ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ವಿನಾಯಕ ನಗರದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ ೫೦ನೇ ವರ್ಷದ ಗಣೇಶೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಡಳಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ ನಾವೆಲ್ಲರೂ ಪಯಣ ಮಾಡುತ್ತಿದ್ದೇವೆ. ಸ್ನೇಹ ನಮ್ಮೆಲ್ಲರ ಜೀವನದ ಅವಿಭಾಜ್ಯವಾಗಬೇಕು. ಪ್ರತಿಯೊಬ್ಬರೂ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸದಿಂದ ಬಾಳ್ವೆ ನಡೆಸಿದರೆ ಸಮಾಜ ಸುಭಿಕ್ಷವಾಗಿರುತ್ತದೆ ಎಂದು ತಿಳಿಸಿದರು.ಮನುಷ್ಯನಿಗೆ ಆಸೆ ಇರಬೇಕು, ದುರಾಸೆ ಇರಬಾರದು. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.
ಇಷ್ಟು ವರ್ಷಗಳಲ್ಲಿ ಕರ್ನಾಟಕದ ಜನತೆ ಪ್ರೀತಿ, ವಿಶ್ವಾಸವನ್ನು ಸಂಪಾದನೆ ಮಾಡಿದ್ದೇನೆ. ಇನ್ನೂ ಅವರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಮಾಡುತ್ತೇನೆ. ಮುಂದೆಯೂ ನನಗೆ ರಾಜ್ಯದ ಜನತೆ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದಬೇಕು ಎಂದು ಅವರು ಹೇಳಿದರು.
ನಮ್ಮ ಮಂಡಳಿ ಕಾರ್ಯಕ್ರಮಗಳಿಗೆ ಶ್ರೀನಾಥ್ ಬಂದು ಭಾಗವಹಿಸಿ ವಿಘ್ನೇಶ್ವರ ಆಶೀರ್ವಾದ ಪಡೆದು ಹೋಗುತ್ತಾರೆ. ಅವರು ಇನ್ನು ನೂರು ಕಾಲ ಬಾಳಿ ಬದುಕಲಿ. ಗಣಪತಿ ಅವರಿಗೆ ಆಯುರ್ ಆರೋಗ್ಯ ದಯಪಾಲಿಸಲಿ ಎಂದು ಹಾರೈಸಿದರು.
ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ಅಧ್ಯಕ್ಷ ಪ್ರಭು, ಉಪಾಧ್ಯಕ್ಷ ಟಿ.ಎಚ್. ಪ್ರಸನ್ನಕುಮಾರ್, ಕಾರ್ಯದರ್ಶಿ ಜಿ.ಎಸ್. ಸಿದ್ದರಾಜು, ಸಹ ಕಾರ್ಯದರ್ಶಿ ಕಲ್ಯಾಣ್‌ಕುಮಾರ್, ಖಜಾಂಚಿ ಎಂ.ಎನ್. ಉಮಾಶಂಕರ್, ಪ್ರಚಾರ ಸಮಿತಿಯ ರೇಣುಕ ಪರಮೇಶ್, ನಿರ್ದೇಶಕರಾದ ರಾಘವೇಂದ್ರ, ಕೆ.ನರಸಿಂಹಮೂರ್ತಿ, ಜಿ.ಸಿ. ವಿರೂಪಾಕ್ಷ, ಡಾ.ಅನುಸೂಯ ರುದ್ರಪ್ರಸಾದ್, ಜಗಜ್ಯೋತಿ ಸಿದ್ದರಾಮಯ್ಯ, ಟಿ.ಎಚ್. ಮಹೇಶ್, ಪದ್ಮರಾಜು ಟಿ.ಕೆ., ಎಚ್.ಆರ್. ನಾಗೇಶ್, ಟಿ.ಆರ್. ನಟರಾಜು, ಇಂದ್ರಾಣಿ ಪ್ರಕಾಶ್, ಆದರ್ಶ, ಸುರೇಶ್‌ಕುಮಾರ್, ಟಿ.ಎಂ. ಕುಮಾರಸ್ವಾಮಿ, ಎ.ಆರ್. ಶ್ರೀನಾಥ್, ಜಿ.ಸಿ. ಬಸವರಾಜು, ಚಿಕ್ಕಣ್ಣ, ಕೋರಿ ಮಂಜುನಾಥ್, ಆಡಿಟರ್ ಆಂಜಿನಪ್ಪ, ಬಾವಿಕಟ್ಟೆ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.