ಒತ್ತಡರಹಿತ ಜೀವನ ಆತ್ಮವಿಕಾಸಕ್ಕೆ ಧ್ಯಾನ ಸಹಕಾರಿ

KannadaprabhaNewsNetwork |  
Published : Aug 06, 2026, 01:30 AM IST
ಸುದ್ದಿಗೋಷ್ಠಿಯಲ್ಲಿ ಯಶೋದ ಮಾತನಾಡಿದರು  | Kannada Prabha

ಸಾರಾಂಶ

ದೇಹಕ್ಕೆ ವ್ಯಾಯಾಮ ಎಷ್ಟು ಅಗತ್ಯವೋ, ಮನಸ್ಸಿಗೆ ಧ್ಯಾನವೂ ಅಷ್ಟೇ ಅಗತ್ಯವಾಗಿದೆ. ಒತ್ತಡರಹಿತ ಜೀವನ, ಆತ್ಮಸಾಕ್ಷಾತ್ಕಾರ ಹಾಗೂ ಆತ್ಮವಿಕಾಸಕ್ಕೆ ಧ್ಯಾನ ಸಹಕಾರಿಯಾಗುತ್ತದೆ. ಋಷಿಮುನಿಗಳು ನೀಡಿರುವ ಸಮಗ್ರ ಜೀವನ ಪದ್ಧತಿ, ನೈಸರ್ಗಿಕ ಚಿಕಿತ್ಸಾ ವಿಧಾನಗಳು ಹಾಗೂ ಧ್ಯಾನದ ಅಭ್ಯಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಪೂರಕವಾಗಿವೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಪಿಎಸ್ಎಸ್ಎಮ್ ಹಾಗೂ ಮಹಾವತಾರ್ ಫೌಂಡೇಶನ್‌ನ ಯಶೋಧ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಯೋಗ ಮತ್ತು ಧ್ಯಾನವು ನಮ್ಮ ಹಿರಿಯರು ನೀಡಿರುವ ಅಮೂಲ್ಯ ಜೀವನ ಪದ್ಧತಿಯಾಗಿದ್ದು, ಅದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಪಿಎಸ್ಎಸ್ಎಮ್ ಹಾಗೂ ಮಹಾವತಾರ್ ಫೌಂಡೇಶನ್‌ನ ಯಶೋಧ ಹೇಳಿದರು.ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 9ರಂದು ಶ್ರೀ ವೀರಶೈವ ಸಮುದಾಯ ಭವನದಲ್ಲಿ ಧ್ಯಾನ ಯಜ್ಞ ಹಾಗೂ ಸಮಗ್ರ ಸ್ವಾಸ್ಥ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ದೇಹಕ್ಕೆ ವ್ಯಾಯಾಮ ಎಷ್ಟು ಅಗತ್ಯವೋ, ಮನಸ್ಸಿಗೆ ಧ್ಯಾನವೂ ಅಷ್ಟೇ ಅಗತ್ಯವಾಗಿದೆ. ಒತ್ತಡರಹಿತ ಜೀವನ, ಆತ್ಮಸಾಕ್ಷಾತ್ಕಾರ ಹಾಗೂ ಆತ್ಮವಿಕಾಸಕ್ಕೆ ಧ್ಯಾನ ಸಹಕಾರಿಯಾಗುತ್ತದೆ. ಋಷಿಮುನಿಗಳು ನೀಡಿರುವ ಸಮಗ್ರ ಜೀವನ ಪದ್ಧತಿ, ನೈಸರ್ಗಿಕ ಚಿಕಿತ್ಸಾ ವಿಧಾನಗಳು ಹಾಗೂ ಧ್ಯಾನದ ಅಭ್ಯಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಪೂರಕವಾಗಿವೆ ಎಂದು ತಿಳಿಸಿದರು.ಕಾರ್ಯಕ್ರಮವು ಬೆಳಗ್ಗೆ 5 ಗಂಟೆಗೆ ಆರಂಭವಾಗಲಿದ್ದು, ಕ್ರಿಯಾಯೋಗ ಅಭ್ಯಾಸ, ಸಂಗೀತದೊಂದಿಗೆ ಧ್ಯಾನ, ಅಗ್ನಿಹೋತ್ರದ ಪ್ರಾತ್ಯಕ್ಷಿಕೆ ಹಾಗೂ ಅದರ ಪ್ರಯೋಜನಗಳ ಕುರಿತು ಮಾಹಿತಿ, ಸಾತ್ವಿಕ ಉಪಾಹಾರ, ಮಹಾವತಾರ್‌ ಫೌಂಡೇಶನ್‌ನ ಪಯಣ, ಆಧ್ಯಾತ್ಮಿಕ ಸಂದೇಶ ಹಾಗೂ ಅನುಭವ ಹಂಚಿಕೆ, ಸಂಗೀತ ಧ್ಯಾನ, ಸಾತ್ವಿಕ ಅನ್ನಪ್ರಸಾದ, ಶಿವಾಂಬು ಚಿಕಿತ್ಸೆಯ ಮಾಹಿತಿ, ಮನೆಮದ್ದುಗಳ ಪರಿಚಯ, ಆಧ್ಯಾತ್ಮಿಕ ಕೃಷಿ, ಔಷಧ ಮುಕ್ತ ಜೀವನಶೈಲಿ, ಮುದ್ರಾ ಚಿಕಿತ್ಸೆ ಹಾಗೂ ಸಮಾರೋಪ ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಸಚಿವ ಕೆ. ಎಂ. ಶಿವಲಿಂಗೇಗೌಡ, ಉಡುಪಿಯ ಶಿವಾಂಬು ತಜ್ಞೆ ಸುಲೋಚನಾ ಕೊಡವೂರು, ಇಂದ್ರಪ್ರಸ್ಥ ಆರ್ಗಾನಿಕ್‌ನ ಚಂದ್ರಶೇಖರ್ ಹಾಗೂ ಮಹಾವತಾರ್‌ ಫೌಂಡೇಶನ್ ಸಂಸ್ಥಾಪಕ ಮಾಸ್ಟರ್‌ ರಂಗನಾಥ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‌ನ ಈರಣ್ಣ, ನಳಿನಿ, ಶಿವಗಂಗಾ, ಯೋಗೀಶ್, ಮಂಜುನಾಥ್ ಹಾಗೂ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಂಕರ್‌......ಕಾರ್ಯನಿರ್ವಹಿಸದ ಪರಿವರ್ತಕಗಳ ಬದಲಿಸಿ
ಮಿಡ್ಲ್‌ ಕೆಳಗೆ.ಆಧುನಿಕತೆಯಿಂದ ವಿಕೋಪಗಳ ಹೆಚ್ಚಳ: ಶಿಕ್ಷಣಾಧಿಕಾರಿ