ನಗರಸಭೆ ಬಜೆಟ್ ಪೂರ್ವ ಸಭೆಗೆ ಸದಸ್ಯರೇ ಗೈರು!

KannadaprabhaNewsNetwork |  
Published : Jan 31, 2024, 02:15 AM IST
ಸಿಕೆಬಿ-1 ನಗರಸಭೆ ಬಜೆಟ್ ಪೂರ್ವ ಭಾವಿ ಸಭೆಯನಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು | Kannada Prabha

ಸಾರಾಂಶ

ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೊದಲ ಅವಧಿ ಮುಗಿದು ಆರು ತಿಂಗಳಾಗುತ್ತಾ ಬಂದಿದ್ದರೂ ಎರಡನೇ ಅವಧಿಗೆ ಚುನಾವಣೆ ನಡೆಸಲು ಸರ್ಕಾರದ ತೊಡಕಿನಿಂದ ಮೀಸಲಾತಿ ಘೋಷಣೆಯಾಗದೇ ಚುನಾವಣೆ ನಡೆದಿಲ್ಲಾ, ಇದರಿಂದ ಅಧಿಕಾರಿಗಳ ದರ್ಬಾರ್‌ ನಡೆದಿದೆ ಎಂಬುದು ಸದಸ್ಯ ಆಕ್ರೋಶಕ್ಕೆ ಕಾರಣ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಗರಸಭೆಯ 31 ವಾರ್ಡ್‌ಗಳ ಸದಸ್ಯರು ಗೈರಾಗಿದ್ದರು. ಅಲ್ಲದೆ ಸಭೆಯಲ್ಲಿದ್ದ ಸಾರ್ವಜನಿಕರು ಬಜೆಟ್‌ಗೆ ಸಲಹೆ ನೀಡದೆ ಅಧಿಕಾರಿಗಳ ವಿರುದ್ಧ ದೂರಿಗಳ ಸುರಿಮಳೆಗೈದರು. ನಗರದ ನಗರಸಭೆ ಆವರಣದಲ್ಲಿ 2024-25ರ ಆಯವ್ಯಯ ಮಂಡನೆಗಾಗಿ ನಗರಸಭಾ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧ್ಯಕ್ಷತೆಯಲ್ಲಿ ಸೋಮವಾರ ಸಾರ್ವಜನಿಕ ಸಲಹಾ ಸಭೆ ಏರ್ಪಡಿಸಲಾಗಿತ್ತು. ಬಜೆಟ್‌ಗೆ ಸಂಬಂಧಿಸಿದ ಚರ್ಚೆಗಳ ಬದಲಾಗಿ ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರು ದೂರಿದರು.

ಅಧ್ಯಕ್ಷರ ಆಯ್ಕೆಯಾಗಿಲ್ಲ

ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೊದಲ ಅವಧಿ ಮುಗಿದು ಆರು ತಿಂಗಳಾಗುತ್ತಾ ಬಂದಿದ್ದರೂ ಎರಡನೇ ಅವಧಿಗೆ ಚುನಾವಣೆ ನಡೆಸಲು ಸರ್ಕಾರದ ತೊಡಕಿನಿಂದ ಮೀಸಲಾತಿ ಘೋಷಣೆಯಾಗದೇ ಚುನಾವಣೆ ನಡೆದಿಲ್ಲಾ, ಇದರಿಂದ ಅಧಿಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಈ-ಸ್ವತ್ತು ಮಾಡಲು ತಿಂಗಳಾನುಗಟ್ಟಲೇ ಕಚೇರಿಗೆ ಅಲೆಸುತ್ತಿದ್ದಾರೆ. ತೆರಿಗೆ ವಸೂಲಾತಿಗೂ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.ಸಮಸ್ಯೆ ಪರಿಹರಿಸಲು ಕ್ರಮ

ಸಭೆಯ ನಂತರ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಬೀದಿ ದೀಪದ ಸಮಸ್ಯೆಗೆ ನಗರಸಭೆ ಅಧಿಕಾರಿಗಳು ರಾತ್ರಿ ಗಸ್ತು ನಡೆಸಿ ಕೆಟ್ಟಿರುವ ಬೀದಿ ದೀಪಗಳ ಸರಿಪಡಿಸುವಂತೆ ತಿಳಿಸಿದ್ದೇನೆ. ರಸ್ತೆ ಗುಂಡಿ ಮುಚ್ಚಲು.ಹೊಸ ರಸ್ತೆ ಮಾಡಲು.ನಗರದಲ್ಲಿ ಕುಡಿಯುವ ನೀರಿನ ಸರ್ಮಪಕ ಪೂರೈಕೆಗೆ, ಮೋರಿಗಳ ರಿಪೇರಿ, ಒತ್ತುವರಿ ಯಾಗಿರುವ ನಗರಸಭೆ ಆಸ್ತಿ, ಪುಟ್ಪಾತ್ ತೆರವು ಮತ್ತು ನಗರಸಭೆ ಹಳೆ ಮಳಿಗೆಗಳು ಹರಾಜು ಆಗದೇ ಹಳಬರೆ ಸಬ್ ಲೀಸ್‌ಗೆ ಇರುವ ಬಗ್ಗೆ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹೊಸ ಮಳಿಗೆಗಳು ಹರಾಮಾಡಲು ಶೀಘ್ರದಲ್ಲೇ ಕ್ರಮ ವಹಿಸುವುದಾಗಿ ತಿಳಿಸಿದರು.ಮತ್ತೆ ಸಭೆ ಕರೆಯಲು ನಿರ್ಧಾರ

ಕಾರಣಾಂತರಗಳಿಂದ ಇಂದು ನಡೆದ ಸಭೆಗೆ ನಗರಸಭಾ ಸದಸ್ಯರು ಬಂದಿಲ್ಲ ಮತ್ತು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಬಂದಿಲ್ಲ ಮತ್ತೆ ಶೀಘ್ರದಲ್ಲೇ ಇನ್ನೊಂದು ಸಭೆ ಕರೆದು ಆ ಸಭೆಯಲ್ಲಿ ನಗರಸಭೆ ಬಜೆಟ್ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ನಗರಸಭೆಯ ಪೌರಾಯುಕ್ತ ಮಂಜುನಾಥ್, ಪರಿಸರಅಭಿಯಂತರ ಉಮಾಶಂಕರ್, ಸಾರ್ವಜನಿಕರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ