ಕನ್ನಡಪ್ರಭ ವಾರ್ತೆ ೧೧೩ ವರ್ಷಗಳ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುತ್ತಿದ್ದು ೨೦೨೩-೨೪ನೇ ವಿತ್ತೀಯ ವರ್ಷದಲ್ಲಿ ಶೇಕಡಾ ೧೦ ಲಾಭಾಂಶ ಘೋಷಿಸಿದೆ.
೨೦೨೩-೨೪ನೇ ವಿತ್ತೀಯ ವರ್ಷದಲ್ಲಿ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭ ೧೦.೪೫ ಕೋಟಿ ರು. ಆಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತ್ಯಂತ ಹೆಚ್ಚಿನ ಲಾಭವಾಗಿರುತ್ತದೆ. ಕಳೆದ ೬ ವರ್ಷಗಳಿಂದ ಪ್ರಸ್ತುತ ಆಡಳಿತ ಮಂಡಳಿಯು ಸಹಕಾರ ರತ್ನ ಅನಿಲ್ ಲೋಬೊ ಇವರ ಮುಂದಾಳತ್ವದಲ್ಲಿ ಬ್ಯಾಂಕ್ ಪ್ರಗತ್ತಿಯತ್ತ ದಾಪುಗಾಲು ಇಡುತ್ತಿದೆ. ಬ್ಯಾಂಕಿನ ಕಾರ್ಯವ್ಯಾಪ್ತಿಯು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ. ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಕೋರ್ ಬ್ಯಾಂಕಿಂಗ್ ಮುಖಾಂತರ ಕಾರ್ಯ ನಡೆಸುತ್ತಿದ್ದು, ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲ ಸೇವೆ ಮತ್ತು ಸೌಲಭ್ಯಗಳು ಬ್ಯಾಂಕಿನಲ್ಲಿ ದೊರೆಯುತ್ತವೆ. ಡಿಜಿಟಲ್ ಸೇವೆಯಂತಹ ಗೂಗಲ್ ಪೇ, ಫೊನ್ ಪೇ, ಯುಪಿಎ, ಇತರ ಸೌಲಭ್ಯಗಳನ್ನು ಸದ್ಯದಲ್ಲಿಯೇ ಗ್ರಾಹಕರಿಗೆ ಒದಗಿಸುವ ಯೋಜನೆಯನ್ನು ಕೈಗೊಂಡಿದ್ದು ಬ್ಯಾಂಕಿನ ಶಾಖೆಗಳನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಗ್ರಾಹಕರಿಗೆ ಕಡಿಮೆ ಬಾಡಿಗೆಯಲ್ಲಿ ಲಾಕರ್ ಸೌಲಭ್ಯ, ಕಡಿಮೆ ದರದಲ್ಲಿ ದೇಶ ವಿದೇಶ ವಿಧ್ಯಾ ಭವಿಷ್ಯ ಶಿಕ್ಷಣ ಸಾಲ, ಎಮ್.ಎಸ್.ಎಮ್.ಇ ವ್ಯವಹಾರ ಸಾಲ, ವಾಹನ ಸಾಲ, ವಸತಿ ಸಾಲ, ಮನೆ ಖರೀದಿ, ದುರಸ್ತಿ, ಮದುವೆ, ಗ್ರಹ ಉಪಯೋಗಿ ವಸ್ತು ಖರೀದಿ ಸಾಲವನ್ನು ತ್ವರಿತವಾಗಿ ನೀಡುತ್ತಿದೆ. ಸೇವಾ ಶುಲ್ಕವಿಲ್ಲದೆ ಚಿನ್ನಾಭರಣ ಸಾಲವನ್ನು ನೀಡುತ್ತಿದೆ. ಎಟಿಎಂ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಕರ್ನಾಟಕದಲ್ಲಿ ಎನ್‌ಆರ್‌ಐ ಸೌಲಭ್ಯವಿರುವ ಎಕೈಕ ಪಟ್ಟಣ ಸಹಕಾರ ಬ್ಯಾಂಕ್ ಆಗಿದೆ. ಬ್ಯಾಂಕಿನಲ್ಲಿರುವ ಠೇವಣಿಗಳಿಗೆ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳಂತೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಡಿಪಾಜಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ ವಿಮಾ ಸೌಲಭ್ಯ ಹೊಂದಿದೆ. ಎಂ.ಸಿ.ಸಿ.ಬ್ಯಾಂಕ್ ಒಟ್ಟು ಠೇವಣಿಯು ೬೭೬.೦೦ ಕೋಟಿ ರು. ಆಗಿದ್ದು, ಒಟ್ಟು ಸಾಲ ಮತ್ತು ಮುಂಗಡ ೫೩೨.೦೦ ಕೋಟಿ ರು. ತಲುಪಿದ್ದು, ಒಟ್ಟು ವ್ಯವಹಾರ ೧,೨೦೮ ಕೋಟಿ ರು. ಆಗಿರುತ್ತದೆ. ಬ್ಯಾಂಕಿನ ಎನ್‌ಪಿಎ ಪ್ರಮಾಣವು ಆರ್‌ಬಿಐ ನಿಗದಿಪಡಿಸಿರುವ ಕನಿಷ್ಟ ಮಿತಿ ಶೇಕಡಾ ಶೇ.೯ಕ್ಕಿಂತ ಹೆಚ್ಚಿದ್ದು ಅಂದರೆ ಶೇ.೨೩.೦೬ ಆಗಿದೆ. ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ’ಎ’ ಶ್ರೇಣಿಯ ಬ್ಯಾಂಕಾಗಿ ಗುರುತಿಸಲ್ಪಟ್ಟಿದ್ದು ಬ್ಯಾಂಕ್ ಆರ್ಥಿಕವಾಗಿ ಸುಧ್ರಡವಾಗಿದೆ ಎಂಬುದನ್ನು ತೋರಿಸಿದೆ. ಪ್ರಸ್ತುತ ಎಂ.ಸಿ.ಸಿ ಬ್ಯಾಂಕ್ ಸುಸಜ್ಜಿತ ಆಡಳಿತ ಕಚೇರಿ ಮತ್ತು ಸಂಸ್ಥಾಪಕರ ಶಾಖೆ ಹಂಪನಕಟ್ಟೆ, ಅಶೋಕನಗರ, ಕಂಕನಾಡಿ, ಕುಲಶೇಖರ, ಮೋರ್ಗನ್ಸ್‌ಗೇಟ್, ಮೂಡುಬಿದಿರೆ, ಶಿರ್ವ, ಬಜಪೆ, ಕಿನ್ನಿಗೋಳಿ, ಸುರತ್ಕಲ್, ಉಳ್ಳಾಲ, ಉಡುಪಿ, ಕುಂದಾಪುರ, ಪುತ್ತೂರು, ಬಿ.ಸಿ.ರೋಡ್, ಕಾರ್ಕಳ, ಬ್ರಹ್ಮಾವರ ಮತ್ತು ಬೆಳ್ತಂಗಡಿ ಹೀಗೆ ೧೮ ಶಾಖೆಗಳನ್ನು ಹೊಂದಿದೆ. ..............
ಇಂದು ಬೆಳ್ಮಣ್ ಶಾಖೆ ಉದ್ಘಾಟನೆಎಂ.ಸಿ.ಸಿ. ಬ್ಯಾಂಕ್ ತನ್ನ ೧೯ನೇ ಶಾಖೆಯನ್ನು ಮಾರ್ಚ್ 2ರಂದು ಬೆಳ್ಮಣ್‌ನಲ್ಲಿ ತೆರೆಯಲಿದೆ. ಶಾಖೆಯ ಉದ್ಘಾಟನೆಯ ಕಾರ್ಯಕ್ರಮ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಇವರ ಅಧ್ಯಕ್ಷತೆಯಲ್ಲಿ ನಡೆಸಿಯಲಿದೆ. ಶಾಖೆಯ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನೆರವೇರಿಸುವರು. ಸಂತ ಜೋಸೆಪ್ಸ್ ಚರ್ಚ್ ಬೆಳ್ಮಣ್ ಇದರ ಧರ್ಮಗುರು ರೆ.ಫಾ. ಫ್ರೆಡ್ರಿಕ್ ಮಸ್ಕರೇನ್ಹಸ್ ಇವರು ಆಶಿರ್ವಚನ ಮಾಡುವರು. ದಾಯ್ಜಿವಲ್ಡ್ ಮೀಡಿಯಾ ಪ್ರೈ.ಲಿ. ಇದರ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಮೇಶ್ವರಿ ಎಮ್. ಶೆಟ್ಟಿ ಅತಿಥಿಗಳಾಗಿರುವರು. ಬ್ಯಾಂಕಿನ ನಿರ್ದೇಶಕರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.