ಕನ್ನಡಪ್ರಬ ವಾರ್ತೆ ನಾಪೋಕ್ಲು
ಅವರು ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಚೇರಂಬಾಣೆ ಗೌಡ ಮಹಿಳಾ ನೂತನ ಒಕ್ಕೂಟವನ್ನು (ಅನಾವರಣ) ಉದ್ಘಾಟನೆ ಗೊಳಿಸಿ ಹಾಗೂ ನೂತನ ಸಮಿತಿಗೆ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಪ್ರತಿಯೊಬ್ಬ ಮಹಿಳೆಯಲ್ಲಿ ವಿವಿಧ ಕಲಾ ಪ್ರತಿಭೆಗಳಿರುತ್ತವೆ. ಒಂದು ಕಡ್ಡಿಯಿಂದ ಕಸ ಗುಡಿಸಲಾಗದು ಒಗ್ಗಟ್ಟಿನಲ್ಲಿ ಬಲವಿದೆ. ಸದಸ್ಯರು ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತ ರಾಗಬೇಕು ಎಂದರು..
ಒಕ್ಕೂಟದ ಸದಸ್ಯತ್ವ ನೋಂದಣಿ ಪುಸ್ತಕವನ್ನು ಚೇರಂಬಾಣೆ ಗೌಡ ಸಮಾಜದ ನಿರ್ದೇಶಕರಾದ ನೆಯ್ಯಣಿ ಹೇಮಲತಾ ತಾರೇಂದ್ರ ಅವರು ಅನಾವರಣಗೊಳಿಸಿ ಮಾತನಾಡಿ ಬಹಳ ವರ್ಷಗಳ ಮನವಿಯ ಫಲಶ್ರುತಿ ಯಾಗಿ ನೂತನ ಒಕ್ಕೂಟ ರಚನೆಯಾಗಿದೆ. 16 ಗ್ರಾಮಗಳ ಸಮ್ಮಿಲನ ಈ ಒಕ್ಕೂಟವಾಗಿದ್ದು ಉತ್ತಮ ಕಾರ್ಯ ಚಟುವಟಿಕೆಗಳ ಮೂಲಕ ಪ್ರಗತಿ ಕಾಣಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಬೈಮನ ಅನುಜಾ ಹರೀಶ್ ಅವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ನೂತನ ಒಕ್ಕೂಟಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು. ಇದೇ ಸಂದರ್ಭ ನೂತನ ಒಕ್ಕೂಟದ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿದರು. ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಸ್ವಾಗತಿಸಿದರು. ಬೈಮನ ಜ್ಯೋತಿ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿ ಕೊಡಪಾಲು ತೀರ್ಥ ಗಣಪತಿ ವಂದಿಸಿದರು.