ಕರ್ನಾಟಕದ ಇತಿಹಾಸ ಎಲ್ಲರೂ ಅರಿಯಲಿ: ಸಿ.ಸಿ. ಪಾಟೀಲ

KannadaprabhaNewsNetwork |  
Published : Nov 02, 2026, 03:30 AM IST
(1ಎನ್.ಆರ್.ಡಿ1 ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು.)  | Kannada Prabha

ಸಾರಾಂಶ

ಕರ್ನಾಟಕ ಏಕೀಕರಣಗೊಳ್ಳಲು ಹಲವಾರು ಹೋರಾಟಗಾರರ ತ್ಯಾಗ, ಬಲಿದಾನವಿದೆ. ಕನ್ನಡ, ಕರ್ನಾಟಕದ ಇತಿಹಾಸ ಎಲ್ಲರೂ ಅರಿಯಬೇಕು.

ಕನ್ನಡಪ್ರಭ ವಾರ್ತೆ ನರಗುಂದ

ಕರ್ನಾಟಕ ಏಕೀಕರಣಗೊಳ್ಳಲು ಹಲವಾರು ಹೋರಾಟಗಾರರ ತ್ಯಾಗ, ಬಲಿದಾನವಿದೆ. ಕನ್ನಡ, ಕರ್ನಾಟಕದ ಇತಿಹಾಸ ಎಲ್ಲರೂ ಅರಿಯಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಹಳೆ ಪುರಸಭೆ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಪುರಸಭೆ ಆಶ್ರಯದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ಸಂಸ್ಕೃತಿಗೆ ಪ್ರಾಚೀನ ಕಾಲದಿಂದಲೂ ವಿವಿಧ ರಾಜಮನೆತನಗಳು ಅಪಾರ ಕೊಡುಗೆ ನೀಡಿವೆ. ಕನ್ನಡ ಶ್ರೀಮಂತಗೊಳ್ಳಲು ಕಾರಣವಾಗಿವೆ, ವಚನಕಾರರು, ದಾಸರು ತಮ್ಮ ವಚನ, ಕೀರ್ತನೆ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ. ಕರ್ನಾಟಕ ವಿವಿಧ. ಸಂಸ್ಕೃತಿಯ ಸಂಗಮವಾಗಿದೆ. ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯ ಬೆಳೆದು ಬಂದಿದೆ. ಇಂಥಹ ಸಾಹಿತ್ಯ, ಭಾಷೆ ಅರಿತು ಕನ್ನಡಿಗರು ಸ್ವಾಭಿಮಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಶ್ರೀ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಮು ಎಂ.ಎಸ್., ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಗದಗ ಜಿಲ್ಲೆ ಕೊಡುಗೆ ಅಪಾರ. ಕನ್ನಡ ಬೆಳೆಯಲು ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯಾಗಬೇಕಿದೆ. 1 ರಿಂದ 10ನೇ ತರಗತಿಗಳವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಮಕ್ಕಳಗೆ ಶಿಕ್ಷಣ ನೀಡಬೇಕು ಎಂದರು.

ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ ಕನ್ನಡಿಗರು ಕನ್ನಡದ ಉಳಿವಿಗೆ ಶ್ರಮಿಸಬೇಕು ಎಂದರು.

ಸಮಾರಂಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ ಚಿನಗುಂಡಿ, ಪುರಸಭೆ ಮುಖ್ಯಾಧಿಕಾರಿ ಸುಭಾಸ ಖುದಾನಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ಪಾಟೀಲ, ರಾಮಕುಮಾರ್ ಪ್ರಸಾದ, ಸಿಡಿಪಿಒ ವೆಂಕಪ್ಪ ಗಿರಿತಮ್ಮಣ್ಣವರ, ಕನ್ನಡ ಸಂಘಟನೆಗಳ ಯಶವಂತ ನಡವಿನಮನಿ, ನಬೀಸಾಬ ಕಿಲ್ಲೆದಾರ, ರಾಘವೇಂದ್ರ ಗುಜಮಾಗಡಿ, ರವಿ.ಚಿಂತಾಲ, ಚನ್ನಬಸಪ್ಪ ನಂದಿ ಇದ್ದರು.

ಎಂ.ಎಸ್. ಕುರಿ ಸ್ವಾಗತಿಸಿದರು. ಎಸ್.ವೈ. ಸುರಕೋಡ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ