ಬುದ್ಧ, ಬಸವ, ಅಂಬೇಡ್ಕರ, ರಾಯಣ್ಣ ಆಶಯ ಈಡೇರಲಿ: ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork |  
Published : Jul 21, 2026, 02:15 AM IST
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಾಗೂ ಪ್ರಸ್ತುತ ಡಿ.ಕೆ. ಶಿವಕುಮಾರ ಸರ್ಕಾರವು ಅಭಿವೃದ್ಧಿ ಜತೆಗೆ ಸರ್ವರ ಹಿತ ಕಾಯಲು ಬದ್ಧವಾಗಿದೆ.

ಗಜೇಂದ್ರಗಡ: ಬುದ್ಧ, ಬಸವ, ಅಂಬೇಡ್ಕರ ಹಾಗೂ ರಾಯಣ್ಣ ಸೇರಿ ಅನೇಕ ಮಹಾನ್ ನಾಯಕರ ಆಶಯಗಳನ್ನು ಎತ್ತಿ ಹಿಡಿಯವ ಕೆಲಸವಾಗಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸ್ಥಳೀಯ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಎಚ್.ಎಸ್. ಸೋಂಪುರ ಜನ್ಮದಿನಾಚರಣೆ ನಿಮಿತ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ಸೋಮವಾರ ನಡೆದ "ಸರ್ವ ಜನಾಂಗದ ಶಾಂತಿಯ ತೋಟ ಜಾಗೃತಿ ಸಮಾವೇಶ " ಹಾಗೂ "ಪ್ರತಿಭಾ ಪುರಸ್ಕಾರ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಾಗೂ ಪ್ರಸ್ತುತ ಡಿ.ಕೆ. ಶಿವಕುಮಾರ ಸರ್ಕಾರವು ಅಭಿವೃದ್ಧಿ ಜತೆಗೆ ಸರ್ವರ ಹಿತ ಕಾಯಲು ಬದ್ಧವಾಗಿದೆ ಎಂದರು.

ಸುಲಭವಾಗಿರದ ಯಶಸ್ಸನ್ನು ಸಾಧಿಸಿದ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮ, ಬಡಾವಣೆ ಹಾಗೂ ಗಲ್ಲಿಗಳಲ್ಲಿನ ಪ್ರತಿಭಾನ್ವಿತರನ್ನು ಗುರುತಿಸಿ ೧೧೦ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.

ಸನ್ಮಾನ, ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ದೊಡ್ಡ ಮೈಲಿಗಲ್ಲಾಗಲಿದೆ. ಇಂದಿನ ವಿದ್ಯಾರ್ಥಿಗಳು ನಮ್ಮ ದೇಶದ ಮುಂದಿನ ಆಸ್ತಿಯಾಗಿದ್ದಾರೆ. ಅವರನ್ನು ಪ್ರೋತ್ಸಾಹಿಸಲು ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದು ಅನುಕರಣೀಯ ಎಂದರು.

ಬಹಳಷ್ಟು ಜನರು ಸಮಾಜಸೇವಕರು ಎಂದು ಹೇಳಿಕೊಂಡು ರಾಜಕೀಯ ಲಾಭ ಪಡೆದು ಅಧಿಕಾರದಲ್ಲಿರುತ್ತಾರೆ. ಅಂಥವರಿಂದ ಸಮಾಜಕ್ಕೆ ಯಾವುದೇ ಲಾಭವಾಗುವುದಿಲ್ಲ. ಹೀಗಾಗಿ ಅರ್ಜಿ ನೀಡಿದವರನ್ನು ನಾವು ಗುರುತಿಸುವುದಿಲ್ಲ. ಸಂಘಟನೆ, ಹೋರಾಟ ಮಾಡುವವರನ್ನು ನಾವೇ ಗುರುತಿಸುತ್ತೇವೆ ಎಂದರು.

ಕಾಂಗ್ರೆಸ್ ಮುಖಂಡ ಟಿ. ಈಶ್ವರ ಮಾತನಾಡಿ, ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಈ ಬಾರಿ ರೋಣ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಶಾಸಕ ಜಿ.ಎಸ್. ಪಾಟೀಲ್ ಅವರು, ನನೆಗುದಿಗೆ ಬಿದ್ದಿದ್ದ ಬೈಪಾಸ್ ರಸ್ತೆಗೆ ಸಚಿವ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡುವುದರ ಜತೆಗೆ ಪಟ್ಟಣದ ನ್ಯಾಯಾಲಯ ಕಟ್ಟಡ ಪೂರ್ಣಗೊಳಿಸಲು ಭರವಸೆ ನೀಡಿದ್ದಾರೆ. ರಾಜ್ಯದ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುತ್ತಾ ಬೆಳೆದ ಯುವಕ ಎಚ್.ಎಸ್. ಸೋಂಪುರ ಜನ್ಮದಿನಾಚರಣೆಯಲ್ಲಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿ ಎಂದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ಸೋಂಪುರ ಮಾತನಾಡಿ, ಸತೀಶ ಜಾರಕಿಹೊಳಿ ಅವರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮತ್ತು ರಾಯಣ್ಣ ಅವರ ವಿಚಾರಧಾರೆಗಳೊಂದಿಗೆ ರಾಜ್ಯವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಅಹಿಂದ ಮುಂದಿನ ಶಕ್ತಿ ಸತೀಶ ಜಾರಕಿಹೊಳಿ ಅವರೊಂದಿಗೆ ಕೆಲಸ ಮಾಡಲು ಸದಾ ಸಿದ್ಧರಿದ್ದೇವೆ ಎಂದರು.ಬಾಗಲಕೋಟೆ ಶಾಸಕ ಉಮೇಶ ಮೇಟಿ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಅಶೋಕ ಬಾಗಮಾರ ಮಾತನಾಡಿದರು. ಧಾರವಾಡದ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು, ಸೈಯದ್ ನಿಜಾಮುದ್ದೀನ ಶಾ ಆಶ್ರಫಿ ಸಾನ್ನಿಧ್ಯ ವಹಿಸಿದ್ದರು. ಸುನೀಲ ಹನಮಣ್ಣನವರ, ಜಿ.ಜಿ. ಮತ್ತಿಕಟ್ಟಿ, ಅನಂತ ನಾಯಕ, ಮಿಥುನ ಪಾಟೀಲ, ಸಿದ್ದಣ್ಣ ಬಂಡಿ, ವೀರಣ್ಣ ಶೆಟ್ಟರ, ಸೋಮನಾಥ ಕಳ್ಳಿಮನಿ, ಶರಣಪ್ಪ ಬೆಟಗೇರಿ, ಮಾಲತಿ ನಾಯಕ, ಶಿವರಾಜ ಘೋರ್ಪಡೆ, ರಫೀಕ್ ತೋರಗಲ್, ಶಶಿಧರ ಹೂಗಾರ, ಶ್ರೀಧರ ಬಿದರಳ್ಳಿ, ರಾಜು ಸಾಂಗ್ಲೀಕರ ಹಾಗೂ ಶರಣಪ್ಪ ಚಳಗೇರಿ, ಬಿ.ಎಸ್. ಶೀಲವಂತರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲರ ಮಾಸಾಶನಕ್ಕೆ ಕುಟುಂಬದ ಆದಾಯ ಮಿತಿ ರದ್ಧತಿಗೆ ಆಗ್ರಹ
ಎಡದಂಡೆ ಭಾಗದ ಕಾಲುವೆಗೆ ನೀರು, ಅಧಿಕಾರಿಗಳ ಜತೆ ವಾಗ್ವಾದ