ಪಣ್ಯಗಳು, ನೋವು- ನಲಿವುಗಳೆಲ್ಲವನ್ನು ಸಮಾನವಾಗಿ ಹಂಚಿಕೊಂಡವರು ಎಂದು ಶ್ಲಾಘಿಸಿದರು.

ಡಾ. ಗವಿಸಿದ್ದಪ್ಪ ಮುತ್ತಾಳ, ಉಮೇಶ್ ಅಂಗಡಿ, ಮಹಾಂತೇಶ್ ಪಾಟೀಲ್ ಮೈನಳ್ಳಿ, ಕೇಶವರಡ್ಡಿ ಮಾದಿನೂರ್, ಬಸವರಡ್ಡಿ ಹಳ್ಳಿಕೇರಿ, ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವ್ಯವಸ್ಥಾಪಕ ಮಹಾಂತೇಶ್, ಸೋಮರಡ್ಡಿ ಅಳವಂಡಿ, ಸರೋಜಾ ಮೇಟಿ, ಶಂಕರಗೌಡ ಹಿರೇಗೌಡ್ರ, ಡಾ. ಹನುಮಂತ ಕಲ್ಮನಿ, ವಿನೋದ್ ಚಂದ್ ಪೀಟರ್, ಪ್ರಕಾಶಗೌಡ , ಮಂಜುನಾಥ್ ಗೊಂಡವಾಳ, ಮಾರುತೇಶ್, ಪ್ರಕಾಶ್ ಬಳ್ಳಾರಿ, ಶಿವಬಸಪ್ಪ ಮಸ್ಕಿ, ಡಾ. ಕನಕೇಶ ಮೂರ್ತಿ, ಎಂ.ಕೆ. ಇಬ್ರಾಹಿಂ ಮತ್ತಿತರರು ಇದ್ದರು.

ಬಸವರಾಜ ಕರುಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶಗೌಡ ಎಸ್.ಯು. ಆಶಯ ನುಡಿಗಳನ್ನಾಡಿದರು. ಚೈತ್ರಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗೀತಾ ಬನ್ನಿಕೊಪ್ಪ ಸ್ವಾಗತಿಸಿದರು. ಮಂಜುನಾಥ ಆರೆಂಟನೂರ, ಮಹಾಂತೇಶ ನೆಲಾಗಣಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌: ಸಿದ್ದರಾಮಯ್ಯ
ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ