ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತಪಾಸಣೆ । ಈ ದಿವಸ ಹಾಜರಾಗದ ವಿದ್ಯಾರ್ಥಿಗಳಿಗೆ 2ನೇ ಸುತ್ತಿನ ಶಿಬಿರ
ತಾಲೂಕು ಶೈಕ್ಷಣಿಕ ವಲಯದಲ್ಲಿರುವ ವಿಶೇಷ ಚೇತನ ವಿದ್ಯಾರ್ಥಿಗಳಲ್ಲಿ ದೃಷ್ಟಿ, ಶ್ರವಣ ,ದೈಹಿಕ ನ್ಯೂನ್ಯತೆ, ಭೌದ್ದಿಕ ಸೇರಿದಂತೆ 6 ಬಗೆಯ ಅಸಮರ್ಥತೆ ಗಳಿರುವ 69 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ವೈದ್ಯಕೀಯ ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟರು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಟಿ. ಮಂಜುನಾಥ್ ತಿಳಿಸಿದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಚಿಕ್ಕಮಗಳೂರು ಜಿಲ್ಲೆ, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಸಮನ್ವಯಾಧಿಕಾರಿಗಳ ಕಚೇರಿಯಿಂದ ಶುಕ್ರವಾರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಿದ್ದ 2025 26ನೇ ಸಾಲಿನ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ತಪಾಸಣಾ ಶಿಬಿರದಲ್ಲಿ ಮಾತನಾಡಿ ಈ ಶೈಕ್ಷಣಿಕ ವಲಯದಲ್ಲಿ ಒಟ್ಟು ಸುಮಾರು 119 ವಿವಿಧ ನ್ಯೂನ್ಯತೆಯುಳ್ಳ ವಿದ್ಯಾರ್ಥಿಗಳಿದ್ದು ಅವರಲ್ಲಿ ಮೊದಲಿಗೆ ಈ 6 ಬಗೆಯ ಅಸಮರ್ಥತೆಯುಳ್ಳವರ ತಪಾಸಣೆ ನಡೆಸಲಾಗಿದೆ. ಈ ದಿವಸ ಹಾಜರಾಗದ ವಿದ್ಯಾರ್ಥಿಗಳಿಗೆ 2ನೇ ಸುತ್ತಿನ ಶಿಬಿರದಲ್ಲಿ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.ಶಿಬಿರದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಮಾತನಾಡಿ ವಿಕಲ ಚೇತನ ಮಕ್ಕಳ ಇಂತಹ ಶಿಬಿರ ಆ ಮಕ್ಕಳ ಮತ್ತು ಅವರ ಪೋಷಕರ ಮಾನಸಿಕ ಸ್ಥೈರ್ಯ ಹೆಚ್ಚು ಮಾಡಿ ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತರೀಕೆರೆ ಶಾಖೆ ಅಧ್ಯಕ್ಷ ಸಿ.ಆರ್. ಅನಂತಪ್ಪ ಮಾತನಾಡಿ ಸರ್ಕಾರದ ಈ ಕಾರ್ಯಕ್ರಮ ವಿಶೇಷ ಚೇತನ ಮಕ್ಕಳಿಗೆ ವರದಾನ. ಇನ್ನೂ ಹೆಚ್ಚು ಮಕ್ಕಳಿಗೆ ಈ ಸೌಲಭ್ಯ ದೊರಕಲಿ ಎಂದು ಆಶಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘ ಅಜ್ಜಂಪುರ ತಾಲೂಕಿನ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ ಜನರೊಟ್ಟಿಗೆ ಬೆರೆತು ಬದುಕುವ ಅವಕಾಶ ಇಲಾಖೆ ಇಂಥಹ ಕಾರ್ಯಗಳಿಂದ ವಿಶೇಷ ಚೇತನ ಮಕ್ಕಳಿಗೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಶಿಬಿರದಲ್ಲಿ ದೃಷ್ಟಿ, ಶ್ರವಣ ,ದೈಹಿಕ ನ್ಯೂನ್ಯತೆ, ಭೌದ್ದಿಕ ಸೇರಿದಂತೆ ಅಸಮರ್ಥತೆ ಗಳ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನುರಿತ ವೈದ್ಯರು ಮತ್ತು ಸಿಬ್ಬಂದಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉಪಕರಣಗಳನ್ನು ವೈದ್ಯರ ನಿರ್ದೇಶನದಂತೆ ಅಲ್ಲಿಮಿಕೋ ಸಂಸ್ಥೆ ಮತ್ತು ಸರ್ಕಾರದ ಸಹಯೋಗದೊಂದಿಗೆ ಮಕ್ಕಳಿಗೆ ವಿತರಿಸಲಾಗುವುದು.ಶಿಬಿರದಲ್ಲಿ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕ ಶಶಿಧರ್, ಪುಟ್ಟಾಚಾರ್, ಸವಿತಾ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.12ಕೆಟಿಆರ್.ಕೆಃ 4ಃ
ತರೀಕೆರೆಯಲ್ಲಿ ವಿಶೇಷ ಅಗತ್ಯಉಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ತಪಾಸಣಾ ಶಿಬಿರದಲ್ಲಿ ಕ್ಷೇತ್ರ ಸಮನ್ವಯಾ ಧಿಕಾರಿ ಟಿ. ಮಂಜುನಾಥ್ ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಜ, ರಾಜ್ಯ ಸರ್ಕಾರಿ ನೌಕರರ ಸಂಘದ ತರೀಕೆರೆ ಘಟಕದ ಅಧ್ಯಕ್ಷ ಸಿ.ಆರ್. ಅನಂತಪ್ಪ ಮತ್ತಿತರರು ಇದ್ದರು.