ಮೆಡಿಕಲ್ ಕಾಲೇಜು, ಪರಿಷ್ಕೃತ ಅಂದಾಜಿಗೆ ಕ್ಯಾಬಿನೆಟ್ ಅಸ್ತು: ಸಚಿವ ಶಿವಾನಂದ ಪಾಟೀಲ

KannadaprabhaNewsNetwork |  
Published : Feb 04, 2024, 01:31 AM IST
೩ಎಚ್‌ವಿಆರ್೪ | Kannada Prabha

ಸಾರಾಂಶ

ಹೊಸ ವೈದ್ಯಕೀಯ ಕಾಲೇಜಿನ ಕಾಮಗಾರಿಗೆ ೪೯೯ ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಸಮ್ಮತಿ ನೀಡಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ದೇವಗಿರಿ ಸಮೀಪ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ವೈದ್ಯಕೀಯ ಕಾಲೇಜು ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಸತಿ ನಿಲಯ ನಿರ್ಮಾಣ ಯೋಜನೆಯ ಪರಿಷ್ಕೃತ ಅಂದಾಜು ೪೯೯ ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಸಮ್ಮತಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ.

ಆಡಳಿತ ಭವನ ಎ ಮತ್ತು ಬಿ ಬ್ಲಾಕ್‌ಗಳು ಪೂಣಗೊಂಡಿವೆ. ಕಚೇರಿ ಮತ್ತು ಅನಾಟಮಿ ವಿಭಾಗಗಳನ್ನು ಈಗಾಗಲೇ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಡೀನ್ ಅವರು ನೂತನ ಕಟ್ಟಡದಲ್ಲೇ ಕಾಯನಿವಹಿಸುತ್ತಿದ್ದಾರೆ. ಮೊದಲ ಪದವಿ ತರಗತಿಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿವೆ. ಎರಡನೇ ವರ್ಷದ ಪದವಿ ತರಗತಿಗಳೂ ಶೀಘ್ರದಲ್ಲಿ ನೂತನ ಕಟ್ಟಡದಲ್ಲಿ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.

ಹಾಸ್ಟೆಲ್ ಕಟ್ಟಡಗಳ ಕಾಮಗಾರಿ ಪ್ರತಿಶತ ಶೇ.೯೫ರಷ್ಟು, ಲೆಕ್ಟರ್ ಹಾಲ್, ಸಿಬ್ಬಂದಿ, ನರ್ಸಿಂಗ್ ಮತ್ತು ಡಿ ಗ್ರೂಪ್ ನೌಕರರ ವಸತಿನಿಲಯ ಕಾಮಗಾರಿ ಪ್ರತಿಶತ ಶೇ.೯೦ರಷ್ಟು ಪೂರ್ಣಗೊಂಡಿವೆ. ಆವರಣದಲ್ಲಿ ಲ್ಯಾಂಡ್ ಸ್ಕೇಪಿಂಗ್, ಪ್ಲಾಂಟೇಷನ್ ಮತ್ತು ಕಾಂಪೌಂಡ್ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ನರ್ಸಿಂಗ್ ಕಾಲೇಜುಗಳ ಪರೀಕ್ಷೆಗಳು ಮತ್ತು ಮೊದಲ ಎಂಬಿಬಿಎಸ್ ಪದವಿ ಪರೀಕ್ಷೆಗಳನ್ನು ಯಾವುದೇ ಸಮಸ್ಯೆ ಇಲ್ಲದೆ ನೂತನ ಕಟ್ಟಡದಲ್ಲಿ ಮಾಡಲಾಗಿದೆ. ಆಡಳಿತ ಭವನದವರೆಗೆ ಸಿಮೆಂಟ್ ರಸ್ತೆ ನಿಮಾಣ, ರಸ್ತೆ ವಿಭಜಕ ಮತ್ತು ವಿದ್ಯುದ್ದೀಪಗಳ ಕಾಮಗಾರಿ ಪೂರ್ಣಗೊಂಡಿದೆ. ಮುಖ್ಯ ರಸ್ತೆಯಿಂದ ಕಾಲೇಜು ಆವರಣದೊಳಗೆ ಎಲ್ಲಕಡೆ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಪೂರ್ಣಗೊಂಡಿದೆ. ಎಲ್ಲ ವಿಭಾಗಗಳನ್ನು ಶೀಘ್ರವಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ