ಉತ್ತಮ ಹವ್ಯಾಸದಿಂದ ಮಾನಸಿಕ ಸ್ವಾಸ್ಥ್ಯ: ಸರೋಜಾ ಭಟ್ಟ

KannadaprabhaNewsNetwork | Published : Dec 2, 2024 1:16 AM

ಸಾರಾಂಶ

ಸಹವಾಸದ ದೋಷಗಳಿಂದ ದುಶ್ಚಟಗಳು ಹಬ್ಬುತ್ತದೆ. ನಮ್ಮ ಆರೋಗ್ಯದ ಗುಟ್ಟು ಜೀವನಶೈಲಿಯಲ್ಲಿ ಇರುತ್ತದೆ. ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡರೆ ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಬಹುದು.

ಯಲ್ಲಾಪುರ: ತಂಬಾಕು ಜಗಿಯುವುದರಿಂದ‌ ತಾತ್ಕಾಲಿಕ ಸಂತೋಷ ನೀಡಿದರೂ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆ ಬಲಿಯಾಗಿ ದೈಹಿಕ ಸಾಮರ್ಥ್ಯ ಕಳೆದುಕೊಳ್ಳುವ ಅಪಾಯವೂ ಇದೆ. ವೈಜ್ಞಾನಿಕ ಸತ್ಯ ಅರಿತು ಬದುಕು ರೂಪಿಸಿಕೊಳ್ಳಬೇಕು ಎಂದು ವಿಜ್ಞಾನ ಶಿಕ್ಷಕಿ ಸರೋಜಾ ಭಟ್ಟ ಅಭಿಪ್ರಾಯಪಟ್ಟರು.

ಶನಿವಾರ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಆರೋಗ್ಯ ಇಲಾಖೆಯ ಹಮ್ಮಿಕೊಂಡಿದ್ದ ತಂಬಾಕು ನಿಯಂತ್ರಣ ಮತ್ತು ಆರೋಗ್ಯ ಕಾಳಜಿ ಕುರಿತ ಅಭಿಯಾನದಲ್ಲಿ ಮಾತನಾಡಿದರು.

ಸಹವಾಸದ ದೋಷಗಳಿಂದ ದುಶ್ಚಟಗಳು ಹಬ್ಬುತ್ತದೆ. ನಮ್ಮ ಆರೋಗ್ಯದ ಗುಟ್ಟು ಜೀವನಶೈಲಿಯಲ್ಲಿ ಇರುತ್ತದೆ. ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡರೆ ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಬಹುದು.

ಆರೋಗ್ಯ ಸಹಾಯಕರಾದ ದಯಾನಂದ ರವರು ತಂಬಾಕು ನಿಯಂತ್ರಣ ಕುರಿತಾಗಿ ಮಾಹಿತಿ ನೀಡಿದರು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಅಕ್ಬರ್ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಸಲಹೆ ನೀಡಿದರು.

ವೇದಿಕೆಯಲ್ಲಿ ಶಿಕ್ಷಕರಾದ ವಿನೋದ ಗಾಯನ್ನನವರ್, ಸೀಮಾ ಗೌಡ, ಸುಷ್ಮಾ ಗದ್ದೆ, ಆಶಾ ಕಾರ್ಯಕರ್ತೆ ಗೀತಾ ಆಚಾರಿ ಉಪಸ್ಥಿತರಿದ್ದರು. ಶಿಕ್ಷಕ ಗಿರೀಶ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.ಬಿಬಿಎ ಮ್ಯಾನೇಜ್‌ಮೆಂಟ್‌ ಫೆಸ್ಟ್‌ಗೆ ತೆರೆ

ಕುಮಟಾ: ಇಲ್ಲಿನ ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಬಿಬಿಎ ವಿಭಾಗದಲ್ಲಿ ಮ್ಯಾನೇಜಮೆಂಟ್ ಫೆಸ್ಟ್‌ ಮತ್ತು ಪ್ರದರ್ಶನ ಮೇಳವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಎಚ್.ಕೆ. ಶಾನಭಾಗ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಕಲಿತ ವಿಷಯಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಸಹಾಯಕವಾಗುತ್ತವೆ. ಇಂತಹ ಕಾರ್ಯಕ್ರಮಗಳು ಪದೇ ಪದೇ ನಡೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ರೇವತಿ ಆರ್. ನಾಯ್ಕ ಮಾತನಾಡಿದರು. ಬಾಳಿಗಾ ವಾಣಿಜ್ಯ ಪಿಯು ವಿಭಾಗದ ಪ್ರಾಚಾರ್ಯ ಪ್ರೊ. ಎನ್.ಜಿ. ಹೆಗಡೆ, ಯುನಿಯನ್ ಕಾರ್ಯಾಧ್ಯಕ್ಷ ಡಾ. ಅರವಿಂದ ನಾಯಕ, ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ತರಬೇತುದಾರರಾದ ಪ್ರತೀಕ್ಷಾ ಮಾತನಾಡಿದರು.

ಪ್ರೊ. ಮೋಹಿನಿ ನಾಯ್ಕ ಸ್ವಾಗತಿಸಿದರು. ಬಿಬಿಎ ವಿಭಾಗದ ಸಂಯೋಜಕ ಪ್ರೊ. ಸಂತೋಷ ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ನಿರ್ಮಲಾಪ್ರಭು, ಪ್ರೊ. ಸುಷ್ಮಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ನಿಕಿತಾ ವಂದಿಸಿದರು. ಬಿಬಿಎ ವಿದ್ಯಾರ್ಥಿಗಳು ಮ್ಯಾನೇಜಮೆಂಟ್ ವಿಷಯದ ವಿವಿಧ ಆಯಾಮಗಳ ಮೇಲೆ ತಾವು ತಯಾರಿಸಿದ ವಿಭಿನ್ನ ಮಾದರಿಗಳನ್ನು ಪ್ರದರ್ಶಿಸಿ ಅವುಗಳ ಕಾರ್ಯವಿಧಾನವನ್ನು ವಿವರಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸ್ಥಾಪಿಸಲ್ಪಟ್ಟ ವಿವಿಧ ವ್ಯಾಪಾರಿ ಮಳಿಗೆಗಳು ಗಮನ ಸೆಳೆದವು.

ಬಿಬಿಎ ವಿದ್ಯಾರ್ಥಿಗಳು ಮ್ಯಾನೇಜಮೆಂಟ್ ವಿಷಯದ ವಿವಿಧ ಆಯಾಮಗಳ ಮೇಲೆ ತಾವು ತಯಾರಿಸಿದ ವಿಭಿನ್ನ ಮಾದರಿಗಳನ್ನು ಪ್ರದರ್ಶಿಸಿ ಅವುಗಳ ಕಾರ್ಯವಿಧಾನವನ್ನು ವಿವರಿಸಿದರು. ಕಾರ್ಯಕ್ರಮದ ಪ್ರಯುಕ್ತವಿದ್ಯಾರ್ಥಿಗಳಿಂದ ಸ್ಥಾಪಿಸಲ್ಪಟ್ಟ ವಿವಿಧ ವ್ಯಾಪಾರಿ ಮಳಿಗೆಗಳು ಗಮನ ಸೆಳೆದವು.

Share this article