ಎಂಸಿಸಿ ಬ್ಯಾಂಕ್‌: ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ, ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jun 16, 2026, 02:45 AM IST
ಫಾ.ಮ್ಯಾಕ್ಸಿಂ ರೊಸಾರಿಯಾ ಉದ್ಘಾಟಿಸಿದರು | Kannada Prabha

ಸಾರಾಂಶ

ಎಂಸಿಸಿ ಬ್ಯಾಂಕ್‌ನ ೨೦೨೫–೨೬ನೇ ಹಣಕಾಸು ವರ್ಷದ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರು ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು: ಎಂಸಿಸಿ ಬ್ಯಾಂಕ್‌ನ ೨೦೨೫–೨೬ನೇ ಹಣಕಾಸು ವರ್ಷದ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರು ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮೆನೇಜರ್‌ ರೆ.ಫಾ.ಮ್ಯಾಕ್ಸಿಂ ರೊಸಾರಿಯೊ ಉದ್ಘಾಟಿಸಿ ಮಾತನಾಡಿ, ಎಂಸಿಸಿ ಬ್ಯಾಂಕ್ ಕ್ಯಾಥೋಲಿಕ್ ಸಮುದಾಯದ ಹೆಮ್ಮೆ ಮತ್ತು ಅಮೂಲ್ಯ ರತ್ನ. ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಸಾಧಿಸಿರುವ ಗಮನಾರ್ಹ ಪ್ರಗತಿ ಶ್ಲಾಘನೀಯ ಎಂದರು.

ಬ್ಯಾಂಕ್‌ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಅಧ್ಯಕ್ಷತೆ ವಹಿಸಿ ಮಾತನಾಡಿ, ೨೦೨೫–೨೬ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ದಾಖಲಿಸಿದ ಐತಿಹಾಸಿಕ ಶೇ.೨೫ ಬೆಳವಣಿಗೆಗೆ ಕಾರಣರಾದ ಸಿಬ್ಬಂದಿಯನ್ನು ಅಭಿನಂದಿಸಿದರು. ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಬಿಜೈ ಲೂರ್ಡ್ಸ್ ಸೆಂಟ್ರಲ್ ಶಾಲೆ ಪ್ರಾಂಶುಪಾಲ ವಂ.ಫಾ.ಜಾನ್ ಎಲ್. ಸಿಕ್ವೇರಾ, ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಎಸಿಪಿ ರವೀಶ್ ಎಸ್. ನಾಯಕ್, ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಇದ್ದರು.

ಪುತ್ತೂರು ಶಾಖೆಯ ವ್ಯವಸ್ಥಾಪಕ ಐರಿನ್ ಡಿಸೋಜಾ, ಬಜ್ಪೆ ಶಾಖೆಯ ಸಿಬ್ಬಂದಿ ವೈಲೆಟ್ ಕ್ರಾಸ್ತಾ ಅವರನ್ನು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗೌರವಿಸಲಾಯಿತು. ಇತ್ತೀಚೆಗೆ ವಿವಾಹವಾದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

೨೦೨೫-೨೬ನೇ ಸಾಲಿನ ಸ್ಟಾರ್ ಅಚೀವರ್ಸ್ ಪ್ರಶಸ್ತಿಯನ್ನು ಕುಲಶೇಖರ ಶಾಖೆಯ ವ್ಯವಸ್ಥಾಪಕಿ ವಿಲ್ಮಾ ಜ್ಯೋತಿ ಸಿಕ್ವೇರಾ, ಮೂಡುಬಿದಿರೆ ಶಾಖೆಯ ಶರೋನ್ ರೊಸಾರಿಯೊ, ಶಿರ್ವ ಶಾಖೆಯ ಅನ್ಸಿಲ್ಲಾ ಫೆರ್ನಾಂಡಿಸ್, ಕುಂದಾಪುರ ಶಾಖೆಯ ಜ್ಯೋತಿ ಬ್ಯಾರೆಟ್ಟೋ, ಬೈಂದೂರು ಶಾಖೆಯ ಸಂದೀಪ್ ಕ್ವಾಡ್ರಂಸ್ ನೀಡಿ ಗೌರವಿಸಲಾಯಿತು. ಠೇವಣಿ ಮತ್ತು ಸಾಲ ವಿಭಾಗದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಯ ಪ್ರಶಸ್ತಿಯನ್ನು ಅಶೋಕನಗರ ಶಾಖೆ ಪಡೆದುಕೊಂಡಿತು. ಠೇವಣಿ ಸಂಗ್ರಹಣಾ ಶ್ರೇಷ್ಠತಾ ಪ್ರಶಸ್ತಿಯನ್ನು ಫೌಂಡರ್ಸ್, ಕುಲಶೇಖರ, ಮೂಡುಬಿದಿರೆ, ಶಿರ್ವ, ಬಜ್ಪೆ, ಕಾರ್ಕಳ ಶಾಖೆಗಳು ಪಡೆದುಕೊಂಡಿತು. ಸಾಲ ಬೆಳವಣಿಗೆ ಶ್ರೇಷ್ಠತಾ ಪ್ರಶಸ್ತಿಯನ್ನು ಕುಂದಾಪುರ, ಪುತ್ತೂರು, ಬಿ.ಸಿ.ರೋಡ್, ಬ್ರಹ್ಮಾವರ ಶಾಖೆಗಳು ಪಡೆದವು. ಕಾಸಾ, ಠೇವಣಿ, ಸಾಲ ಗುರಿಗಳ ಸಾಧನೆಗಾಗಿ ಅತ್ಯುತ್ತಮ ಶಾಖೆ ಸಾಧನೆ ಪ್ರಶಸ್ತಿಯನ್ನು ಉಡುಪಿ, ಬೆಳ್ತಂಗಡಿ, ಬೆಳ್ಮಣ್, ಬೈಂದೂರು, ಸಂತೆಕಟ್ಟೆ ಶಾಖೆಗಳು ಪಡೆದುಕೊಂಡವು. ಅತಿ ಹೆಚ್ಚು ವ್ಯವಹಾರ ವಹಿವಾಟು ಪ್ರಶಸ್ತಿಯನ್ನು ಫೌಂಡರ್ಸ್ ಶಾಖೆ ಪಡೆದುಕೊಂಡಿತು. ಒಂದು ವರ್ಷದ ಮೈಲಿಗಲ್ಲು ಸಾಧನೆ ಪ್ರಶಸ್ತಿಯನ್ನು ಬೆಳ್ಮಣ್, ಬೆಳ್ತಂಗಡಿ, ಬೈಂದೂರು ಶಾಖೆಗಳು ಪಡೆದುಕೊಂಡವು.ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಅಂಡ್ರ್ಯೂ ಡಿಸೋಜ, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ರೋಶನ್ಡಿ ಸೋಜ, ಐರಿನ್ ರೆಬೆಲ್ಲೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ಡಾ.ಜೆರಾಲ್ಡ್ ಪಿಂಟೊ, ಫೆಲಿಕ್ಸ್ ಡಿಕ್ರುಜ್, ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ ಇದ್ದರು.

ಬ್ಯಾಂಕ್‌ನ ಸಲಹೆಗಾರರು ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಾಜಿ ಉಪ ಮಹಾಪ್ರಬಂಧಕ ಎಸ್.ಎಚ್.ವಿಶ್ವೇಶ್ವರಯ್ಯ ವರದಿ ಮಂಡಿಸಿದರು. ಉಪ ಮಹಾಪ್ರಬಂಧಕ ರಾಜ್ ಎಫ್.ಮಿನೇಜಸ್ ವಂದಿಸಿದರು. ಐಟಿ ವಿಭಾಗದ ಮುಖ್ಯಸ್ಥ ಅಲ್ವಿನ್ ಝೇವಿಯರ್ ಡಿಸೋಜಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ್ಯಾಯದಾನಕ್ಕೆ ಮುಕ್ತ ವಾತಾವರಣ ಅಗತ್ಯ: ನ್ಯಾ. ನರೇಂದ್ರ ಪ್ರಸಾದ್
ಪೂಂಜ ಮುತುವರ್ಜಿ: ಹಳ್ಳಕ್ಕೆ ಮೋರಿ ಅಳವಡಿಸಿ ರಸ್ತೆ ಮರು ಸಂಪರ್ಕ