ನ್ಯಾನೋ ಚಿಕಿತ್ಸೆಯತ್ತ ವೈದ್ಯಕೀಯ ಕ್ಷೇತ್ರ: ಡಾ. ವಿವೇಕ ಜವಳಿ

KannadaprabhaNewsNetwork |  
Published : Apr 14, 2024, 01:49 AM IST
ಫೋಟೋ- 13ಜಿಬಿ7, 13ಜಿಬಿ8 ಮತ್ತು 13ಜಿಬಿ9 | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಈಗಾಗಲೇ 38 ರೋಬೋಟ್‍ಗಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದು, ಸಾವಿರ ರೋಗಿಗಳ ಸರತಿಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ನಾವು ಹೊಸ ವಿಧಾನ ಅರಿಯುವ ಅಗತ್ಯವಿದೆ ಎಂದು ಬೆಂಗಳೂರು ಪೋರ್ಟಿಸ್ ಆಸ್ಪತ್ರೆ ಹೃದಯರೋಗ ತಜ್ಞ ಡಾ.ವಿವೇಕ ಜವಳಿ ಹೇಳಿದರು.

ಕನ್ನಡಪ್ರಭ ವಾರ್ತೆ. ಕಲಬುರಗಿ

ಇತ್ತೀಚಿನ ದಿನಗಳಲ್ಲಿ ನ್ಯಾನೋ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಶಸ್ತ್ರಚಿಕಿತ್ಸೆಯೇ ಬರಲಿದೆ. ಬೆಂಗಳೂರಿನಲ್ಲಿ ಈಗಾಗಲೇ 38 ರೋಬೋಟ್‍ಗಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದು, ಸಾವಿರ ರೋಗಿಗಳ ಸರತಿಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ನಾವು ಹೊಸ ವಿಧಾನ ಅರಿಯುವ ಅಗತ್ಯವಿದೆ ಎಂದು ಬೆಂಗಳೂರು ಪೋರ್ಟಿಸ್ ಆಸ್ಪತ್ರೆ ಹೃದಯರೋಗ ತಜ್ಞ ಡಾ.ವಿವೇಕ ಜವಳಿ ಹೇಳಿದರು.

ಗುಲ್ಬರ್ಗ ವೈದಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ಆಯೋಜಿಸಿದ್ದ 2018 ರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಉತ್ಕಷ್ಟ ಆರೋಹಣ ಘಟಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಮಾತನಾಡಿದ ಅವರು ಭವಿಷ್ಯದಲ್ಲಿ ರೋಬೋಗಳ ಸಂಖ್ಯೆ ಹೆಚ್ಚಾಗಲಿದೆ. ವೈದ್ಯಕೀಯ ನ್ಯಾನೋ ಟೆಕ್ನಾಲಜಿ ಚಿಕಿತ್ಸೆಗೆ ಬೆಂಗಳೂರು ಹಬ್ ಆಗಲಿದೆ ಎಂದರು.

ಹೈದರಬಾದಿನ್ ಉಸ್ಮಾನಿಯಾ ಮೆಡಿಕಲ್ ಕಾಲೇಜು ಅರ್ಥೊಪಿಡಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಮಹ್ಮದ್ ಅಬ್ಬಾಸ್ ಅಲ್ಲಿ ಮಾತನಾಡಿ, ಸಮಾಜ ವೈದ್ಯರಿಂದ ಅತ್ಯತ್ತಮ ಚಿಕಿತ್ಸೆ ಮಾತ್ರ ನಿರೀಕ್ಷಿಸುತ್ತಿದೆ. ರೋಗಿಗುಣ ಹೊಂದಿದರೆ ನಿಮಗೆ ಗೌರವದ ಜತೆಗೆ ಸದಾ ಸ್ಮರಿಸುತ್ತಾರೆ. ನೂತನವಾಗಿ ಹೊರಬರುವ ವೈದ್ಯ ವಿದ್ಯಾರ್ಥಿಗಳು ಉದ್ಯೋಗ ಭೀತಿ, ಆರ್ಥಿಕತೆ ಲೆಕ್ಕಾಚಾರ ಹಾಕುತ್ತಾರೆ. ವೈದ್ಯರಿಗೆ ಉದ್ಯೋಗ ಭೀತಿ ಬೇಡ, ಹಣದ ಚಿಂತೆ ಮಾಡಬೇಡಿ ಜೀವನ ಕೌಶಲ್ಯ ಅರಿತು ಉದ್ಯೋಗದಾತರಾಗಲು ಪ್ರಯತ್ನಿಸಿ ಹಣದ ನಿರ್ವಹಣೆ ಅರಿತು ಜೀವನ ಸಾಗಿಸಿ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ 144 ಪದವಿ, 14 ಚಿನ್ನದ ಪದಕ ಘಟಿಕೋತ್ಸವದಲ್ಲಿ 2018ರ ಬ್ಯಾಚ್‍ನ 144 ವಿದ್ಯಾರ್ಥಿಗಳಗೆ ಪದವಿ ಪ್ರದಾನ ಮಾಡಲಾಯಿತು. 14 ವಿಭಾಗದಲ್ಲಿ ಅತ್ಯುತ್ತಮ ಅಂಕಪಡೆದ 14 ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕ ನೀಡಿ ಪೋತ್ಸಾಹಿಸಲಾಯಿತು.

2018 ರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ಘಟಿಕೋತ್ಸವ ಇಎನ್‍ಟಿ ವಿಭಾಗದ ಟಾಪರ್ ಡಾ. ದಿವ್ಯಾ ಪಡಶೆಟ್ಟಿ ಅವರಿ ಜಿಮ್ಸ್ ನಿರ್ದೇಶಕ ಡಾ. ಉಮೇಶ ಎಸ್. ಅರ್. ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಶಿವಕುಮಾರ ಸಿ.ಎಸ್. ಡಾ. ಅಜಯಕುಮಾರ ಭಾರತಿ ಅರುಣ ಕುಮಾರ ಕುಲಕರ್ಣಿ ವಿಭಾಗದ ಮುಖ್ಯಸ್ಥರು, ಕಾಲೇಜಿನ ವಿದಾರ್ಥಿಗಳು ಹಾಗೂ ಪಾಲಕ-ಪೋಷಕರು ಇತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ