ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ (ಜೆಎಸ್ಸೆಸ್) ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಯಾವ ಸಮಾಜದ ಮಕ್ಕಳ ಕಣ್ಣುಗಳು ಮಿನುಗುತ್ತವೆಯೇ ಆ ಸಮಾಜದ ಭವಿಷ್ಯ ಉಜ್ವಲವಾಗಿರುತ್ತದೆ. ಅದೇ ಮಕ್ಕಳ ಕಣ್ಣು ಮಂಕಾಗಿದ್ದರೆ ಆ ಸಮಾಜಕ್ಕೆ ಭವಿಷ್ಯವಿಲ್ಲ. ನಮ್ಮ ಮಕ್ಕಳ ಕಣ್ಣುಗಳಲ್ಲಿ ಮಿಂಚಿನ ಓಟ ಕಾಣುತ್ತಿದೆ. ಖುಷಿ ಖುಷಿಯಿಂದ ಇಲ್ಲಿಯ ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲಿ. ಜೆಎಸ್ಸೆಸ್ ಸಂಸ್ಥೆಯು ಸಮಾಜಕ್ಕೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಹಾರೈಸಿದರು.ಶುಭಾಶೀರ್ವಚನ ನೀಡಿದ ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ, ಗುಣಮಟ್ಟದ ಶಿಕ್ಷಣದಿಂದ ಮಾತ್ರ ಬದುಕು ಉಜ್ವಲವಾಗಲು ಸಾಧ್ಯ. ಅಂತಹ ಶಿಕ್ಷಣವನ್ನು ಜನತಾ ಶಿಕ್ಷಣ ಸಮಿತಿ ನೀಡುತ್ತಿದೆ. ಕಷ್ಟದ ಸಮಯದಲ್ಲೇ ಸಂಸ್ಥೆಯನ್ನು ಕೈಗೆ ತೆಗೆದುಕೊಂಡು ಹೋರಾಟದ ಮೂಲಕವೇ ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ವೀರೇಂದ್ರ ಹೆಗ್ಗಡೆ ಹಾಗೂ ವಜ್ರಕುಮಾರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಅಹಿಂಸೆ ಹಾಗೂ ಸತ್ಯದ ಮಾರ್ಗದಲ್ಲಿ ಸಾಗುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಜೀವನ ಅನೇಕರಿಗೆ ಅನುಕರಣೀಯ. ಗ್ರಾಮೀಣದಲ್ಲಿ ಮಹಿಳೆಯರಿಗೆ ಸಂಘ ರಚಿಸಿ ಸ್ವಾವಲಂಬಿ ಜೀವನಕ್ಕೆ ನೆರವಾಗಿದ್ದಾರೆ. ಯಾವತ್ತೂ ಅಹಿಂಸೆ, ಸತ್ಯದಲ್ಲಿ ನಡೆದ ಹೆಗ್ಗಡೆಯವರು ನಮಗೆಲ್ಲಾ ಮಾದರಿ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ, ಜೆಎಸ್ಸೆಸ್ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕರೆದು ಧಾರವಾಡದ ಜೆಎಸ್ಸೆಸ್ ಸಂಸ್ಥೆಯನ್ನು ನನ್ನ ಕೈಗಿತ್ತರು. ಡಾ. ನ. ವಜ್ರಕುಮಾರ ಅವರೇ ಈ ಸಂಸ್ಥೆಗೆ ಸೂಕ್ತರೆಂದು ಅವರ ಕೈಗೆ ನೀಡಿದೆ. 50ನೇ ವರ್ಷಾಚರಣೆ ಮಾಡಲು ತುಂಬ ಉತ್ಸುಕರಾಗಿದ್ದ ಅವರೀಗ ಇಲ್ಲ. ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಅವರ ಸಮರ್ಪಣಾ ಮನೋಭಾವವೇ ಕಾರಣ. ಅರವ ಪ್ರೀತಿ, ಸ್ನೇಹದಿಂದ, ಸಿಬ್ಬಂದಿ ಪರಿಶ್ರಮದಿಂದ ಸಂಸ್ಥೆಯ ಉತ್ತುಂಗಕ್ಕೆ ಬೆಳೆದಿದೆ ಎಂದರು.
ಎಸ್‌ಡಿಎಂ ಹಾಗೂ ಜೆಎಸ್ಸೆಸ್ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಸ್ತು, ವ್ಯವಸ್ಥೆ, ಸ್ವಚ್ಛತೆ ಹಾಗೂ ಚಾರಿತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸಂಸ್ಥೆಗಳ ಶಿಕ್ಷಕರ, ಸಿಬ್ಬಂದಿ ಸೇವೆ, ಜನರ ಪ್ರಿತಿಯಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಸಹ ಶೈಕ್ಷಣಿಕ ಗುಣಮಟ್ಟ, ಶಿಸ್ತು ಕಾಪಾಡಿಕೊಳ್ಳುತ್ತೇವೆ ಎಂದು ಧರ್ಮಾಧಿಕಾರಿ ಡಾ. ಡಿ . ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.