ಮಧ್ವಾಚಾರ್ಯರ ತತ್ವಗಳು ಮನೆಮನೆಗೆ ತಲುಪಲಿ: ಮಹೇಶ್

KannadaprabhaNewsNetwork |  
Published : Oct 25, 2026, 02:00 AM IST
ಪೋಟೋ | Kannada Prabha

ಸಾರಾಂಶ

ಚಿಕ್ಕಮಗಳೂರುಮಧ್ವಾಚಾರ್ಯರು ತಮ್ಮ ಜ್ಞಾನ ಮತ್ತು ತತ್ವಸಿದ್ಧಾಂತಗಳ ಮೂಲಕ ಜಗತ್ತಿಗೆ ಭಕ್ತಿ ಮಾರ್ಗದ ಸಂದೇಶ ಸಾರಿದ ಮಹಾನ್ ತತ್ವಜ್ಞಾನಿ ಎಂದು ಕರ್ನಾಟಕ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.

ಜಿಲ್ಲಾಡಳಿತದಿಂದ ಶ್ರೀ ಮಧ್ವಾಚಾರ್ಯರ ಜಯಂತಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಧ್ವಾಚಾರ್ಯರು ತಮ್ಮ ಜ್ಞಾನ ಮತ್ತು ತತ್ವಸಿದ್ಧಾಂತಗಳ ಮೂಲಕ ಜಗತ್ತಿಗೆ ಭಕ್ತಿ ಮಾರ್ಗದ ಸಂದೇಶ ಸಾರಿದ ಮಹಾನ್ ತತ್ವಜ್ಞಾನಿ ಎಂದು ಕರ್ನಾಟಕ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶ್ರೀ ಮಧ್ವಾಚಾರ್ಯರ ಜಯಂತಿಯಲ್ಲಿ ಮಾತನಾಡಿ ಮಧ್ವಾಚಾರ್ಯರ ಜೀವನ, ಸಾಧನೆ ಹಾಗೂ ದ್ವೈತ ಸಿದ್ಧಾಂತದ ಮಹತ್ವ ಸ್ಮರಿಸಿದರು.13ನೇ ಶತಮಾನದಲ್ಲಿ ಜನಿಸಿದ ಮಧ್ವಾಚಾರ್ಯರು ಬಾಲ್ಯದಲ್ಲಿಯೇ ಅಪಾರ ಜ್ಞಾನ ಹೊಂದಿದ್ದರು. ಏಳನೇ ವಯಸ್ಸಿ ನಲ್ಲಿಯೇ ಜ್ಞಾನಾರ್ಜನೆಗೆ ಮುಂದಾಗಿ, 8ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ ಅವರ ಜೀವನ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರು.ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತದಲ್ಲಿ ಆತ್ಮ ಮತ್ತು ಪರಮಾತ್ಮ ವಿಭಿನ್ನ ಎಂಬ ತತ್ವ ಪ್ರಮುಖವಾಗಿದೆ. ಭಕ್ತಿಯ ಮೂಲಕ ಮುಕ್ತಿ ಪಡೆಯಬಹುದು ಎಂಬ ಸಂದೇಶ ಸಾರಿದ ಅವರು, ತತ್ವಗಳು ಹಾಗೂ ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ಜ್ಞಾನ ಮತ್ತು ಭಕ್ತಿಯ ಅರಿವು ಮೂಡಿಸಿದರು ಎಂದು ತಿಳಿಸಿದರು.ಮಧ್ವಾಚಾರ್ಯರ ಜೀವನದಲ್ಲಿ ನಡೆದ ಹಲವು ಪವಾಡಗಳು ಅವರ ದೈವಿಕ ಶಕ್ತಿ ಪ್ರತಿಬಿಂಬಿಸುತ್ತವೆ. ತಂದೆ ಕಷ್ಟದಲ್ಲಿದ್ದಾಗ ಹುಣಸೆ ಬೀಜವನ್ನು ಚಿನ್ನವನ್ನಾಗಿ ಮಾಡಿದ ಪ್ರಸಂಗ ಅವರ ಜೀವನದ ಪ್ರಮುಖ ಘಟನೆಯಾಗಿದೆ ಎಂದರು.ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವಗಳು ಇಂದಿಗೂ ಪ್ರಸ್ತುತ. ಅವರ ಆದರ್ಶ ಮನೆಮನೆಗೆ ತಲುಪಿಸುವ ಕೆಲಸ ವಾಗಬೇಕು. ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಭಕ್ತಿ, ಜ್ಞಾನ ಮತ್ತು ಸದಾಚಾರ ಬೆಳೆಸಬೇಕು ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಪುರೋಹಿತ ಅಶ್ವತ್ ನಾರಾಯಣ ಜೋಷಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಜಿ., ರಾಮರಾವ್ ದೇಸಾಯಿ, ಪುರೋಹಿತ ಅಶ್ವತ್ ನಾರಾಯಣ ಜೋಷಿ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ್ ಜೋಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಂಜಾದಾರದ ವಿರುದ್ಧ ಮುಂದುವರಿದ ಪೊಲೀಸರ ಸಮರ
ಒಂದೇ ಮಳೆಗೆ ಒಳಚರಂಡಿ ಅವ್ಯವಸ್ಥೆ ಬಯಲು!