ಯುವಕನಿಂದ 35 ಲಕ್ಷ ದೋಚಿದ ಮ್ಯಾಟ್ರಿಮೋನಿಯಲ್ ಮಾಯಾಂಗನೆ

KannadaprabhaNewsNetwork |  
Published : Jun 08, 2026, 03:00 AM IST
ಬಂಧನ | Kannada Prabha

ಸಾರಾಂಶ

ವೈವಾಹಿಕ ವೆಬ್‌ಸೈಟ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಯುವಕನಿಗೆ ಮದುವೆಯಾಗುವುದಾಗಿ ನಂಬಿಸಿ ಹೂಡಿಕೆ ನೆಪದಲ್ಲಿ ₹35 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈವಾಹಿಕ ವೆಬ್‌ಸೈಟ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಯುವಕನಿಗೆ ಮದುವೆಯಾಗುವುದಾಗಿ ನಂಬಿಸಿ ಹೂಡಿಕೆ ನೆಪದಲ್ಲಿ ₹35 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಡಿವಾಳ ನಿವಾಸಿಯಾದ ಅನಿಲ್‌ ಕುಮಾರ್‌ ಸಾಗಿನಾಲಾ ಎಂಬುವರು ನೀಡಿದ ದೂರಿನನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಿಲ್‌ ಕುಮಾರ್‌ ವೈವಾಹಿಕ ವೆಬ್‌ಸೈಟ್‌ ಮೂಲಕ ಮದುವೆಯಾಗಲು ಯುವತಿಯರ ವಿವರ ಹುಡುಕುತ್ತಿದ್ದರು. ಫೆ.4 ರಂದು ವಾಟ್ಸ್‌ಆ್ಯಪ್‌ ಕಾಲ್‌ ಮಾಡಿದ್ದ ಯುವತಿಯೊಬ್ಬಳು ಲಕ್ಷ್ಮಿ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದಳು. ಬಳಿಕ ಇಬ್ಬರು ಕೆಲ ದಿನಗಳ‌ ಕಾಲ ಫೋನ್‌ನಲ್ಲಿಯೇ ಮಾತುಕತೆ ನಡೆಸಿದ್ದರು. ಭವಿಷ್ಯ ದೃಷ್ಟಿಯಿಂದ ತಾನು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದ್ದೀನಿ ಎಂದು ಅನಿಲ್‌ಕುಮಾರ್‌ಗೆ ಹೇಳಿ ನೀವು ಕೂಡ ಕ್ರಿಪ್ಟೋ/ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಅನಿಲ್‌ಗೆ ಆಮಿಷವೊಡ್ಡಿದ್ದಳು.

ಆನ್‌ಲೈನ್‌ನಲ್ಲಿ ಹೂಡಿಕೆ ಮಾಡು ಮದುವೆ ಬಳಿಕ ಅದೇ ಹಣದಲ್ಲಿ ಲೈಫ್‌ ಸೆಟಲ್ ಆಗಬಹುದು ಎಂದು ಹೇಳಿದ್ದಳು. ಇದಕ್ಕೆ ಅನಿಲ್‌ ಈಗ ಬೇಡ ಮದುವೆ ಬಳಿಕ ನೋಡೋಣ ಎಂದಿದ್ದರು. ಆದರೂ ಕೂಡ ಹಣ ಹೂಡಿಕೆ ಮಾಡುವಂತೆ ಲಕ್ಷ್ಮಿ ಪ್ರೇರೇಪಿಸಿದ್ದಳು. ನಂತರ ಆಕೆಯ ಒತ್ತಡಕ್ಕೆ ಮಣಿದ ಅನಿಲ್‌ ಆಕೆ ನೀಡಿದ ವೆಬ್‌ಸೈಟ್‌ನಲ್ಲಿ ಆರಂಭದಲ್ಲಿ ₹60 ಸಾವಿರ ಹೂಡಿಕೆ ಮಾಡಿದ್ದರು. ನಂತರ ವಿವಿಧ ಬ್ಯಾಂಕ್‌ಗಳಲ್ಲಿ ಲೋನ್‌ ಪಡೆದು ಹಂತಹಂತವಾಗಿ ₹35 ಲಕ್ಷ ಹೂಡಿಕೆ ಮಾಡಿದ್ದರು. ಬಳಿಕ ಲಾಭದ ಹಣ ಪಡೆಯಲು ಹೋದಾಗ ಖಾತೆಯೇ ಡಿಲೀಟ್ ಆಗಿತ್ತು. ನಂಬರ್ ಕೊಟ್ಟಿದ್ದ ಯುವತಿಯ ಮೊಬೈಲ್ ಕೂಡ ಸ್ವಿಚ್ ಆಫ್‌ ಆಗಿತ್ತು. ಕೊನೆಗೆ ತಾನೂ ಮೋಸ ಹೋಗಿರುವುದನ್ನು ಅರಿತ ಅನಿಲ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿಕೊಂಡಿರುವ ಆಗ್ನೇಯ ವಿಭಾಗ ಸೈಬರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳಿ ಇಲ್ಲದ ನೀಲಿ ಮಾರ್ಗಕ್ಕೆ ಮೆಟ್ರೋ ಬಂತು
ಸಾಧಕರ ಸ್ಮರಣೆ ಮಾಡುತ್ತಿರಿ: ಬರಗೂರು