ಎಂಸಿಸಿ ಬ್ಯಾಂಕಿಗೆ ೯.೫೧ ಕೋಟಿ ರು. ನಿವ್ವಳ ಲಾಭ, ಶೇ. ೧೦ ಡಿವಿಡೆಂಡ್

KannadaprabhaNewsNetwork |  
Published : Sep 24, 2025, 01:02 AM IST
ಎಂಸಿಸಿ ಬ್ಯಾಂಕ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಅನಿಲ್‌ ಲೋಬೋ ಮಾತನಾಡುತ್ತಿರುವುದು  | Kannada Prabha

ಸಾರಾಂಶ

ಎಂ.ಸಿ.ಸಿ. ಬ್ಯಾಂಕ್ ತನ್ನ ಷೇರುದಾರರಿಗೆ ಶೇ.೧೦ರ ಲಾಭಾಂಶವನ್ನು ಘೋಷಿಸಿದೆ. ಕಳೆದ ಸಾಲಿನಲ್ಲಿ ಬ್ಯಾಂಕ್‌ ೯.೫೧ ಕೋಟಿ ರು.ಗಳ ನಿವ್ವಳ ಲಾಭವನ್ನು ಗಳಿಸಿದೆ.

ಮಂಗಳೂರು: ೨೦೨೪-೨೫ನೇ ಹಣಕಾಸು ವರ್ಷದಲ್ಲಿ ಎಂ.ಸಿ.ಸಿ. ಬ್ಯಾಂಕ್ ತನ್ನ ಷೇರುದಾರರಿಗೆ ಶೇ.೧೦ರ ಲಾಭಾಂಶವನ್ನು ಘೋಷಿಸಿದೆ. ಕಳೆದ ಸಾಲಿನಲ್ಲಿ ಬ್ಯಾಂಕ್‌ ೯.೫೧ ಕೋಟಿ ರು.ಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳಿದ್ದಾರೆ. ಅವರು ಭಾನುವಾರ ನಗರದ ಲೊಯಲಾ ಹಾಲ್‌ನಲ್ಲಿ ಬ್ಯಾಂಕಿನ ೧೦೭ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕ್‌ ೯.೫೧ ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, ೭೦೫.೪೦ ಕೋಟಿ ರು. ಠೇವಣಿ, ೫೩೫.೪೯ ಕೋಟಿ ರು. ಮುಂಗಡ, ೮೩೦.೩೦ ಕೋಟಿ ರು. ದುಡಿಯುವ ಬಂಡವಾಳ, ೩೨.೪೩ ಕೋಟಿ ರು. ಷೇರು ಬಂಡವಾಳ ಹೊಂದಿದ್ದು, ಬ್ಯಾಂಕಿನ ವ್ಯವಹಾರ ವಹಿವಾಟು ೧,೩೦೦ ಕೋಟಿ ರು. ದಾಟಿದೆ ಎಂದರು.

ಉಡುಪಿ ಜಿಲ್ಲೆಯ ಸಂತೆಕಟ್ಟೆಯಲ್ಲಿ ಅ. ೫ ರಂದು ಬ್ಯಾಂಕಿನ ೨೧ನೇ ಶಾಖೆಯ ಉದ್ಘಾಟನೆ ನೆರವೇರಲಿದೆ. ಬ್ಯಾಂಕಿನ ೨೫ ಶಾಖೆಗಳು ಮತ್ತು ೨೦ ಎಟಿಎಂಗಳನ್ನು ವಿಸ್ತರಿಸುವ ಗುರಿಯನ್ನು ಅವರು ತಿಳಿಸಿದರು. ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕ ಸಿ.ಜಿ. ಪಿಂಟೊ, ಆಹ್ವಾನಿತರಾದ ಪ್ರವೀಣ್ ಸಂದೀಪ್ ಲೋಬೊ, ಮೆಲ್ವಿನ್ ಅರಾನ್ಹಾ (ಉಪಾಧ್ಯಕ್ಷರು, ಪ್ಯಾರಿಷ್ ಕೌನ್ಸಿಲ್, ಶಿರ್ವಾ ಚರ್ಚ್), ಅನಿತಾ ಫ್ರಾಂಕ್ (ಕಾರ್ಯದರ್ಶಿ, ಮಹಿಳಾ ಆಯೋಗ, ಮಂಗಳೂರು ಡಯಾಸಿಸ್), ಮೇಬಲ್ ಡಿಸೋಜಾ (ಮಾಜಿ ಅಧ್ಯಕ್ಷೆ ಕ್ಯಾಥೋಲಿಕ್ ಸಭಾ, ಕುಂದಾಪುರ) ಮತ್ತು ಜೆ.ವಿ. ಡಿಮೆಲ್ಲೊ (ಎಂಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕರು), ನಿರ್ದೇಶಕರಾದ ಅಂಡ್ರ್ಯೂ ಡಿಸೋಜಾ, ಜೋಸೆಫ್ ಎಮ್. ಅನಿಲ್ ಪತ್ರಾವೊ, ಡಾ. ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜಾ, ಎಲ್‌.ರೊಯ್ ಕಿರಣ್‌ ಕ್ರಾಸ್ತಾ, ರೋಶನ್ ಡಿಸೋಜಾ, ಹೆರಾಲ್ಡ್ ಮೊಂತೇರೊ, ಜೆ. ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ತಿ ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಇದ್ದರು. ಬ್ಯಾಂಕಿನ ಸ್ಥಾಪಕ ಪಿಎಫ್‌ಎಕ್ಸ್ ಸಲ್ಡಾನ್ಹಾ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಕಳೆದ ವರ್ಷದಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ನಿರೂಪಿಸಿದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ