ಕನ್ನಡಪ್ರಭ ವಾರ್ತೆ ಮೂಡುಬಿದಿರೆಬಾಬುರಾಜೇಂದ್ರಪ್ರಸಾದ್ ಪ್ರೌಢಶಾಲೆ ಯಲ್ಲಿ ಎಂಸಿಎಫ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗಿರುವ ಹೆಣ್ಣುಮಕ್ಕಳ ನೂತನ ಶೌಚಾಲಯವನ್ನು ಎಂಸಿಎಫ್ ಚೀಫ್ ಜನರಲ್ ಮ್ಯಾನೇಜರ್ ರಾಘವೇಂದ್ರ ಅವರು ಶಾಲಾ ಆವರಣದಲ್ಲಿ ಗುರುವಾರ ಉದ್ಘಾಟಿಸಿದರು.
ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಇವರು, ಶಾಲೆಗೆ ಗೌರವ ಶಿಕ್ಷಕರ ವೇತನಕ್ಕಾಗಿ 50,000 ರೂ. ಹಾಗೂ ಮಕ್ಕಳ ಶುಲ್ಕಕ್ಕೆ 50,000 ರೂ. ಹೀಗೆ ಒಟ್ಟು ಒಂದು ಲ.ರೂ. ಕೊಡುಗೆಯಾಗಿ ನೀಡಿದರು.
ಹುಡುಗರ ನೂತನ ಶೌಚಾಲಯದ ಬಗ್ಗೆಯೂ ಎಂಸಿಎಫ್‌ಗೆ ಮನವಿ ಸಲ್ಲಿಸಲಾಯಿತು. ಎಂಸಿಎಫ್ ಜಾಯಿಂಟ್ ಜನರಲ್ ಮ್ಯಾನೇಜರ್ ಡಾ। ಯೋಗೀಶ, ಡೆಪ್ಯುಟಿ ಜನರಲ್ ಮ್ಯಾನೇಜರ್ ಅಶೋಕ ಪ್ರಭು, ಸೀನಿಯರ್ ಆಫೀಸರ್ ವಿವೇಕ ಕೋಟ್ಯಾನ್, ಸೀನಿಯರ್ ಎಂಜಿನಿಯರ್ ಧರ್ಮವೀರ್ ಮುಖ್ಯ ಅತಿಥಿಗಳಾಗಿದ್ದರು, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಎಚ್. ಸುರೇಶ ಪ್ರಭು, ಅಬುಲ್ ಆಲಾ ಪುತ್ತಿಗೆ, ಮುಖ್ಯ ಶಿಕ್ಷಕಿ ತೆರೆಜಾ ಕರ್ಡೋಜಾ ಹಾಗೂ ಇತರರು ಭಾಗವಹಿಸಿದ್ದರು.ಶಾಲಾ ಸಂಚಾಲಕ ರಾಮನಾಥ ಭಟ್ ಸ್ವಾಗತಿಸಿದರು. ಅಧ್ಯಾಪಕ ಕಿರಣಕುಮಾರ್ ನಿರೂಪಿಸಿ, ವಂದಿಸಿದರು.