ಧಾರವಾಡ: ಇಲ್ಲಿಯ ಆಜಾದ್ ಪಾರ್ಕ ಹತ್ತಿರದ ಉಪವನ ಹೋಟೆಲ್ ನಲ್ಲಿ ಗುರುವಾರ ನಸುಕಿನಲ್ಲಿ ಪತ್ರಿಕಾ ವಿತರಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಸಕ್ತ ವರ್ಷದ ಸತತ ಮಳೆಯನ್ನು ಲೆಕ್ಕಿಸದೇ ಪತ್ರಿಕಾ ವಿತರಣೆ ಕೆಲಸ ಮಾಡುತ್ತಿದ್ದು, ಪತ್ರಿಕಾ ವಿತರಕರ ಹಾಗೂ ವಿತರಣೆ ಮಾಡುವವರಿಗೂ ಜೀವ ವಿಮೆ ಮಾಡಿಸಲು ನಾಗರಾಜ ಕುಲಕರ್ಣಿ ಜಿಲ್ಲಾಡಳಿತಕ್ಕೆ ವಿನಂತಿಸಿದರು.
ಪತ್ರಿಕಾ ವಿತರಕರಿಗೂ ವಿಮಾ ಸೌಲಭ್ಯ ಕಲ್ಪಿಸಬೇಕು. ಅಲ್ಲದೇ, ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಕೆಲಸದ ವೇಳೆಯಲ್ಲಿ ಮೃತಪಟ್ಟರೆ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು. ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡಬೇಕು. ವೈದ್ಯಕೀಯ ಚಿಕಿತ್ಸೆ ಮತ್ತು ಅಪಘಾತದ ಪರಿಹಾರ ಮತ್ತು ಪ್ರಮುಖ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಸರ್ಕಾರದಿಂದ ಪರಿಹಾರ ಕಂಡುಕೊಳ್ಳಲು ಸಹಾಯ ನೀಡಬೇಕು ಮತ್ತು ಪತ್ರಿಕೆ ಹಂಚುವ ವಿತರಕರಿಗೆ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಸಬ್ಸಿಡಿ ರೂಪದಲ್ಲಿ ಸಹಾಯ ಧನ ನೀಡಬೇಕು ಹಾಗೂ ಶೂನ್ಯ ಬಡ್ಡಿ ದರದಲ್ಲಿ ವಾಹನ ಖರೀದಿಸಲು ಸಹಾಯ ಧನ ನೀಡಬೇಕು ಎಂದು ಪತ್ರಿಕಾ ವಿತರಕರು ವಿನಂತಿಸಿದರು.ಈ ಸಂದರ್ಭದಲ್ಲಿ ಶಿವರಾಮ್ ಶಿರಗುಪ್ಪಿ, ಕೃಷ್ಣ ಕುಲಕರ್ಣಿ, ಶಶಿ ಕಬ್ಬೂರು, ಶಿವಪ್ರಸಾದ ಹಲಗಿ, ಜಿ.ಎ. ಬಾದಾಮಿ, ಪತ್ರೆಪ್ಪ ಇಂಗದಾಳ, ಸುರೇಶ ಸುಣಗಾರ, ಶ್ರೀಧರ ಪಾಸ್ತೆ, ಮಂಜುನಾಥ ಹಿರೇಮಠ, ಶಶಿಕಾಂತ ನೀಲಾಕರಿ, ಮನೋಹರ ಮಠಪತಿ, ವೆಂಕಟೇಶ ಮೊದಲಿಯಾರ್, ಜಗದೀಶ ಅವಗಾನ್, ಶೇಖರ ಬೇಲೂರ, ರಾಜು ಮಂಟೆದ, ಗಿರೀಶ್ ಮ್ಯಾಗೇರಿ, ರವಿ ಮಲ್ಲಿಗವಾಡ, ಅಯೂಬ್ ಮಕಾಂದಾರ, ಸಂತೋಷ ರೋಕಡೆ, ಶಿವು ಕಠಾರೆ, ಮಂಜು ಕಠಾರೆ, ಕಾರ್ತಿಕ, ನಿರಂಜನ್, ನಿಂಗರಾಜ್ ಇನ್ನಿತರರಿದ್ದರು.