ಕನ್ನಡಪ್ರಭ ವಾರ್ತೆ ಬೇಲೂರುಶೀಘ್ರದಲ್ಲೆ ತಾಲೂಕು ಮಟ್ಟದ ಸಭೆ ಕರೆದು ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಗ್ಯಾರಂಟಿ ಯೋಜನೆಯಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ನ್ಯಾಯ ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ದೇಶಾಣಿ ಆನಂದ್ ತಿಳಿಸಿದರು.ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಆಹಾರ ಪಡಿತರ ಚೀಟಿ, ವೃದ್ಧಾಪ್ಯ ವೇತನ, ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭಿವಗಳ ಖಾತೆಗೆ ಸಂದಾಯವಾಗಿಲ್ಲವೆಂದು ನೂರಾರು ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ಹಾಗೂ ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹರಿಸಿ ಮಾತನಾಡಿದ ಅವರು, ತಾಲೂಕು ಮಟ್ಟದಲ್ಲಿ ಸಭೆ ಮಾಡಿದ ಸಂದರ್ಭ ನಮಗೆ ಸಮಸ್ಯೆಗಳ ಅರ್ಜಿ ಬರುತ್ತಿರಲಿಲ್ಲ. ಗ್ರಾಪಂ ಮಟ್ಟದಲ್ಲೆ ಸಮಸ್ಯೆಗಳನ್ನು ತಿಳಿದು ಕೊಳ್ಳಬೇಕೆಂಬ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಭೆ ಮಾಡಲಾಗಿದೆ. ಸಾಕಷ್ಟು ಜನರು ಉತ್ಸುಕತೆಯಿಂದ ಸಭೆಗೆ ಬಂದು ಸಮಸ್ಯೆಗಳನ್ನು ಬಗೆಹರಿಸುವಂತೆ ಅರ್ಜಿ ಸಲ್ಲಿಸಿದ್ದರಿಂದ ಸಾಧ್ಯವಾದಷ್ಟು ಇಲ್ಲಿಯೇ ಬಗೆಹರಿಸಿದ್ದೇವೆ ಎಂದರು.ಇದರ ಜತೆಗೆ ಮಹತ್ವವಾದ ಪಿಂಚಣಿ ಯೋಜನೆಯಲ್ಲಿ ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರೆ ಪಿಂಚಣಿ ಯೋಜನೆಗಳನ್ನು ಪರಿಷ್ಕರಣೆಯಡಿ ತಡೆ ಹಿಡಿದಿತ್ತು. ಸರ್ಕಾರ ಪಿಂಚಣಿ ಮರು ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ವರ್ಗಾಹಿಸಿರುವುದರಿಂದ ಈಗ ಬಂದಿರುವ ಅರ್ಜಿಗಳನ್ನು ಸ್ವೀಕರಿಸಿ ತಹಸೀಲ್ದಾರ್‌ಗೆ ಕಳುಹಿಸಲಾಗುವುದು. ನಾವು ತಹಸೀಲ್ದಾರ್‌ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ರಾಜನಶಿರಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ ಮಾಡಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದೇ ರೀತಿ ನಾರಾಯಣಪುರ ಗ್ರಾಪಂ ವ್ಯಾಪ್ತಿಯಲ್ಲೂ ಸಭೆ ಮಾಡಿಸಲಾಗುವುದು ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಪ್ರತಾಪ್, ಧರ್ಮಾಬೋವಿ, ನಿಶ್ಚಲ್, ಅಶೋಕ್, ಮನ್ಸೂರ್ ಅಹಮದ್, ಸುರೇಶ್, ತಾಪಂ ಇಒ ಪ್ರಕಾಶ್, ಆಹಾರ ಇಲಾಖೆ ನಿರೀಕ್ಷಕಿ ಗೀತಾಂಜಲಿ, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ತೇಜಸ್ವಿನಿ, ಗ್ರಾಪಂ ಪಿಡಿಒ ಆರಾಧ್ಯ ಇತರರಿದ್ದರು.