- ಆದಿಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಜನಜಾಗೃತಿ ಸಮಾರಂಭದಲ್ಲಿ ಮುಖಂಡ ಅಥಣಿ ವೀರಣ್ಣ ಸಲಹೆ
ಪ್ರಸ್ತುತ ದಿನಗಳಲ್ಲಿ ರಾಜಕೀಯವು ಪರಿಸ್ಥಿತಿ ಸೂಕ್ಷ್ಮವಾಗುತ್ತಿದ್ದು, ವೀರಶೈವ ಲಿಂಗಾಯತ ನಾಯಕರು ರಾಜಕೀಯವಾಗಿ ಬೆಳೆಯುವ ಜೊತೆಗೆ ಸರ್ಕಾರದ ಪ್ರಮುಖ ಹುದ್ದೆಗಳನ್ನು ನಿರ್ವಹಿಸುವಂತಹ ಪ್ರತಿಭೆ, ಶಕ್ತಿ ಪಡೆಯಬೇಕಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ ಹೇಳಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಆದಿಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಜನಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯದ ನಾಯಕರು ಉನ್ನತ ರಾಜಕೀಯ ಹುದ್ದೆಗಳನ್ನೇ ಅಲಂಕರಿಸುವಂತಾಗಬೇಕು ಎಂದರು.ರಾಜ್ಯದಲ್ಲಿ ಶೇ.21ರಷ್ಟು ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮುದಾಯವು ಸರ್ಕಾರ ಕೈಗೊಂಡಿದ್ದ ಜನಗಣತಿಯಲ್ಲಿ ಶೇ.14ರಷ್ಟು ಮಾತ್ರ ಇದೆಯೆಂಬ ಮಾಹಿತಿ ಲಭಿಸಿದೆ. ಒಂದುವೇಳೆ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ನಮ್ಮ ಸಮುದಾಯದ ಅಂಕಿಅಂಶ ನೀಡಿದ್ದರೆ ಜನಗಣತಿ ಬಗ್ಗೆಯೇ ಅನುಮಾನಗಳು ಮೂಡುತ್ತವೆ. ಇಂತಹ ಜಾತಿಗಣತಿ ವರದಿ ಈಗಾಗಲೇ ಮಹಾಸಭಾ ತೀವ್ರ ವಿರೋಧವನ್ನೇ ವ್ಯಕ್ತಪಡಿಸಿದೆ. ಒಕ್ಕಲಿಗ ಸಮಾಜ ನಮ್ಮೊಂದಿಗೆ ಧ್ವನಿಗೂಡಿಸಿದೆ ಎಂದು ತಿಳಿಸಿದರು.
ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಅಪೂರ್ಣ ಹೋಟೆಲ್ ಸಮೂಹಗಳ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಶ್ರೀ ರೇಣುಕಾಚಾರ್ಯರು, ಶ್ರೀ ಬಸವಣ್ಣ ಸೇರಿದಂತೆ ಎಲ್ಲ ಮಹನೀಯರು ಜೀವನ ಸುಧಾರಣೆ ಸಂದೇಶ ಸಾರಿದ್ದಾರೆ. ಮಠಾಧೀಶರು ಸಹ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಗುರು ರೇಣುಕಾಚಾರ್ಯರ ಕಾಲದಿಂದ ಶಿಕ್ಷಣ, ಅನ್ನ ದಾಸೋಹ, ಸಮಾಜ ಜಾಗೃತಿ ಕಾರ್ಯರು ನಿರಂತರವಾಗಿ ನಮ್ಮ ನೆಲದಲ್ಲಿ ನಡೆದುಕೊಂಡೇ ಬರುತ್ತಿದೆ. ಇಂದಿಗೂ ಅಂತಹ ಪರಂಪರೆ ನಮ್ಮ ನಾಡಿನ ಮಠಗಳು ಮುಂದುವರಿಸುತ್ತಿವೆ ಎಂದರು.
ಕನ್ನಡ ಪಂಡಿತ ಶತಾಯುಷಿ ಎಸ್.ಎಂ. ರುದ್ರಮುನಿಯಯ್ಯ ಅವರಿಗೆ ಆದಿ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು. ಸಮಾರಂಭಕ್ಕೂ ಮುನ್ನ ಶ್ರೀ ರೇಣುಕರ ಭಾವಚಿತ್ರವನ್ನು ಸಾರೋಟು ಮೂಲಕ ಡಿಸಿ ಕಚೇರಿಯಿಂದ ರೇಣುಕಾ ಮಂದಿರವರೆಗೆ ಅದ್ಧೂರಿ ಮೆರವಣಿಗೆಯಲ್ಲಿ ತರಲಾಯಿತು.
* ಟಾಪ್ ಕೋಟ್ ಜನರಲ್ಲಿ ಜಾಗೃತಿ ಮೂಡಿಸಲು, ಶಾಂತಿ, ಸುವ್ಯವಸ್ಥೆ, ನೆಮ್ಮದಿ ನೆಲೆಸಲಿ ಎಂಬುದು ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಪೂಜ್ಯರು, ಮಹನೀಯರು, ಸಾಧಕರ ಜಯಂತಿ ಆಚರಿಸಲಾಗುತ್ತಿದೆ. ಈ ಮೂಲಕ ಅಂತಹವರ ಆದರ್ಶ, ಧ್ಯೇಯ ಪಾಲನೆ ಮಾಡೋಣ
- - - -12ಕೆಡಿವಿಜಿ1, 2.ಜೆಪಿಜಿ: