ಮೆಸ್ಕಾಂ ವೈಫಲ್ಯ: ಇಂದು ಬಿಜೆಪಿ ಪಂಜಿನ ಮೆರವಣಿಗೆ

KannadaprabhaNewsNetwork |  
Published : Oct 28, 2026, 02:30 AM IST
27ಗ್ಯಾರಂಟಿ | Kannada Prabha

ಸಾರಾಂಶ

ಬಿಜೆಪಿ ಉಡುಪಿ ನಗರ ವತಿಯಿಂದ ಬುಧವಾರ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಮೆಸ್ಕಾಂ ವೈಫಲ್ಯ ಖಂಡಿಸಿ ಪಂಜಿನ ಮೆರವಣಿಗೆ - ಪ್ರತಿಭಟನಾ ಜಾಥಾ ನಡೆಯಲಿದೆ. ಸಂಜೆ 6.30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್ ಬಳಿಯಿಂದ ಆರಂಭಗೊಳ್ಳುವ ಪಂಜಿನ ಮೆರವಣಿಗೆ ಕೆ. ಎಂ. ಮಾರ್ಗವಾಗಿ ಸಾಗಿ ಡಯಾನಾ ಸರ್ಕಲ್ ನಿಂದ ಮೆಸ್ಕಾಂ ಕಚೇರಿ ಬಳಿ ಸಮಾಪನಗೊಳ್ಳಲಿದೆ. ಉಡುಪಿ ಜಿಲ್ಲೆಯಾದ್ಯಂತ ನಿರಂತರ ಪವರ್ ಕಟ್, ಲೋ ವೋಲ್ಟೇಜ್ ಸಮಸ್ಯೆ, ವಿದ್ಯುತ್ ಕಣ್ಣಾಮುಚ್ಚಾಲೆ, ಟ್ರಾನ್ಸ್ ಫಾರ್ಮರ್ ಕೊರತೆ, ಕಳಪೆ ನಿರ್ವಹಣೆ, ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ಮೊದಲಾದ ಸಮಸ್ಯೆಗಳಿಂದ ಜಿಲ್ಲೆಯ ಜನತೆ ತೊಂದರೆ ಎದುರಿಸುವಂತಾಗಿದೆ.

ಉಡುಪಿ; ಬಿಜೆಪಿ ಉಡುಪಿ ನಗರ ವತಿಯಿಂದ ಬುಧವಾರ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಮೆಸ್ಕಾಂ ವೈಫಲ್ಯ ಖಂಡಿಸಿ ಪಂಜಿನ ಮೆರವಣಿಗೆ - ಪ್ರತಿಭಟನಾ ಜಾಥಾ ನಡೆಯಲಿದೆ. ಸಂಜೆ 6.30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್ ಬಳಿಯಿಂದ ಆರಂಭಗೊಳ್ಳುವ ಪಂಜಿನ ಮೆರವಣಿಗೆ ಕೆ. ಎಂ. ಮಾರ್ಗವಾಗಿ ಸಾಗಿ ಡಯಾನಾ ಸರ್ಕಲ್ ನಿಂದ ಮೆಸ್ಕಾಂ ಕಚೇರಿ ಬಳಿ ಸಮಾಪನಗೊಳ್ಳಲಿದೆ. ಉಡುಪಿ ಜಿಲ್ಲೆಯಾದ್ಯಂತ ನಿರಂತರ ಪವರ್ ಕಟ್, ಲೋ ವೋಲ್ಟೇಜ್ ಸಮಸ್ಯೆ, ವಿದ್ಯುತ್ ಕಣ್ಣಾಮುಚ್ಚಾಲೆ, ಟ್ರಾನ್ಸ್ ಫಾರ್ಮರ್ ಕೊರತೆ, ಕಳಪೆ ನಿರ್ವಹಣೆ, ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ಮೊದಲಾದ ಸಮಸ್ಯೆಗಳಿಂದ ಜಿಲ್ಲೆಯ ಜನತೆ ತೊಂದರೆ ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ತಕ್ಷಣ ಮೆಸ್ಕಾಂ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ ಜಿಲ್ಲೆಯ ಜನತೆಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಕ್ಕೆ: ಆಶ್ಲೇಷ ಬಲಿ ಪೂಜೆ ‘ದಿಟ್ಟಂ’ ಬದಲಾವಣೆಗೆ ವಿರೋಧ
ಮಹಾತ್ಮರ ಜಯಂತಿಯಲ್ಲಿ ಜನಜಾಗೃತಿ: ಪ್ರಮೋದ್ ಕುಮಾರ್