ಮಂಗಳೂರು: ಅಭಿವೃದ್ಧಿ ಪರ ಚರ್ಚೆ ಮಾಡದಂತೆ ಜನರ ದಿಕ್ಕು ತಪ್ಪಿಸಲು ಜನಪ್ರತಿನಿಧಿಗಳು ಲವ್ ಜಿಹಾದ್, ಮತಾಂತರ ಇಂತಹ ವಿಚಾರಗಳನ್ನು ಮುನ್ನಲೆಗೆ ತಂದು ಚರ್ಚಿಸುತ್ತಾರೆ ಎಂದು ವಕೀಲ, ಹೋರಾಟಗಾರ ಸುಧೀರ್ ಮುರೊಳ್ಳಿ ಹೇಳಿದರು.
ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು ಅಭಿವೃದ್ಧಿ ಪರ ಪ್ರಶ್ನಿಸುತ್ತಾರೆ ಎಂದು ಯಾವುದೇ ಪುರಾವೆಗಳು ಇಲ್ಲದ ಲವ್‌ಜಿಹಾದ್, ಮತಾಂತರದಂತಹ ವಿಚಾರಗಳನ್ನು ಜನರ ಮುಂದಿಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪುಸ್ತಕಗಳಿಂದ ಜನರಲ್ಲಿ ಜಾಗೃತಿ ಮೂಡಲಿದ್ದು, ಇಂತಹ ಪುಸ್ತಕಗಳು ಮನೆಯಂಗಳದಲ್ಲಿ ಬಿಡುಗಡೆಯಾಗಿ ಚರ್ಚೆಗೊಳಪಡಬೇಕು ಎಂದರು.
ಚಿಂತಕ ಲಕ್ಷ್ಮೀಶ ಗಬ್ಬಲಡ್ಕ ಉದ್ಘಾಟಿಸಿ ಮಾತನಾಡಿ, ಎಂಜಿ ಹೆಗಡೆ ಅಪಾರ ಶ್ರಮ ಹಾಕಿ, ಅಧ್ಯಯನ ನಡೆಸಿ, ಅವರೊಳಗಿನ ವಕೀಲ ಬುದ್ದಿ ಉಪಯೋಗಿಸಿ ಈ ಪುಸ್ತಕ ಬರೆದಿದ್ದಾರೆ. ಭಾರತದಂತಹ ಭಿನ್ನ ಸಂಸ್ಕೃತಿ, ಆರಾಧನಾ ಪದ್ಧತಿಯ ದೇಶದಲ್ಲಿ ಇಂತಹ ವಿಚಾರಗಳ ಬಗ್ಗೆ ಮುಕ್ತ ಚರ್ಚೆಯಾದಾಗ ಸತ್ಯಾಸತ್ಯತೆ ತಿಳಿಯಲಿದೆ ಎಂದರು.ಪುಸ್ತಕದ ಕರ್ತೃ ಎಂಜಿ ಹೆಗಡೆ ಮಾತನಾಡಿ, ಕಳೆದ ಎರಡು ದಶಕಗಳಿಂದ ಲವ್‌ಜಿಹಾದ್, ಮತಾಂತರ, ಮದರಸದಲ್ಲಿ ಭಯೋತ್ಪಾದನೆ ಮುಂತಾದವುಗಳ ಬಗ್ಗೆ ಕೇಳಿಕೊಂಡಿದ್ದೇನೆ. ಇದರಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರ ತಪ್ಪೇ ಎಂಬುದರ ಸತ್ಯದ ಅನಾವರಣವೇ ಈ ಪುಸ್ತಕ. ಕರಾವಳಿ, ಮಲೆನಾಡು, ಮತ್ತಿತರ ಭಾಗದ 14 ಜಿಲ್ಲೆಗಳ ಸುಮಾರು 350 ಠಾಣೆಗಳಿಂದ ಆರ್‌ಟಿಐ ಮೂಲಕ ಪಡೆದ ಮಾಹಿತಿ ಹಾಗೂ ವಿಮರ್ಶೆ. ರಾಜ್ಯ ಗೃಹ ಇಲಾಖೆಗೆ ನೀಡಿದ ದೂರು, ಮನವಿಗಳ ಕುರಿತ ವಿವರ, ರಾಷ್ಟ್ರದಲ್ಲಿ ಉಲ್ಲೇಖಗೊಂಡ 11 ಲವ್ ಜಿಹಾದ್ ಪ್ರಕರಣಗಳ ತನಿಖಾ ಮಾಹಿತಿ, ನ್ಯಾಯಾಲಯದ ತೀರ್ಪುಗಳ ವಿವರ ಈ ಪುಸ್ತಕದಲ್ಲಿದೆ ಎಂದರು.ಕಳೆದ ಹತ್ತು ವರ್ಷಗಳಲ್ಲಿ ಈ 14 ಜಿಲ್ಲೆಗಳಲ್ಲಿ ಯಾವೊಬ್ಬ ಶಾಸಕರೂ ಲವ್‌ಜಿಹಾದ್, ಮತಾಂತರ, ಮದರಸಗಳಲ್ಲಿ ಭಯೋತ್ಪಾದನೆ ಬಗ್ಗೆ ಒಂದೇ ಒಂದು ದೂರು, ಮನವಿ ನೀಡಿಲ್ಲ. ಸಮಾಜದಲ್ಲಿ ಭಯ ಬಂದಿದೆ ಎಂದರೆ ಈ ಮೂರು ಕಾರಣಗಳಿಂದ. ಎನ್‌ಐಎ 11 ಕೇಸ್‌ಗಳ ತನಿಖೆ ಮಾಡಿದೆ. ಇದು ಲವ್‌ಜಿಹಾದ್ ಅಲ್ಲ ಎಂದು ಅಮಿತ್‌ಷಾ ಘೋಷಣೆ ಮಾಡಿದ್ದರು ಎಂದರು. ವಕೀಲ, ಪುಸ್ತಕದ ಪ್ರಕಾಶಕ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ನಂದಗೋಪಾಲ್, ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಪ್ರಮುಖರಾದ ಕೆ. ಬಿ. ರಾಜರಾಮ್ ಉಪ್ಪಿನಂಗಡಿ, ಗಣೇಶ್ ಪೂಜಾರಿ, ಭರತ್ ಕನ್ನಡ್ಕ ಮತ್ತಿತರರು ಇದ್ದರು. ರವಿ ಪೂಜಾರಿ ಸೂರಿಂಜೆ ಸ್ವಾಗತಿಸಿದರು.
ಕಾಂಗ್ರೆಸ್ ಮುಖಂಡ, ಲೇಖಕ ಎಂ.ಜಿ.ಹೆಗಡೆ ಅವರ ‘ಲವ್ ಜಿಹಾದ್ ಮತ್ತು ಮತಾಂತರ’ ಪ್ರಚಾರ ಮತ್ತು ವಾಸ್ತವ ಪುಸ್ತಕವನ್ನು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಚಿಂತಕ ಲಕ್ಷ್ಮೀಶ ಗಬ್ಬಲಡ್ಕ ಉದ್ಘಾಟಿಸಿ ಮಾತನಾಡಿ, ಎಂಜಿ ಹೆಗಡೆ ಅಪಾರ ಶ್ರಮ ಹಾಕಿ, ಅಧ್ಯಯನ ನಡೆಸಿ, ಅವರೊಳಗಿನ ವಕೀಲ ಬುದ್ದಿ ಉಪಯೋಗಿಸಿ ಈ ಪುಸ್ತಕ ಬರೆದಿದ್ದಾರೆ. ಭಾರತದಂತಹ ಭಿನ್ನ ಸಂಸ್ಕೃತಿ, ಆರಾಧನಾ ಪದ್ಧತಿಯ ದೇಶದಲ್ಲಿ ಇಂತಹ ವಿಚಾರಗಳ ಬಗ್ಗೆ ಮುಕ್ತ ಚರ್ಚೆಯಾದಾಗ ಸತ್ಯಾಸತ್ಯತೆ ತಿಳಿಯಲಿದೆ ಎಂದರು.
ವಕೀಲ, ಪುಸ್ತಕದ ಪ್ರಕಾಶಕ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ನಂದಗೋಪಾಲ್, ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಪ್ರಮುಖರಾದ ಕೆ. ಬಿ. ರಾಜರಾಮ್ ಉಪ್ಪಿನಂಗಡಿ, ಗಣೇಶ್ ಪೂಜಾರಿ, ಭರತ್ ಕನ್ನಡ್ಕ ಮತ್ತಿತರರು ಇದ್ದರು. ರವಿ ಪೂಜಾರಿ ಸೂರಿಂಜೆ ಸ್ವಾಗತಿಸಿದರು.