ಮೈಕ್ರೋ ಕಿರಿಕಿರಿ ಫೈನಾನ್ಸ್‌ !

KannadaprabhaNewsNetwork |  
Published : Jan 30, 2025, 12:30 AM IST
ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಮನೆ ಬಿಟ್ಟ ಕುಂಟುಂಬ | Kannada Prabha

ಸಾರಾಂಶ

ರಾಜ್ಯದ ಮುಖ್ಯಮಂತ್ರಿಗಳ ಮಾತಿಗೆ ಕಿಮ್ಮತ್ತು ಕೊಡದ ಫೈನಾನ್ಸ್ ಕಂಪನಿಗಳು. ಗೃಹ ಸಚಿವರ ಕ್ಷೇತ್ರದಲ್ಲಿ ಒಂದೇ ದಿನ ಎರಡು ಕಡೆ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಒಂದು ಕುಟುಂಬ ಊರು ಬಿಟ್ಟು ಹೋದರೆ. ಇನ್ನೊಂದು ಗ್ರಾಮದಲ್ಲಿ ಫೈನಾನ್ಸ್ ಸಾಲ ತಿರಿಸಲಾಗದೆ ೩೦ ಮಾತ್ರೆ ತಗೆದುಕೊಂಡು ಆತ್ಮಹತ್ಯೆಗೆ ಯತ್ನವಾಗಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ರಾಜ್ಯದ ಮುಖ್ಯಮಂತ್ರಿಗಳ ಮಾತಿಗೆ ಕಿಮ್ಮತ್ತು ಕೊಡದ ಫೈನಾನ್ಸ್ ಕಂಪನಿಗಳು. ಗೃಹ ಸಚಿವರ ಕ್ಷೇತ್ರದಲ್ಲಿ ಒಂದೇ ದಿನ ಎರಡು ಕಡೆ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಒಂದು ಕುಟುಂಬ ಊರು ಬಿಟ್ಟು ಹೋದರೆ. ಇನ್ನೊಂದು ಗ್ರಾಮದಲ್ಲಿ ಫೈನಾನ್ಸ್ ಸಾಲ ತಿರಿಸಲಾಗದೆ ೩೦ ಮಾತ್ರೆ ತಗೆದುಕೊಂಡು ಆತ್ಮಹತ್ಯೆಗೆ ಯತ್ನವಾಗಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಕುರಂಕೋಟೆ ಗ್ರಾಮದ ವಿನೂತ, ಮಾರುತಿ ದಂಪತಿ ಫೈವ್ ಸ್ಟಾರ್ ಫೈನಾನ್ಸ್ ಕಂಪನಿಯಲ್ಲಿ ೨ ಲಕ್ಷ ೫೦ ಸಾವಿರ ಹಣವನ್ನ ಸಾಲ ಪಡೆದುಕೊಂಡಿದ್ದಾರೆ. ಸಾಲ ಪಡೆದ ನಂತರ ೪ ಲಕ್ಷದ ೭೦ ಸಾವಿರ ಹಣವನ್ನ ಪಾವತಿಸಿದರೂ ಇನ್ನೂ ಸಾಲ ಬಾಕಿ ಇದೆ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಉಳಿಕೆ ಹಣ ನೀಡದಿದ್ದರೆ ಮನೆಯವರ ಮಾನ ಹರಾಜು ಹಾಕುತ್ತೇವೆ ಎಂದು ಬೆದರಿಕೆ. ಮನೆಯ ಗೋಡೆ ಮೇಲೆ ಫೈವ್ ಸ್ಟಾರ್ ಎಂದು ಬರೆದು ಕಿರುಕುಳಕ್ಕೆ ಹೆದರಿ ದಂಪತಿ ಹಾಗೂ ತಮ್ಮ ವಿಕಲಚೇತನ ಮಕ್ಕಳನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದ್ದು, ಫೈನಾನ್ಸ್ ಸಿಬ್ಬಂದಿ ಮನೆ ಬಂದು ಅವಾಚ್ಯ ಶಬ್ದಗಳೊಂದಿಗೆ ಬೆದರಿಕೆ ಹಾಕಿ, ಗೋಡೆ ಮೇಲೆ ಕಂಪನಿಯ ಹೆಸರು ಬರೆದಿರುವುದು ಸಾರ್ವಜನಿಕರು ಫೈನಾನ್ಸ್ ಕಂಪನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಅಳಾಲಸಂದ್ರ ಸಮೀಪ ಇರುವ ಹನುಮಂತಪುರ ಗ್ರಾಮದ ಮಂಗಳಮ್ಮ (೪೫) ಎನ್ನುವ ಮಹಿಳೆ ಪಟ್ಟಣ ಗ್ರಾಮೀಣ ಕೂಟ ಫೈನಾನ್ಸ್ ಕಂಪನಿಯಿಂದ ೨ ಲಕ್ಷ, ಎಲ್‌ಎನ್‌ಟಿ ಯಲ್ಲಿ ೭೦ ಸಾವಿರ, ಆಶೀರ್ವಾದ ಕಂಪನಿಯಲ್ಲಿ ೮೦ಸಾವಿರ ಸಾಲ ಪಡೆದುಕೊಂಡಿದ್ದಾರೆ. ಗ್ರಾಮೀಣ ಕೂಟದ ಫೈನಾನ್ಸ್ ಕಂಪನಿಯ ಸಿಬ್ಬಂದಿಯವರು ಹಣ ಕಟ್ಟುವಂತೆ ಕಿರುಕುಳ ನೀಡಿದ ಹಿನ್ನೆಲೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.ಗ್ರಾಮೀಣ ಕೂಟದ ಫೈನಾನ್ಸ್ ಕಂಪನಿಯಿಂದ ಮಹಿಳೆ ೨ ಲಕ್ಷ ಸಾಲ ಪಡೆದ ಹಣದಲ್ಲಿ ೪೦ ಕಂತುಗಳನ್ನು ಮಹಿಳೆ ಕಟ್ಟಿದ್ದಾರೆ. ಇನ್ನೂ ೪೨ ಕಂತು ಬಾಕಿ ಇದೆ ಎಂದು ಹದಿನೈದು ದಿನಕ್ಕೊಮ್ಮೆ ೧೬೭೯ ರು. ಹಣವನ್ನ ಕಟ್ಟುತ್ತಿದ್ದರು ಎನ್ನಲಾಗಿದೆ. ಮಹಿಳಾ ಸಂಘದಲ್ಲಿ ಒಟ್ಟು ಮೂರು ಮಹಿಳೆಯ ಸಾಲದ ಹಣವನ್ನ ಪಡೆದು ಕಟ್ಟುತ್ತಿದ್ದರು ಎಂದು ತಿಳಿದುಬಂದಿದೆ. ಫೈನಾನ್ಸ್ ಕಂಪನಿಯವರು ಹಣವನ್ನ ಕಟ್ಟಲೇಬೇಕು ಎಂದು ಒತ್ತಡ ಹಾಕಿದ್ದು, ಬುಧವಾರದ ಕಂತು ಕಟ್ಟಬೇಕಾಗಿತ್ತು. ಫೈನಾನ್ಸ್ ಕಂಪನಿಯವರು ಮನೆಯ ಮುಂದೆ ಗಲಾಟೆ ಮಾಡುತ್ತಾರೆ ಎಂದು ಹೆದರಿ ಮಹಿಳೆ ಮನೆಯಲ್ಲಿದ್ದ ೩೦ ಬಿಪಿ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಎರಡು ಪ್ರಕರಣಗಳನ್ನ ಗಂಭೀರವಾಗಿ ತೆಗೆದುಕೊಂಡು ಕೊರಟಗೆರೆ ಪೊಲೀಸ್ ಠಾಣೆ ಹಾಗೂ ಕೋಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನೆಡೆಸುತ್ತಿದ್ದಾರೆ ಎನ್ನಲಾಗಿದೆ.ಕೋಟ್‌....

ನಮ್ಮ ಕಂಪನಿ ೩೦ ವರ್ಷದಿಂದ ಸಾಲವನ್ನು ನೀಡಿಕೊಂಡು ಬರಲಾಗುತ್ತಿದೆ. ತಾಲೂಕಿನಲ್ಲಿ ೫೫೦೦ ಜನರಿಗೆ ಒಟ್ಟು ೨೦ ಕೋಟಿ ಹಣವನ್ನು ಸಾಲವಾಗಿ ನೀಡಲಾಗಿದೆ. ಆರ್‌ಬಿಐ ಕಾನೂನಿನ ಪ್ರಕಾರ ೧೮ ರಿಂದ ೨೨ ರಷ್ಟು ಬಡ್ಡಿಯನ್ನ ಹಾಕಲಾಗುತ್ತದೆ. ತಕ್ಷಣಕ್ಕೆ ಸಾಲ ತೀರಿಸಲಾಗದವರು ಕಾಲವಕಾಶ ನೀಡಲಾಗುತ್ತಿದೆ. ನಮ್ಮ ಸಿಬ್ಬಂದಿವರು ಯಾರು ಕಿರುಕುಳ ನೀಡಿಲ್ಲ. ಹಾಗೇನಾದರೂ ಕಿರುಕುಳ ನೀಡಿದರೆ ಪುಸ್ತಕದ ಹಿಂಬಾಗ ನಮ್ಮ ಮೇಲಾಧಿಕಾರಿಗಳ ನಂಬರ್ ಇದೆ ಅವರಿಗೆ ತಿಳಿಸಬಹುದು. ಶಿವಲಿಂಗೇಗೌಡ. ಗ್ರಾಮೀಣ ಕೂಟದ ವಿಭಾಗೀಯ ವ್ಯವಸ್ಥಾಪಕತುಮಕೂರು ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನಲ್ಲಿರುವ ೧೮ ಫೈನಾನ್ಸ್ ಕಂಪನಿಯವರ ಜೊತೆ ಸಭೆ ಮಾಡಲಾಗಿದೆ. ಅವರು ಯಾರಿಗೆ ಸಾಲ ನೀಡಿದ್ದಾರೆ, ಅವರಿಗೆ ಯಾವುದೇ ಕಿರುಕುಳ ನೀಡದಂತೆ ತಿಳಿಸಲಾಗಿದೆ. ಅವರಿಗೆ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಸೂಚನೆ ನೀಡಲಾಗಿದೆ. ಖಾಸಗಿ ಕಂಪನಿಯವರು ಜನರ ಮೇಲೆ ದಬ್ಬಾಳಿಕೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

ಕೆ.ಮಂಜುನಾಥ್ ಕೊರಟಗೆರೆ ತಹಸೀಲ್ದಾರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಕಬ್ಬನ್‌, ಲಾಲ್‌ಬಾಗ್‌ ರೀತಿಯಲ್ಲಿ ಇನ್ನೊಂದು ದೊಡ್ಡ ಪಾರ್ಕ್‌ ನಿರ್ಮಾಣ
ಬೆಂಗಳೂರು ನಗರ ವಿವಿ ಪದವಿ ಪ್ರಶ್ನೆ ಪತ್ರಿಕೆ ಸೋರಿಕೆ: ಎನ್‌ಎಸ್‌ಯುಐ ಆರೋಪ