ಎಂಸಿಸಿ ಬ್ಯಾಂಕ್‌ 113ನೇ ಸ್ಥಾಪಕರ ದಿನಾಚರಣೆ, ಸಾಧಕರಿಗೆ ಸನ್ಮಾನ

KannadaprabhaNewsNetwork |  
Published : May 13, 2025, 01:25 AM IST
ಸಾಧಕರಿಗೆ ಎಂಸಿಸಿ ಬ್ಯಾಂಕ್‌ನಿಂದ ಸನ್ಮಾನ | Kannada Prabha

ಸಾರಾಂಶ

ಮಂಗಳೂರು ಎಂಸಿ.ಸಿ. ಬ್ಯಾಂಕಿನಲ್ಲಿ 113ನೇ ಸಂಸ್ಥಾಪಕರ ದಿನವನ್ನು ಶನಿವಾರ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕಿನ ಆಡಳಿತ ಕಚೇರಿಯ ಅವರಣದಲ್ಲಿ ಆಚರಿಸಲಾಯಿತು. ಬ್ಯಾಂಕಿನ ಸಂಸ್ಥಾಪಕ ಪಿ.ಎಫ್.ಎಕ್ಸ್. ಸಲ್ಡಾನಾ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಸಹಕಾರಿ ವಲಯದಲ್ಲಿ ಬ್ಯಾಂಕಿನ ನಿರಂತರ ಪ್ರಗತಿಯನ್ನು ಸ್ಮರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಎಂಸಿ.ಸಿ. ಬ್ಯಾಂಕಿನ 113ನೇ ಸಂಸ್ಥಾಪಕರ ದಿನಾಚರಣೆಯನ್ನು ಶನಿವಾರ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕಿನ ಆಡಳಿತ ಕಚೇರಿಯ ಅವರಣದಲ್ಲಿ ಆಚರಿಸಲಾಯಿತು.

ಈ ಆಚರಣೆಯು ಬ್ಯಾಂಕಿನ ಸಂಸ್ಥಾಪಕ ಪಿ.ಎಫ್.ಎಕ್ಸ್. ಸಲ್ಡಾನಾ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಸಹಕಾರಿ ವಲಯದಲ್ಲಿ ಬ್ಯಾಂಕಿನ ನಿರಂತರ ಪ್ರಗತಿಯನ್ನು ಸ್ಮರಿಸಲಾಯಿತು. ಬ್ಯಾಂಕಿನ ಇತಿಹಾಸ ಮತ್ತು ಪ್ರಗತಿಯ ಕುರಿತಾದ ಸಾಕ್ಷಚಿತ್ರವನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು.ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ರೆ.ಫಾ. ಡೆನಿಸ್ ಡೆಸಾ, ಮಂಗಳೂರು ಧರ್ಮಪ್ರಾಂತ್ಯದ ಪ್ರಾಂತೀಯ ಸುಪೀರಿಯರ್‌ ಸಿಸ್ಟರ್‌ ಕ್ಲಾರ ಮಿನೇಜಸ್ ಯುಎಫ್‌ಸಿ, ಪ್ರಜ್ಞ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್, ಮಂಗಳೂರು ಕೊಂಕಣ್ಸ್ ದುಬಾಯ್ ಅಧ್ಯಕ್ಷ ಸ್ಟೇಫನ್ ಮಿನೇಜಸ್ ಮತ್ತು ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಇದ್ದರು.

ಫಳ್ನೀರ್‌ನ ದಿ ಮರ್ಸಿಡ್ ಅನಾಥಾಶ್ರಮ ಮತ್ತು ಕಂಕನಾಡಿಯ ಶಾಲೋಮ್ ಟ್ರಸ್ಟ್‌ಗೆ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಬ್ಯಾಂಕಿನ ಪ್ರಗತಿ ಕುರಿತ ಬುಲೆಟಿನ್‌ನ್ನು ಬಿಡುಗಡೆಗೊಳಿಸಲಾಯಿತು. ಹೊಸದಾಗಿ ಸಿಎ ಪರೀಕ್ಷೇಯಲ್ಲಿ ಉತ್ತೀರ್ಣರಾದ ಗ್ರಾಹಕರ ಮಕ್ಕಳಾದ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಸನ್ಮಾನಿಸಲಾಯಿತು.

ಸಂತ ಅಲೋಶಿಯಸ್ ಕಾಲೇಜಿನ ಪ್ರೊಫೆಸರ್ ಮತ್ತು ಎಂಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಡಾ. ಎಡ್ಮಂಡ್ ಜೆ.ಬಿ. ಫ್ರಾಂಕ್ ಮತ್ತು ಎಂ.ಸಿ.ಸಿ. ಬ್ಯಾಂಕ್‌ ಮಾಜಿ ನಿರ್ದೇಶಕ ಮತ್ತು ಬರಹಗಾರ ಮಾರ್ಸೆಲ್ ಎಂ. ಡಿಸೋಜಾ, ಮಂಗಳೂರು ಕೊಂಕಣ್ಸ್ ದುಬೈನ ಹೊಸದಾಗಿ ಆಯ್ಕೆಯಾದ ಸ್ಟೀಫನ್ ಮಿನೇಜಸ್, ಸಮಾಜಸೇವಕಿ ಪ್ರೊ.ಹಿಲ್ಡಾ ರಾಯಪ್ಪನ್‌ ಇವರನ್ನು ಸಮುದಾಯಕ್ಕೆ ನೀಡಿದ ಶ್ಲಾಘನೀಯ ಸೇವೆಗಾಗಿ ಸನ್ಮಾನಿಸಲಾಯಿತು.

ಸಿಎ ಲಯನಾಲ್‌ ನೋರೊನ್ಹಾರವರು ಬ್ಯಾಂಕಿನ ಇತಿಹಾಸ, ಪ್ರಗತಿಯನ್ನು ವಿವರಿಸಿ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಆಂಡ್ರ್ಯುಡಿಸೋಜಾ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಮೆಲ್ವಿನ್ ವಾಸ್, ಸಿ.ಜಿ.ಪಿಂಟೊ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರುಜ್ ಮತ್ತು ಆಲ್ವಿನ್ ಪಿ. ಮೊಂತೇರೊ ಇದ್ದರು.

ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು. ಗ್ರೀಶ್ಮಾ ಸಲ್ದಾನಾ ನೀರ್‌ಮಾರ್ಗ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!