ದೇವರು ಮೆಚ್ಚುವಂತೆ ಬದುಕ ಇರಲಿ

KannadaprabhaNewsNetwork |  
Published : Jul 30, 2025, 01:03 AM IST
ಸಿದ್ದಲಿಂಗ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ದೇವರು ಮೆಚ್ಚುವ ಹಾಗೇ ಬದುಕು ಇರಬೇಕು ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಬಾಲಯೋಗಿ ಸಿದ್ಧಲಿಂಗ ದೇವರು ಹೇಳಿದರು. ತಾಲೂಕಿನ ಹೊರ್ತಿಯ ರೇವಣಸಿದ್ಧೇಶ್ವರ ಹಳೆಗುಡಿಯ ಸಭಾಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ 15 ದಿನಗಳ ಆಧ್ಯಾತ್ಮ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮನುಷ್ಯ ಜನ್ಮವು ಅತ್ಯಂತ ಶ್ರೇಷ್ಠವಾದದ್ದು, ಇರುವಷ್ಟು ದಿನ ಒಳ್ಳೆಯ ಕೆಲಸ ಹಾಗೂ ಪರೋಪಕಾರ ಗುಣಗಳೊಂದಿಗೆ ಮತ್ತು ಇನ್ನೊಬ್ಬರಿಗೆ ನೋವಾಗದ ರೀತಿಯಲ್ಲಿ ಸುಂದರ ಜೀವನ ನಡೆಸುವ ಮೂಲಕ ಭಗವಂತನ ಮೆಚ್ಚುಗೆಗೆ ಪಾತ್ರರಾಗಬೇಕು.

ಕನ್ನಡಪ್ರಭ ವಾರ್ತೆ ಇಂಡಿ

ದೇವರು ಮೆಚ್ಚುವ ಹಾಗೇ ಬದುಕು ಇರಬೇಕು ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಬಾಲಯೋಗಿ ಸಿದ್ಧಲಿಂಗ ದೇವರು ಹೇಳಿದರು. ತಾಲೂಕಿನ ಹೊರ್ತಿಯ ರೇವಣಸಿದ್ಧೇಶ್ವರ ಹಳೆಗುಡಿಯ ಸಭಾಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ 15 ದಿನಗಳ ಆಧ್ಯಾತ್ಮ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮನುಷ್ಯ ಜನ್ಮವು ಅತ್ಯಂತ ಶ್ರೇಷ್ಠವಾದದ್ದು, ಇರುವಷ್ಟು ದಿನ ಒಳ್ಳೆಯ ಕೆಲಸ ಹಾಗೂ ಪರೋಪಕಾರ ಗುಣಗಳೊಂದಿಗೆ ಮತ್ತು ಇನ್ನೊಬ್ಬರಿಗೆ ನೋವಾಗದ ರೀತಿಯಲ್ಲಿ ಸುಂದರ ಜೀವನ ನಡೆಸುವ ಮೂಲಕ ಭಗವಂತನ ಮೆಚ್ಚುಗೆಗೆ ಪಾತ್ರರಾಗಬೇಕು. ಸಮಯಕ್ಕೆ ಮಹತ್ವ ಕೊಟ್ಟಾಗ ನಮಗೆ ಸಮಯವು ಒಂದು ದಿನ ಬೆಲೆ ತಂದು ಕೊಡುತ್ತದೆ. ನಾನು ಇಲ್ಲಿ ನನಗೆ ತಿಳಿದ ಮಟ್ಟಿಗೆ ಪ್ರವಚನವನ್ನು ನೀಡಿ, ನಿಮ್ಮಿಂದ ಇನ್ನಷ್ಟು ಕಲಿಯಲು ಬಂದಿದ್ದೇನೆ ಎಂದು ಹೇಳಿದರು.

ಪುರಾತನ ಐತಿಹಾಸಿಕ ಹಿನ್ನೆಲೆಯುಳ್ಳ ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನವು ಸುಕ್ಷೇತ್ರವಾಗಿ ಹೊರಹೊಮ್ಮಿದೆ. ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಭೂಮಿಯ ಮೇಲೆ ಸುಂದರ ಜೀವನದ ಬದುಕನ್ನು ಕಲಿಯಬೇಕು.ಮಕ್ಕಳನ್ನು ಸುಂಸ್ಕೃತರನ್ನಾಗಿ ಬೆಳೆಸುವ ಜವಾದ್ಬಾರಿ ಪಾಲಕರ ಮೇಲಿದೆ. ಜಾತಿ ರಹಿತ ಸಮಾಜ ನಿರ್ಮಾಣವಾಗಬೇಕು ಎಂದು ಸೋಮನಾಥ ಶಿವಾಚಾರ್ಯರು ಹೇಳಿದರು.

ಹೊರ್ತಿ ಶ್ರೀರೇವಣಸಿದ್ಧೇಶ್ವರ ದೇವಸ್ಥಾನ ಅಧ್ಯಕ್ಷ ಅಣ್ಣಪ್ಪ ಖೈನೂರ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಳಿಕೋಟೆ ವಿರಕ್ತಮಠದ ಅಧ್ಯಕ್ಷ ಮುರಘೆಂದ್ರ ಶಿವಚಾರ್ಯರು, ಆಡಳಿತಾಧಿಕಾರಿ ಮಲ್ಲಿಕಾರ್ಜುನ ಗೋಗಿ, ತಾಳಿಕೋಟೆ ವಿದ್ಯಾವರ್ದಕ ಸಂಘದ ನಿರ್ದೇಶಕ ರಮೇಶ ಸಾಳುಂಕೆ, ಹೊರ್ತಿಯ ಸಹಕಾರಿ ಧುರೀಣ ಶ್ರೀಮಂತ ಇಂಡಿ, ಇಂಡಿ ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪಗೌಡ ಪಾಟೀಲ, ನಿರ್ದೇಶಕ ಗುರಪ್ಪ ಪೂಜಾರಿ, ಸರ್ವೋದಯ ಶಿಕ್ಷಣ ಸಂಸ್ಥೆಯ ರೂವಾರಿ ರೇವಣಸಿದ್ಧ ಪೂಜಾರಿ, ಬುದ್ದಪ್ಪ ಭೋಸಗಿ, ನಿಂಗಣ್ಣ ಬಿರಾದಾರ, ಎಸ್.ಎಸ್.ಪೂಜಾರಿ, ಬಿ.ಜಿ.ಸಾವಕಾರ, ಬಸವರಾಜ ಜಂಬಗಿ ಹಾಗೂ ಹೊರ್ತಿ ಗ್ರಾಮ ಸೇರಿದಂತೆ ಸುತ್ತಲಿನ ನೂರಾರು ಭಕ್ತರು ಉಪಸ್ಥಿತರಿದ್ದರು. ಮಾಸಗಳಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರವಾದ್ದು, ಆದ್ದರಿಂದ ಸಕಲ ಸದ್ಭಕ್ತರು ಜು.28ರಿಂದ ಆಗಷ್ಟ್ರ11ವರೆಗೆ ನಡೆಯವ ಆಧ್ಯಾತ್ಮಿಕ ಚಿಂಥನ-ಮಂಥನ ಪ್ರವಚನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅಣ್ಣಪ್ಪ ಖೈನೂರ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ