ಎಂಸಿಸಿ ಬ್ಯಾಂಕ್‌ಗೆ 10.07 ಕೋಟಿ ರು.ನಿವ್ವಳ ಲಾಭ

KannadaprabhaNewsNetwork |  
Published : Sep 23, 2026, 03:00 AM IST
ಎಂ.ಸಿ.ಸಿ. ಬ್ಯಾಂಕ್‌ನ 108ನೇ ವಾರ್ಷಿಕ ಮಹಾಸಭೆ ನಡೆಯಿತು | Kannada Prabha

ಸಾರಾಂಶ

ಪ್ರತಿಷ್ಠಿತ ಎಂ.ಸಿ.ಸಿ. ಬ್ಯಾಂಕ್ ಲಿ. 2025-26ನೇ ಸಾಲಿನಲ್ಲಿ 10.07 ಕೋಟಿ ರು. ನಿವ್ವಳ ಲಾಭ ದಾಖಲಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಗಿದೆ

ಮಂಗಳೂರು ; ಪ್ರತಿಷ್ಠಿತ ಎಂ.ಸಿ.ಸಿ. ಬ್ಯಾಂಕ್ ಲಿ. 2025-26ನೇ ಸಾಲಿನಲ್ಲಿ 10.07 ಕೋಟಿ ರು. ನಿವ್ವಳ ಲಾಭ ದಾಖಲಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಗಿದೆ.ಬ್ಯಾಂಕಿನ 108ನೇ ವಾರ್ಷಿಕ ಮಹಾಸಭೆ ಭಾನುವಾರ ನಗರದ ಕೋಡಿಯಾಲಬೈಲ್‌ ಸಂತ ಅಲೋಶಿಯಸ್‌ ಪಿಯು ಕಾಲೇಜಿನ ಲೊಯೊಲಾ ಆಡಿಟೋರಿಯಂ ನಡೆಯಿತು. ಬ್ಯಾಂಕ್‌ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿದರು. ಬ್ಯಾಂಕಿನ ಸ್ಥಾಪಕ ಪಿ.ಎಫ್.ಎಕ್ಸ್ ಸಲ್ಡಾನ್ಹಾ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಅಧ್ಯಕ್ಷ ನಿಲ್ ಲೋಬೊ ಮಾತನಾಡಿ, 2025-26ನೇ ಸಾಲಿನಲ್ಲಿ ಬ್ಯಾಂಕ್ 10.07 ಕೋಟಿ ರು.ನಿವ್ವಳ ಲಾಭ ಗಳಿಸಿದ್ದು, ಠೇವಣಿಗಳು 872.88 ಕೋಟಿ ರು., ಸುಮಾರು ಶೇ.24 ಬೆಳವಣಿಗೆಯೊಂದಿಗೆ, ಮುಂಗಡಗಳು 652.06 ಕೋಟಿ ರು., ಸುಮಾರು ಶೇ.22 ಬೆಳವಣಿಗೆಯೊಂದಿಗೆ ಹಾಗೂ ಕಾರ್ಯನಿರತ ಬಂಡವಾಳ 1,008 ಕೋಟಿ ರು., ಸುಮಾರು ಶೇ.22 ಬೆಳವಣಿಗೆಯೊಂದಿಗೆ ತಲುಪಿದೆ. ಬ್ಯಾಂಕಿನ ಷೇರು ಬಂಡವಾಳ 34.08 ಕೋಟಿ ರು. ಇದ್ದು, ಬ್ಯಾಂಕಿನ ಒಟ್ಟು ವ್ಯವಹಾರ 1,525 ಕೋಟಿ ರು. ಮೀರಿದೆ ಎಂದರು.

ಲಾಭ ವಿಂಗಡನೆ ಮಾಡಿ ಸಹಕಾರ ಶಿಕ್ಷಣ ನಿಧಿಗೆ 22.66 ಲಕ್ಷ ರು. ಕಾದಿರಿಸಲಾಯಿತು.ವಿಸ್ತರಣಾ ಯೋಜನೆ: ಮುಂದಿನ ವಾರ್ಷಿಕ ಮಹಾಸಭೆಯೊಳಗೆ 25 ಶಾಖೆಗಳು ಮತ್ತು 20 ಎಟಿಎಂಗಳನ್ನು ಹೊಂದುವ ಗುರಿ ತಿಳಿಸಿದ ಅವರು, 24ನೇ ಶಾಖೆಯನ್ನು ಪಡೀಲ್‌ನಲ್ಲಿ ಹಾಗೂ 25ನೇ ಶಾಖೆಯನ್ನು ಕದ್ರಿ ಅಥವಾ ಬಿಜೈನಲ್ಲಿ 2026-27ನೇ ಹಣಕಾಸು ವರ್ಷದ ಅಂತ್ಯದೊಳಗೆ ಸ್ಥಾಪಿಸಲಾಗುವುದು ಎಂತು ತಿಳಿಸಿದರು.

ಮುಂದಿನ ಜನವರಿಯಲ್ಲಿ ಬ್ಯಾಂಕಿನ ಹೊಸ ಲೋಗೋ ಪರಿಚಯಿಸಲಾಗುವುದು ಹಾಗೂ ಹೊಸ ವೆಬ್‌ಸೈಟ್‌ ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು. ಎಟಿಎಂ, ಕ್ಯಾಶ್‌ ಡೆಪಾಸಿಟ್‌ ಮೆಷಿನ್‌ ಮತ್ತು ಯುಪಿಐ ತರುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ವಿವರಿಸಿದರು.

ಡಾ.ಜೆರಾಲ್ಡ್ ಪಿಂಟೊ ಅವರನ್ನು ರಕ್ನೋ ಕೊಂಕಣಿ ವೀಕ್ಲಿ ವತಿಯಿಂದ ಬೆಸ್ಟ್ ಆಥರ್ ಆಪ್‌ ದಿ ಇಯರ್‌ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಪ್ರಸಿದ್ಧ ನೃತ್ಯ ಕಲಾವಿದೆ ರೆಮೊನಾ ಪೆರೆರಾ ನೃತ್ಯ ಪ್ರದರ್ಶಿಸಿದರು.

ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸರ್ಕಾರಿ ವಕೀಲ ಎಂ.ಪಿ.ನೊರೊನ್ಹ, ರೋಹನ್‌ ಕಾರ್ಪೋರೇಶನ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೋ, ಮಂಗಳೂರು ಕಥೋಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ, ಆಲ್‌ಇಂಡಿಯಾ ಕ್ಯಾಥೋಲಿಕ್‌ ಯೂನಿಯನ್‌ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕ್ಯಾಥೋಲಿಕ್ ಅಸೋಸಿಯೇಶನ್‌ ಆಫ್‌ ಸೌತ್‌ ಕೆನರಾ ಅಧ್ಯಕ್ಷ ರೋನಾಲ್ಡ್ ಗೋಮ್ಸ್, ಬ್ಯಾಂಕ್‌ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಜೋಸೆಫ್ ಎಂ.ಅನಿಲ್ ಪತ್ರಾವೊ, ಡಾ.ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್ರಾಯ್ ಕಿರಣ್ ಕ್ರಾಸ್ಟೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೆರೊ, ಜೆ.ಪಿ.ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ್ಹಾ ಇದ್ದರು.ಸದಸ್ಯರು ಲಿಖಿತವಾಗಿ ಕೇಳಿದ ಪ್ರಶ್ನೆಗಳಿಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್ ಉತ್ತರಿಸಿದರು. ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್ ಸ್ವಾಗತಿಸಿದರು. ಮೋರ್ಗನ್ಸ್‌ಗೇಟ್‌ ಮುಖ್ಯ ವ್ಯವಸ್ಥಾಪಕ ಡೆರಿಲ್ ಲಸ್ರಾದೊನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಟಂ.. ಮೈಸೂರು-ಚಾ.ನಗರ ಕೇಂದ್ರ ಬ್ಯಾಂಕ್‌ಗೆ ₹5.70 ಕೋಟಿ
ಎಂಎಸ್‌ಎಂಇ ಉದ್ಯಮಿಗಳು ಇ-ವಾಣಿಜ್ಯ ಬಳಸಿ