ಮೂಲ್ಕಿ: ಕೃಷಿಕರು ದೇಶದ ಬೆನ್ನೆಲುಬಾಗಿದ್ದು ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಕೃಷಿಕರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಂಗಾಧರ ವಿ ಶೆಟ್ಟಿ ವಹಿಸಿದ್ದು ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕಳೆದ ಸಾಲಿನಲ್ಲಿ ಸಂಘಕ್ಕೆ ಅತ್ಯಧಿಕ ಹಾಲು ಹಾಕಿದ ರಾಕೇಶ್ ಕಾಮತ್ ವೆಂಕಟರಮಣ ದೇವಸ್ಥಾನ (ಪ್ರಥಮ), ದಯಾನಂದ ರಾವ್ ಕವಾತ್ತಾರ್ (ದ್ವಿ) ಹಾಗೂ ಫಯಾಜ್ ಅಹಮದ್ ಕಿಲ್ಪಾಡಿ (ತೃತಿಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ಸದಸ್ಯರಿಗೆ ಪ್ರಸಕ್ತ ಸಾಲಿನ ಶೇ. 17 ಡಿವಿಡೆಂಡ್ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷೆ ಪ್ಲೇವಿ ಡಿಸೋಜ, ನಿರ್ದೇಶಕರಾದ ಕೃಷ್ಣ ಆರ್ ಶೆಟ್ಟಿ, ಹರೀಶ್ ಶೆಟ್ಟಿ, ಗಂಗಾಧರ ದೇವಾಡಿಗ, ವೆಂಕಟೇಶ, ಹೇಮಂತ ಶೆಟ್ಟಿ, ದಯಾನಂದ ರಾವ್, ಪ್ರವೀಣ, ಪ್ರತಿಭಾ ಡಿ ಶೆಟ್ಟಿ, ಸಂಧ್ಯಾ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಎಸ್ , ಅತಿಕಾರಿಬೆಟ್ಟು ಪಂಚಾಯತ್ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಮತ್ತಿತರರು ಉಪಸ್ಥಿತರಿದ್ದರು.ಕಾರ್ಯನಿರ್ವಣಾಧಿಕಾರಿ ಕಿಶೋರ್ ಸ್ವಾಗತಿಸಿ, ನಿರೂಪಿಸಿದರು. ವೆಂಕಟೇಶ ವಂದಿಸಿದರು.