ಧ್ಯಾನದಿಂದ ಮಕ್ಕಳ ಮನಸ್ಸು ಕೇಂದ್ರೀಕೃತ

KannadaprabhaNewsNetwork |  
Published : Dec 23, 2024, 01:00 AM IST
ಲಕ್ಷ್ಮೇಶ್ವರ ಪಟ್ಟಣದ ಬಿ.ಡಿ. ತಟ್ಟಿ ಮೆಮೋರಿಯಲ್ ಟ್ರಸ್ಟ್ ವಿಶೇಷ ಚೇತನ್ ಮಕ್ಕಳ ಶಾಲೆಯಲ್ಲಿ ನಡೆದ ಧ್ಯಾನ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ  ಸೋಮನಾಥ ಮಹಾಜನಶೆಟ್ಟರ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಕ್ಕಳ ಮನಸ್ಸು ನಿಯಂತ್ರಣದಲ್ಲಿರಬೇಕಾದರೆ ಧ್ಯಾನ ಅತಿ ಮುಖ್ಯ, ಧ್ಯಾನದಿಂದ ಮಕ್ಕಳಲ್ಲಿ ಜ್ಞಾನ ಅಭಿವೃದ್ಧಿಯಾಗುತ್ತದೆ

ಲಕ್ಷ್ಮೇಶ್ವರ: ಮಕ್ಕಳ ಮನಸ್ಸು ಹತೋಟಿಯಲ್ಲಿಡಲು ಧ್ಯಾನ ಅವಶ್ಯವಾಗಿದೆ. ಧ್ಯಾನದಿಂದ ಮನಸ್ಸು ಪ್ರಫುಲ್ಲವಾಗುತ್ತದೆ ಎಂದು ಸೋಮನಾಥ ಮಹಾಜನಶೆಟ್ಟರ ಹೇಳಿದರು.

ಪಟ್ಟಣದ ಬಿ.ಡಿ. ತಟ್ಟಿ ಅಣ್ಣಾವರು ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲೆಯಲ್ಲಿ ವಿಶ್ವಧ್ಯಾನ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಮನಸ್ಸು ನಿಯಂತ್ರಣದಲ್ಲಿರಬೇಕಾದರೆ ಧ್ಯಾನ ಅತಿ ಮುಖ್ಯ, ಧ್ಯಾನದಿಂದ ಮಕ್ಕಳಲ್ಲಿ ಜ್ಞಾನ ಅಭಿವೃದ್ಧಿಯಾಗುತ್ತದೆ ಆರು ತಿಂಗಳಿಂದ ನಮ್ಮ ವಿಶೇಷ ಚೇತನ ಮಕ್ಕಳ ವಸತಿ ಶಾಲೆಯಲ್ಲಿ ನಾವು ಧ್ಯಾನ ಪ್ರಾರಂಭಿಸಿದ್ದೇವೆ. ಇದರಿಂದ ಮಕ್ಕಳಲ್ಲಿ ಮಹತ್ತರ ಬದಲಾವಣೆ ಕಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹುಬ್ಬಳ್ಳಿಯ ಧ್ಯಾನ ಪರಿಣಿತೆ ಗುರುಮಾತೆ ಪೂರ್ಣಿಮಾ ಅಣ್ಣಪ್ಪನವರ ಮಾತನಾಡಿ, ಧ್ಯಾನ ಎಂದರೆ ಮುಕ್ತಿ ನಮ್ಮ ದೇಹದ ಮೇಲಿನ ನಿಯಂತ್ರಣಕ್ಕೆ ಧ್ಯಾನ ಅತ್ಯಂತ ಉಪಯೋಗ ಎಂದರು.

ಈ ವೇಳೆ ಶೀಲಾ ಪಾಟೀಲ ಮಾತನಾಡಿ, ನಮ್ಮ ಉಸಿರೇ ನಮ್ಮ ಗುರು, ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಧ್ಯಾನ ಮಗ್ನರಾದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿದ ಓಂ ಶಾಂತಿ ಈಶ್ವರಿಯ ವಿದ್ಯಾಲಯದ ನಾಗಲಾಂಬಿಕೆ ಅಕ್ಕನವರು ಮಾತನಾಡಿ, ಯೋಗ ಎಂದರೆ ಮನಸ್ಸು ಮತ್ತು ಬುದ್ಧಿ ಸ್ಥಿರವಾಗಿಸುವುದು ಧ್ಯಾನ ಮಾಡುವುದರಿಂದ ಮನಸ್ಸಿನ ಆಂತರಿಕ ಸಂತೋಷ ಹೆಚ್ಚಾಗುತ್ತದೆ. ದೇಗುಲ ಎಂಬ ಸಂಸ್ಥೆಯಲ್ಲಿ ಪರಮಾತ್ಮನ ರೂಪದಲ್ಲಿ ವಿಶೇಷಚೇತನ ಮಕ್ಕಳ ಸೇವೆ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಸಭೆಯಲ್ಲಿ ಕಾರ್ಯಕ್ರಮದಲ್ಲಿ ಧ್ಯಾನ ಸಮಿತಿಯ ಸದಸ್ಯ ಶುಭಾಷ ಓದುನವರ, ಜಿ.ಎಸ್. ಬಾಳೆಹಳ್ಳಿಮಠ, ಧ್ಯಾನ ಶಿಕ್ಷಕಿ ಶಶಿಕಲಾ ವಡಕಣ್ಣವರ, ವೀಣಾ ರವಿ ಹತ್ತಿಕಾಳ, ಮುಖ್ಯೋಪಾಧ್ಯಾಯನಿ ಜಯಶ್ರೀ ಶೆಟ್ಟರ್‌, ಪ್ರತಿಮಾ ಮಹಾಜನಶೆಟ್ಟರ್‌, ಜಿ.ಪಿ.ಪವಾರ ಇದ್ದರು.

ಗೀತಾ ಬಾಳೋಜಿ ಕಾರ್ಯಕ್ರಮ ನಿರೂಪಿಸಿದರು. ಸುಮಾ ಶೆಟ್ಟರ ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ಲಕ್ಷ್ಮೀ ರಬ್ಬನಗೌಡ್ರ ಕಾರ್ಯಕ್ರಮ ಅನುವಾದಿಸಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ