ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಮೆಮೊರಿಯಲ್ ಸಂಧ್ಯಾ ಕಾಲೇಜು ವತಿಯಿಂದ ‘ನೋ ಯುವರ್ ವರ್ಲ್ಡ್’ ಎಂಬ ಅಂತರ್‌ಕಾಲೇಜು ಕ್ವಿಜ್ ಸ್ಪರ್ಧೆ ಕಾಲೇಜಿನ ಟಿ. ಮೋಹನದಾಸ್ ಪೈ ಪ್ಲಾಟಿನಂ ಜೂಬಿಲಿ ಸಭಾಂಗಣದಲ್ಲಿ ನೆರವೇರಿತು. ಸ್ಪರ್ಧೆಯನ್ನು ಮಣಿಪಾಲ ಐಎಸ್‌ಎ ಫೌಂಡೇಶನ್ ನ ಡಾ. ಪ್ರಭಾಕರ ಶಾಸ್ತ್ರಿ ಉದ್ಘಾಟಿಸಿದರು.
ಉಡುಪಿ ಜ್ಞಾನಸುದಾ ಕಾಲೇಜಿನ ಸುಮುಖ ರಾವ್ ಬಿ.ಎಸ್ ಮತ್ತು ವಂಶೀ ಕೃಷ್ಣ 3,000 ರು. ನಗದು ಮತ್ತು ಅದೇ ಕಾಲೇಜಿನ ಮನೀಷ್ ಬಿಲ್ಲವ ಮತ್ತು ರಿತಿಕ್ ಎನ್. ಶೆಟ್ಟಿ ಅವರು 2,000 ರು. ನಗದು ಬಹುಮಾನ, ತೃತೀಯ ಸ್ಥಾನ ಗಳಿಸಿದರು. ಜೊತೆಗೆ 1,000 ರು. ನಗದು ಮೊತ್ತದ ಮೂರು ಸಮಾಧಾನ ಬಹುಮಾನಗಳನ್ನು ಕ್ರಮವಾಗಿ ಕ್ರಿಯೇಟಿವ್ ಪಿಯು ಕಾಲೇಜು, ಕಾರ್ಕಳ ಚಿಂತನ್ ಮನು ಹೆಗ್ಡೆ ಮತ್ತು ಮಿಹಿರ್ ಹೆಗ್ಡೆ, ಸೇಂಟ್ ಮೇರಿಸ್ ಪಿಯು ಕಾಲೇಜು, ಕುಂದಾಪುರದ ಅಲೀಸ್ಟನ್ ಮತ್ತು ಪೃಥ್ವಿರಾಜ್ ಗಾಣಿಗ, ಹಾಗೂ ಜ್ಞಾನಸುಧಾ ಕಾಲೇಜು, ಕಾರ್ಕಳದ ಅನುಷ್ಕಾ ಹೆಗ್ಡೆ ಮತ್ತು ಪ್ರಥುಲ್ ಡಿಸೋಝಾ ಅವರಿಗೆ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಬಿಸಿಎ ಸಂಯೋಜಕ ಡಾ. ವಿಶ್ವನಾಥ್ ಪೈ, ಡಾ. ಪ್ರಭಾಕರ ಶಾಸ್ತ್ರಿ ಜ್ಞಾನಾಧಾರಿತ ಚಿಂತನೆಯ ಮಹತ್ವದ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಡಾ. ದೇವೀದಾಸ್ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಅಧ್ಯಕ್ಷ ಧೀರಜ್ ಮತ್ತು ನಂದನ್ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೋಗ್ರಾಮರ್ ಕು.ಚೇತನಾ ಮತ್ತು ಇಂಗ್ಲಿಷ್ ವಿಭಾಗದ ಉಪನ್ಯಾಸಕ ಸ್ಟಾಲಿನ್ ಡಾನ್ಸನ್ ಡಿಸೋಝಾ ನಿರ್ವಹಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ವಿಘ್ನೇಶ್ ಭಟ್ ವಂದಿಸಿದರು.