ಮಾನ್ಸೂನ್ ಮುನ್ನೆಚರಿಕೆ ಕ್ರಮದ ಕುರಿತು ಶೀಘ್ರ ಸಭೆ: ರಾಜೇಗೌಡ

KannadaprabhaNewsNetwork |  
Published : May 13, 2025, 01:36 AM IST
೧೨ಬಿಹೆಚ್‌ಆರ್ ೧: ಬಾಳೆಹೊನ್ನೂರು ರಂಭಾಪುರಿ ಪೀಠದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದಿಂದ ಮಂಜೂರಾದ ರೂ.೨೫ ಲಕ್ಷ ಅನುದಾನದ ಚೆಕ್ ಅನ್ನು ಶಾಸಕ ಟಿ.ಡಿ.ರಾಜೇಗೌಡ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ ಹಸ್ತಾಂತರಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಶೃಂಗೇರಿ ಕ್ಷೇತ್ರದ ಪ್ರಮುಖ ಯಾತ್ರಾ ಸ್ಥಳವಾದ ರಂಭಾಪುರಿ ಪೀಠದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಕೆಆರ್‌ಇಡಿಎಲ್‌ನಿಂದ ₹25 ಲಕ್ಷ ಅನುದಾನ ನೀಡಲಾಗಿದೆ ಎಂದು ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

- ರಂಭಾಪುರಿ ಪೀಠದ ಅಭಿವೃದ್ಧಿ ಕಾರ್ಯಕ್ಕೆ ₹25 ಲಕ್ಷ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶೃಂಗೇರಿ ಕ್ಷೇತ್ರದ ಪ್ರಮುಖ ಯಾತ್ರಾ ಸ್ಥಳವಾದ ರಂಭಾಪುರಿ ಪೀಠದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಕೆಆರ್‌ಇಡಿಎಲ್‌ನಿಂದ ₹25 ಲಕ್ಷ ಅನುದಾನ ನೀಡಲಾಗಿದೆ ಎಂದು ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.ರಂಭಾಪುರಿ ಪೀಠದಲ್ಲಿ ಸೋಮವಾರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ ₹25 ಲಕ್ಷದ ಚೆಕ್ ಹಸ್ತಾಂತರಿಸಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಂಭಾಪುರಿ ಪೀಠಕ್ಕೆ ನಿತ್ಯವೂ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದು ಇದೊಂದು ಪವಿತ್ರ ಯಾತ್ರಾ ಕ್ಷೇತ್ರವಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದರು.ಪ್ರಮುಖವಾಗಿ ರಂಭಾಪುರಿ ಪೀಠಕ್ಕೆ ತೆರಳುವ ರಸ್ತೆ ಅಭಿವೃದ್ಧಿ, ಶ್ರೀ ಜಗದ್ಗುರು ರೇಣುಕಾಚಾರ್ಯರ 51 ಅಡಿ ಎತ್ತರದ ವಿಗ್ರಹ ನಿರ್ಮಾಣದ ಸ್ಥಳ , ಸಮುದಾಯ ಭವನದ ಅಭಿವೃದ್ಧಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದಿಂದ ₹25 ಲಕ್ಷ ಅನುದಾನ ನೀಡಲಾಗಿದೆ. ಜಗದ್ಗುರುಗಳ ಮಾರ್ಗದರ್ಶನದಲ್ಲಿ ಹಾಗೂ ಜನರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶ ಎಂದರು.

ಮಾನ್ಸೂನ್ ಪೂರ್ವ ಸಿದ್ಧತೆ ಕುರಿತು ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ಈ ಭಾಗದಲ್ಲಿ ಮಳೆ ಹಾನಿಯಾದ ಬಗ್ಗೆ ಹಾಗೂ ಮಳೆಯ ವಿವಿಧ ಆಗು ಹೋಗುಗಳ ಬಗ್ಗೆ ನಮ್ಮ ಗಮನದಲ್ಲಿದೆ. ಕೇತ್ರದಲ್ಲಿ ಉಂಟಾದ ಭೂ ಕುಸಿತ, ಸೇತುವೆಗಳು ಕೊಚ್ಚಿ ಹೋಗಿರುವುದು, ರಸ್ತೆಗಳು ಹಾಳಾಗಿರುವುದು, ಮರಗಳು ಬಿದ್ದು ಮನೆ, ವಾಹನಗಳು ಹಾನಿಯಾಗಿರುವುದು ಎಷ್ಟು ಪ್ರಮಾಣದಲ್ಲಿ ನಡೆದಿದೆ ಎಂದು ತಿಳಿದಿದೆ. ಮಾನ್ಸೂನ್‌ನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಶೀಘ್ರದಲ್ಲಿ ನಡೆಯಲಿದೆ.

ಇದರೊಂದಿಗೆ ತಾಲೂಕು ಮಟ್ಟದಲ್ಲಿ ನಾವು ಕೂಡ ಅತೀ ಶೀಘ್ರದಲ್ಲಿ ಪ್ರತೀ ವರ್ಷದಂತೆ ಸಭೆ ನಡೆಸಿ ತಂಡ ರಚಿಸಿ ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹಾಗೂ ಮಾನ್ಸೂನ್ ಪೂರ್ವ ಸಿದ್ಧತೆ ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದರು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಗ್ರಾಪಂ ಸದಸ್ಯರಾದ ಎಂ.ಜೆ.ಮಹೇಶ್ ಆಚಾರ್ಯ, ಬಿ.ಸಿ.ಸಂತೋಷ್‌ಕುಮಾರ್, ಇಬ್ರಾಹಿಂ ಶಾಫಿ, ಪಿಎಸಿಎಸ್ ನಿರ್ದೇಶಕ ಕೆ.ಕೆ.ಗೌತಮ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಪ್ರಮುಖರಾದ ಶಿವಶಂಕರ್, ಕೆ.ಟಿ.ಗೋವಿಂದೇಗೌಡ, ಸುಧಾಕರ್, ಪ್ರಭಾಕರ್ ಶೆಟ್ಟಿ, ವಿನುತ್ ಮತ್ತಿತರರು ಹಾಜರಿದ್ದರು. -- (ಬಾಕ್ಸ್)--ಉಗ್ರವಾದಿತನ ಸಂಪೂರ್ಣ ನಿರ್ನಾಮವಾಗಲಿ ಕಳೆದ ಒಂದು ವಾರದಿಂದ ಇಂಡಿಯಾ- ಪಾಕಿಸ್ತಾನದ ಯುದ್ಧದ ಛಾಯೆ ಕಾರ್ಮೋಡ ಕವಿದಿದ್ದು, ಅದನ್ನು ಎದುರಿಸಲು ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಎಲ್ಲ ರೀತಿ ಕ್ರಮಗಳನ್ನು ಕೈಗೊಂಡಿದ್ದರು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಕದನ ವಿರಾಮ ಘೋಷಣೆಯಾಗಿರುವುದು ಒಳ್ಳೆಯ ಬೆಳವಣಿಗೆ. ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾಗಬಾರದು. ಉಗ್ರವಾದಿಗಳು ಮಾಡಿದ ತಪ್ಪಿಗೆ ಉಗ್ರವಾದಿಗಳನ್ನೇ ಬಲಿ ತೆಗೆದುಕೊಳ್ಳಬೇಕು. ಉಗ್ರವಾದಿತನ ಸಂಪೂರ್ಣ ನಿರ್ನಾಮವಾಗಬೇಕು ಎಂದರು. ಉಗ್ರವಾದ ನಿರ್ಮೂಲದ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರೀತಿ ಕ್ರಮ ಕೈಗೊಂಡಿದ್ದು, ರಾಜ್ಯ ಸರ್ಕಾರ ಅದಕ್ಕೆ ಸ್ಪಂದಿಸುವ ಕೆಲಸ ಮಾಡಿದೆ. ಮುಖ್ಯ ಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಕದನ ವಿರಾಮ ಘೋಷಣೆಯಾದರೂ ಸಹ ಮುಂದೆಯೂ ಉಗ್ರವಾದ ನಿರ್ನಾಮ ಮಾಡಲು, ಉಗ್ರರನ್ನು ಸದೆ ಬಡಿಯಲು ನಮ್ಮ ಸಹಕಾರ ಸದಾ ಇರುತ್ತದೆ ಎಂದರು.೧೨ಬಿಹೆಚ್‌ಆರ್ ೧:

ಬಾಳೆಹೊನ್ನೂರು ರಂಭಾಪುರಿ ಪೀಠದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದಿಂದ ಮಂಜೂರಾದ ₹೨೫ ಲಕ್ಷ ಅನುದಾನದ ಚೆಕ್ ಅನ್ನು ಶಾಸಕ ಟಿ.ಡಿ.ರಾಜೇಗೌಡ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ ಹಸ್ತಾಂತರಿಸಿದರು. ರವಿಚಂದ್ರ, ಎಂ.ಎಸ್.ಜಯಪ್ರಕಾಶ್, ಮಹೇಶ್ ಆಚಾರ್ಯ, ಇಬ್ರಾಹಿಂ ಶಾಫಿ, ಸಂತೋಷ್‌ಕುಮಾರ್, ಸ್ಟೀಫನ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐತಿಹಾಸಿಕ ಸ್ಮಾರಕ ಮುಂದಿನ ಪೀಳಿಗೆಗೆ ಉಳಿಯಲಿ: ಡಿಸಿ ಸಂಗಪ್ಪ
ಚೇರಂಬಾಣೆ: ವಾರ್ಷಿಕ ಕ್ರೀಡಾ ದಿನಾಚರಣೆ