ಕನ್ನಡಪ್ರಭ ವಾರ್ತೆ ರಾಮದುರ್ಗ
ಪಟ್ಟಣದ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ರಡ್ಡಿ ನೌಕರರ ಸಂಘದಿಂದ ಹಮ್ಮಿಕೊಂಡ ಮಹಾಯೋಗಿ ಶ್ರೀ ವೇಮನರ 612 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಡ್ಡಿ ಸಮಾಜದ ಮುಖಂಡ ಡಾ ಕೆ.ವಿ. ಪಾಟೀಲ ಮಾತನಾಡಿ, ರಾಜ ಮನೆತನದಲ್ಲಿ ಹುಟ್ಟಿದ ವೇಮನರು ಎಲ್ಲವನ್ನು ತ್ಯಜಿಸಿ ಮಹಾಯೋಗಿಯಾದರು. ಅವರ ವಚನಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಮಾಜಿ ತಾ.ಪಂ ಅಧ್ಯಕ್ಷೆ ಮಂಜುಳಾ ದೇವರಡ್ಡಿ ಮಾತನಾಡಿ, ವೇಮನರು ಹಾಗೂ ಹೇಮರಡ್ಡಿ ಮಲ್ಲಮ್ಮ ರಡ್ಡಿಯಾದರು ಅವರ ಆದರ್ಶಗಳನ್ನು ಎಲ್ಲರೂ ನೆನೆಯುತ್ತಾರೆ. ರಡ್ಡಿ ಸಮುದಾಯ ಶ್ರಮಿಕ ವರ್ಗದವರಾಗಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಸಮುದಾಯ ವಾಗಿದೆ ಎಂದರು.ಸಾರಿಗೆ ಘಟಕ ವ್ಯವಸ್ಥಾಪಕ ಎಚ್.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಡ್ಡಿ ಸಮಾಜದ ಮುಖಂಡ ಚನ್ನಬಸವರಾಜ ಹಿರೇರಡ್ಡಿ, ಜಿ.ಬಿ. ರಂಗನಗೌಡ್ರ, ವಾ.ಕ.ರಾ.ಸಾ. ಸಂಸ್ಥೆ ರಡ್ಡಿ ನೌಕರರ ಸಂಘದ ಅಧ್ಯಕ್ಷ ಶಿವರಡ್ಡಿ ಮಾಸ್ತಿ ಮಾತನಾಡಿದರು. ಶಿಕ್ಷಕ ಆನಂದ ಪಾಟೀಲ ಹಾಗೂ ಪವಿತ್ರಾ ಅವರಾದಿ ವೇಮನರ ಕುರಿತು ಉಪನ್ಯಾಸ ನೀಡಿದರು.
ತಾಲೂಕಾ ಆಡಳಿತದಿಂದ ಜಯಂತಿ ಆಚರಣೆ: ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಮಹಾಯೋಗಿ ವೇಮನರ ಜಯಂತಿ ಆಚರಿಸಲಾಯಿತು. ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ತಾ.ಪಂ ಇಒ ಪ್ರವೀಣಕುಮಾರ ಸಾಲಿ ಸೇರಿದಂತೆ ರಡ್ಡಿ ಸಮಾಜದ ಮುಖಂಡರು ಇದ್ದರು.