ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾಂ) ಮಂಗಳೂರು ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪ್ರೀಮಿಯರ್‌ಲೀಗ್ ಆಯೋಜಿಸಿದ ಸೀಜನ್-5 ಪಂದ್ಯಾಟ ಹಾಗೂ ಚಿತ್ರಕಲಾ ಸ್ಪರ್ಧೆ
ಮಂಗಳೂರು: ಮೆಸ್ಕಾಂ ಉದ್ಯೋಗಿಗಳು ಕ್ರೀಡಾ ಸ್ಫೂರ್ತಿ ಮೈಗೂಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ ಹೇಳಿದರು.
ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾಂ) ಮಂಗಳೂರು ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪ್ರೀಮಿಯರ್‌ಲೀಗ್ ಆಯೋಜಿಸಿದ ಸೀಜನ್-5 ಪಂದ್ಯಾಟ ಹಾಗೂ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಕ್ರೀಡೆ ನಮ್ಮ ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಅಗತ್ಯವಾಗಿದ್ದು, ದೈನಂದಿನ ಬದುಕಿನ ಭಾಗವಾಗಬೇಕು ಎಂದರು.
ಮೆಸ್ಕಾಂ ತಾಂತ್ರಿಕ ನಿರ್ದೇಶಕ ಹರೀಶ್ ಕುಮಾರ್ ವಿ., ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಆರ್ಥಿಕ ಸಲಹೆಗಾರ ದೇವರಾಜ್, ಕವಿಪ್ರನಿನಿ ಯೂನಿಯನ್‌ಗಳ ಪದಾಧಿಕಾರಿಗಳಾದ ಷಣ್ಮುಖಪ್ಪ, ಕೃಷ್ಣರಾಜ್, ನವೀನ್‌ಕುಮಾರ್, ಮಾರಪ್ಪ, ನಿತೇಶ್ ಮತ್ತಿತರರು ಇದ್ದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ ಮುಖ್ಯ ಅತಿಥಿಯಾಗಿ ವಿಜೇತರಿಗೆ ಬಹುಮಾನ ವಿತರಿಸಿದರು.
ವಿವಿಧ ತಂಡಗಳು: ಪಂದ್ಯಾಟದಲ್ಲಿ ಮೆಸ್ಕಾಂ, ಕೆಪಿಟಿಸಿಎಲ್, ವಿಶೇಷ ಆಹ್ವಾನಿತರಾಗಿ ದ.ಕ. ಜಿಲ್ಲಾಧಿಕಾರಿಗಳ ಕಚೇರಿ, ದ.ಕ. ಜಿಲ್ಲಾ ಪಂಚಾಯಿತಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ತಂಡಗಳು ಭಾಗವಹಿಸಿದ್ದವು. ಕ್ರೀಡಾಪಟುಗಳಿಗೆ ಸಿದ್ದಲಿಂಗಪ್ಪ ಮತ್ತು ರಮೇಶ್ ಶರಣಪ್ಪ ಪ್ರಮಾಣ ವಚನ ಬೋಧಿಸಿದರು. ಬ್ಯಾಡ್ಮಿಂಟನ್ ಸೀಜನ್- 5 ಪಂದ್ಯಾಟ ಆಯೋಜನಾ ಸಮಿತಿಯ ಪ್ರಭಾತ್ ಜೋಶಿ ಪಂದ್ಯಾಟದ ಸ್ವರೂಪದ ಕುರಿತು ಮಾಹಿತಿ ನೀಡಿದರು. ಪುಷ್ಪರಾಜ್ ಸ್ವಾಗತಿಸಿದರು. ಬಿಂದು ವಂದಿಸಿದರು. ಬೀನಾ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.