ಮೇಲುಕೋಟೆ ಧಾರ್ಮಿಕ ಕ್ಷೇತ್ರ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದೆ: ವಿ.ವೆಂಕಟರಾಮೇಗೌಡ

KannadaprabhaNewsNetwork |  
Published : Dec 15, 2024, 02:02 AM IST
14ಕೆಎಂಎನ್ ಡಿ13 | Kannada Prabha

ಸಾರಾಂಶ

ನಮ್ಮೂರಿನ ಕನ್ನಡ ಪತ್ರಿಕಾ ಲೋಕದ ದಿಗ್ಗಜ ಖಾದ್ರಿ ಶಾಮಣ್ಣ ಸಹ ಸೇವೆ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಪ್ರಾತಸ್ಮರಣೀಯರನ್ನು ನೆನೆಯುವ ಕಾರ್ಯ ನಡೆಯಬೇಕು. ಇಲ್ಲಿನ ಶತಮಾನದ ಸರ್ಕಾರಿ ಪ್ರಾಥಮಿಕ ಶಾಲೆ, ಸಂಸ್ಕೃತ ಮಹಾ ಪಾಠ ಶಾಲೆ ಗ್ರಂಥಾಲಯಗಳಿವೆ. ಅವುಗಳ ಬಲವರ್ಧನೆಯಾಗಬೇಕಾದ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆ ಧಾರ್ಮಿಕ ಕ್ಷೇತ್ರ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ವಿ.ವೆಂಕಟರಾಮೇಗೌಡ ಹೇಳಿದರು.

87 ಸಾಹಿತ್ಯ ಸಮ್ಮೇಳನ ಪ್ರಚಾರ ರಥವನ್ನು ಸ್ವಾಗತಿಸಿ ಮಾತನಾಡಿ, ಕನ್ನಡದ ಮೊದಲ ಗೀತರೂಪಕ ರಚನೆಕಾರರೂ ಶ್ರೇಷ್ಠ ಕವಿಗಳೂ ಆದ ಪು.ತಿ.ನ ಭಾರತದ ಶ್ರೇಷ್ಠ ಪದ್ಮಶ್ರೀ ಮತ್ತು ಸಾಹಿತ್ಯಕಾಡೆಮಿ ಪ್ರಶಸ್ತಿಗೆ ಭಾಜನರಾಗಿ ಹುಟ್ಟೂರು ಜಿಲ್ಲೆ ಹಾಗೂ ಕರುನಾಡಿಗೆ ಕೀರ್ತಿತಂದಿದ್ದಾರೆ ಎಂದರು.

ನಮ್ಮೂರಿನ ಕನ್ನಡ ಪತ್ರಿಕಾ ಲೋಕದ ದಿಗ್ಗಜ ಖಾದ್ರಿ ಶಾಮಣ್ಣ ಸಹ ಸೇವೆ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಪ್ರಾತಸ್ಮರಣೀಯರನ್ನು ನೆನೆಯುವ ಕಾರ್ಯ ನಡೆಯಬೇಕು. ಇಲ್ಲಿನ ಶತಮಾನದ ಸರ್ಕಾರಿ ಪ್ರಾಥಮಿಕ ಶಾಲೆ, ಸಂಸ್ಕೃತ ಮಹಾ ಪಾಠ ಶಾಲೆ ಗ್ರಂಥಾಲಯಗಳಿವೆ. ಅವುಗಳ ಬಲವರ್ಧನೆಯಾಗಬೇಕಾದ ಅಗತ್ಯವಿದೆ. ಹೆಚ್ಚು ಕನ್ನಡ ಬಳಸುವ ಜಿಲ್ಲೆ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯಸಮ್ಮೇಳನ ಯಶಸ್ವಿಯಾಗಲು ಎಲ್ಲರೂ ಭಾಗಿಯಾಗಬೇಕು ಎಂದು ಕೋರಿದರು.

ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಸಾಹಿತ್ಯ ಪ್ರಚಾರ ರಥಕ್ಕೆ ಪೂಜೆ ನೆರವೇರಿಸಿದ ದೇಗುಲದ ಕೈಂಕರ್ಯಪರರೂ ಆದ ಗ್ರಾಪಂ ಸದಸ್ಯ ವಾದ್ಯಾರ್ ತಿರುಮಲೆ ಮಾತನಾಡಿ, ಮಂಡ್ಯ ಜಿಲ್ಲಾಡಳಿತ ಸರ್ಕಾರದ ಸಹಕಾರದಲ್ಲಿ ಸಮ್ಮೇಳನಕ್ಕೆ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆ ಮಾಡಿದೆ. ಸಾಹಿತ್ಯ ಸಮ್ಮೇಳನದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸಾಹಿತ್ಯಾಸಕ್ತರು ಸ್ಮಾರಕಗಳ ತವರು ಮೇಲುಕೋಟೆಗೆ ಬಂದಾಗ ಅವರೊಡನೆ ಸೌಹಾರ್ದಯುವಾಗಿ ನಡೆದುಕೊಂಡು ಮೇಲುಕೋಟೆಯ ಸ್ಮಾರಕಗಳ ಮಹತ್ವದ ಮಾಹಿತಿಯನ್ನು ಅವರಿಗೆ ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಜಿ.ಕೆ.ಕುಮಾರ್, ವೀರಾಂಜನೇಯಸ್ವಾಮಿ ಅರ್ಚಕ ಚಂದುಭಾರದ್ವಾಜ್, ಮುಖ್ಯಶಿಕ್ಷಕರಾದ ವಸಂತಕುಮಾರ್, ಎಸ್.ಎನ್ ಸಂತಾನರಾಮನ್ ಯದುಶೈಲ ಪ್ರೌಢಶಾಲೆ, ಸರ್ಕಾರಿ ಬಾಲಕರು ಮತ್ತು ಬಾಲಕಿಯರ ಶಾಲೆಯ ಶಿಕ್ಷಕ ವೃಂದ, ಮಕ್ಕಳು ನಾಗರೀಕರು ಭಾಗವಹಿಸಿದ್ದರು. ಸಾಹಿತ್ಯ ಪ್ರಚಾರ ರಥ ದೇವಾಲಯದ ಪ್ರದಕ್ಷಿಣೆಮಾಡಿ ಕೆ.ಆರ್.ಪೇಟೆಯತ್ತ ತೆರಳಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ